ಕುಮಾರಸ್ವಾಮಿ ಸಿಎಂ ಆಗಿರುವುದು ಕನ್ನಡ ಜನರ ಸೇವೆಗೆ ಹೊರತು ಕಾಂಗ್ರೆಸ್ ಸೇವೆಗಾಗಿ ಅಲ್ಲ: ಬಿಎಸ್ ವೈ
"ಕುಮಾರಸ್ವಾಮಿ ಕನ್ನಡ ಜನತೆಯ ಕ್ಷಮೆ ಯಾಚಿಸಬೇಕು. ಅವರು ಕನ್ನಡ ನಾಡಿನ ಜನತೆ ಸೇವೆಗಾಗಿ ಸಿಎಂ ಆಗಿದ್ದಾರೆ ಹೊರತು ಕಾಂಗ್ರೆಸ್ ಸೇವೆಗಾಗಿ ಅಲ್ಲ ಎನ್ನುವುದನ್ನು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ

Published On :
ಬೆಂಗಳೂರು: "ಕುಮಾರಸ್ವಾಮಿ ಕನ್ನಡ ಜನತೆಯ ಕ್ಷಮೆ ಯಾಚಿಸಬೇಕು. ಅವರು ಕನ್ನಡ ನಾಡಿನ ಜನತೆ ಸೇವೆಗಾಗಿ ಸಿಎಂ ಆಗಿದ್ದಾರೆ ಹೊರತು ಕಾಂಗ್ರೆಸ್ ಸೇವೆಗಾಗಿ ಅಲ್ಲ ಎನ್ನುವುದನ್ನು ನಾನು ಅವರಿಗೆ ನೆನಪಿಸಲು ಬಯಸುತ್ತೇನೆ ಅವರು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮುಖ್ಯಮಂತ್ರಿಯಾಗಿರಲು ಸಾಧ್ಯವಿಲ್ಲ" ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡ್ದ್ದ ರಾಜ್ಯ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಸುದ್ದಿಗಾರರೊಂದಿಗೆ ಮಾತನಾಡಿದರು."ನಾನು ಕರ್ನಾಟಕದ ಜನರ ಮುಲಾಜಿನಲ್ಲಿಲ್ಲ, ಕಾಂಗ್ರೆಸ್ ಮುಲಾಜಿನಲ್ಲಿದ್ದೇನೆ ಎನ್ನುವ ಅವರ ಹೇಳಿಕೆ ನಾಡಿನ ಜನತೆಗೆ ಮಾಡಿದ ಅಪಚಾರ. ಹೀಗಾಗಿ ಅವರು ಯಾವ ಮುಲಾಜು ಇಲ್ಲದೆ ಜನರ ಕ್ಷಮೆಯಾಚಿಸಲಿ. " ಎಂದರು.
"ರೈತರ ಸಾಲಮನ್ನಾಸಂಬಂಧ ಕುಮಾರಸ್ವಾಮಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಇದೀಗ ಅವರು ಸಾಲಮನ್ನಾಗೆ ಒಂದು ವಾರದ ಕಾಲಾವಧಿ ಕೇಳಿದ್ದಾರೆ.ಒಂದು ವಾರ ಕಾಯುತ್ತೇವೆ, ಬಳಿಕ ಮತ್ತೆ ಹೋರಾಟ ನಡೆಸಲಿದ್ದೇವೆ." ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಂಗಳೂರು ಹೊರತು ರಾಜ್ಯದೆಲ್ಲೆಡೆ ಬಂದ್ ಯಶಸ್ವಿಯಾಗಿದೆ. ಬಂದ್ ಗಾಗಿ ಯಾವ ಸಂಘಟನೆಗಳ ಬೆಂಬಲ ಕೋರಿರಲಿಲ್ಲ. ಸರ್ಕಾರ ಬಂದ್ ಮಾಡದೆ ಇರಲು ಪೋಲೀಸರನ್ನು ಬಳಸಿದೆ, ಬಿಜೆಪಿಯ ಸಂಸದರು, ಶಾಸಕರನ್ನು ಬಂಧಿಸಲಾಗಿದೆ. ಹಾಗಾದರೆ ಈ ರಾಜ್ಯದಲ್ಲಿ ಶಾಂತಿಯುತ ಪ್ರತಿಭಟನೆಗೂ ಅವಕಾಶವಿಲ್ಲದೆ ಹೋಗಿದೆಯೆ? ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
BS Yeddyurappaಬಿಎಸ್ ಯಡಿಯೂರಪ್ಪHDKರೈತರ ಸಾಲಮನ್ನಾJDS-congressFarmers\' loan waiverಎಚ್ ಡಿಕೆಜೆಡಿಎಸ್-ಕಾಂಗ್ರೆಸ್\'
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


