ರಾಜ್ಯ

ಸ್ಥೈರ್ಯ ನಿಧಿಯ ಫಲಾನುಭವಿಗಳಲ್ಲಿ ಶೇ. 10 ರಷ್ಟು ಮಂದಿ ಮಾತ್ರ ವಿವೇಚನೆಯಿಂದ ಪರಿಹಾರ ಹಣ ಬಳಕೆ

ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆಯರಿಗೆ ನೆರವು ನೀಡುವ ಮೂಲಕ ಅವರಿಗೆ ಪುನರ್ ಜೀವನ ನೀಡುವ ಉದ್ದೇಶದಿಂದ ಸರ್ಕಾರ ಸ್ಥೈರ್ಯ ನಿಧಿಯನ್ನು ವಿವೇಚನೆಯಿಲ್ಲದೇ ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ

ಸ್ಥೈರ್ಯ ನಿಧಿಯ ಫಲಾನುಭವಿಗಳಲ್ಲಿ ಶೇ. 10 ರಷ್ಟು ಮಂದಿ ಮಾತ್ರ   ವಿವೇಚನೆಯಿಂದ ಪರಿಹಾರ ಹಣ ಬಳಕೆ
ಸಾಂದರ್ಭಿಕ ಚಿತ್ರ
Published On :
ಮಂಗಳೂರು : ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆಯರಿಗೆ ನೆರವು ನೀಡುವ ಮೂಲಕ ಅವರಿಗೆ ಪುನರ್ ಜೀವನ  ನೀಡುವ ಉದ್ದೇಶದಿಂದ ಸರ್ಕಾರ ಸ್ಥೈರ್ಯ ನಿಧಿಯನ್ನು 2015ರಲ್ಲಿ ಸ್ಥಾಪಿಸಿತ್ತು.
ಇದು ಪರಿಚಯವಾದಾಗಿನಿಂದಲೂ ಮಾರ್ಚ್ 2018ರವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 41 ಸಂತ್ರಸ್ತೆಯರು ಒಟ್ಟಾರೇ, 9.85 ಲಕ್ಷ ರೂಪಾಯಿ ಪರಿಹಾರವನ್ನು  ಪಡೆದುಕೊಂಡಿದ್ದಾರೆ.
ಈ ನಿಧಿ ಪರಿಚಯಿಸಿದ ಮೊದಲ ವರ್ಷದಲ್ಲಿ 20 ಸಂತ್ರಸ್ತೆಯರಿಗೆ 4.60 ಲಕ್ಷ ಪರಿಹಾರ ನೀಡಲಾಗಿದೆ. 2016-17 ರಲ್ಲಿ ಐವರು ಸಂತ್ರಸ್ತೆಯರು 1.25 ಲಕ್ಷ ಪರಿಹಾರ ಪಡೆದಿದ್ದಾರೆ. 2017-18 ರ ಅವಧಿಯಲ್ಲಿ 16 ಸಂತ್ರಸ್ತೆಯರು  ಒಟ್ಟು 4 ಲಕ್ಷ ಪಡೆದುಕೊಂಡಿದ್ದಾರೆ. ಈ ಅಂಕಿ ಅಂಶಗಳು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. 
ಈ ವರ್ಷದವರೆಗೂ ಮಂಗಳೂರು ಪೊಲೀಸರು 15 ಅತ್ಯಾಚಾರ ಪ್ರಕರಣ ದಾಖಲಿಸಿದ್ದರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಐವರು ಮಾತ್ರ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂಬ ಮಾಹಿತಿಯನ್ನು ಸ್ಥೈರ್ಯ ನಿಧಿಗೆ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.