ರಾಜ್ಯ

ಕಡೆಗೂ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ದಲಿತ ನಾಯಕ ಪರಮೇಶ್ವರ

ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಿ.ಪರಮೇಶ್ವರ ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿದ್ದಾರೆ. ಈ ಮೂಲಕ ದಲಿತ ನಾಯಕರೊಬ್ಬ ರಾಜ್ಯ ಸರ್ಕಾರದ ಉನ್ನತ ಸ್ಥಾನಕ್ಕೆ ಏರಿದಂತಾಗಿದೆ.

ಕಡೆಗೂ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ದಲಿತ ನಾಯಕ ಪರಮೇಶ್ವರ
ಜಿ ಪರಮೇಶ್ವರ
Published On :
ಬೆಂಗಳೂರು: ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಿ.ಪರಮೇಶ್ವರ ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿದ್ದಾರೆ. ಈ ಮೂಲಕ ದಲಿತ ನಾಯಕರೊಬ್ಬ ರಾಜ್ಯ ಸರ್ಕಾರದ ಉನ್ನತ ಸ್ಥಾನಕ್ಕೆ ಏರಿದಂತಾಗಿದೆ.
ಅಕ್ಟೋಬರ್ 2010 ರಿಂದ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ ಸುದೀರ್ಘಕಾಲ ಸೇವೆ ಸಲ್ಲಿಸಿದ ಪಕ್ಷದ ರಾಜ್ಯಾಧ್ಯಕ್ಷರೆನಿಸಿಕೊಂಡಿದ್ದರು. ಅಲ್ಲದೆ ನಿಷ್ಠಾವಂತ ರಾಜಕಾರಣಿ ಎಂದೂ ಗುರುತಿಸಿಕೊಂಡಿದ್ದಾರೆ.
ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ ಪರಮೇಶ್ವರ ರ್ವ ಶಿಕ್ಷಣತಜ್ಞ,, ಸದ್ವಿಚಾರಿ, ಮೃದುಭಾಷಿಯಾಗಿದ್ದಾರೆ.ಇವರು ರಾಜಕೀಯಕ್ಕೆ ಬರುವದಕ್ಕೆ ಮುನ್ನ ನಾನಾ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು
ಅಡಿಲೇಡ್ ವಿಶ್ವವಿದ್ಯಾಲಯದ ವೇಯ್ಟ್ ಅಗ್ರಿಕಲ್ಚರ್ ರಿಸರ್ಚ್ ಸೆಂಟರ್ ನಿಂದ ಸಸ್ಯ ಶರೀರವಿಜ್ಞಾನದಲ್ಲಿ ಪಿಎಚ್ ಡಿ ಪದವಿ ಪಡೆದ ಇವರು ತಮ್ಮ ಕುಟುಂಬ ಸ್ಥಾಪಿಸಿದ್ದ ಅವರು, ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆಡಳಿತಾಧಿಕಾರಿಯಾಗಿದ್ದರು,
ಬೆಂಗಳೂರಿನ ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯದಿಂದ ಅವರು ಕೃಷಿ ಕ್ಷೇತ್ರದಲ್ಲಿ ಬಿಎಸ್ಸಿ ಮತ್ತು ಎಂಎಸ್ಸಿ  ಪದವಿ ಪಡೆದಿದ್ದರು.
1989 ರಲ್ಲಿ ರಾಜೀವ್ ಗಾಂಧಿ ಅವರೊಂದಿಗಿನ ಅವರ ಭೇಟಿ ಜೀವನದಲ್ಲಿ ಮಹತ್ವದ ತಿರುವು ನೀಡಿತ್ತು.ಪರಮೇಶ್ವರ ಅವರು ದೆಹಲಿಯಲ್ಲಿ ಗಾಂಧಿಯವರನ್ನು ಭೇಟಿಯಾಗಿದ್ದಾಗ ಅವರಿಗೆ ರಾಜಕೀಯ ಪ್ರವೇಶಿಸುವ ಕುರಿತಂತೆ ಉತ್ಸುಕರಾದರು.
ನಂತರ ಅವರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಜಂಟಿ ಕಾರ್ಯದರ್ಶಿಯಾಗಿದ್ದರು. ಪಕ್ಷದಲ್ಲಿ ಪ್ರಕ್ಷುಬ್ಧ  ಸನ್ನಿವೇಶವುಂಟಾದಾಗ ಸಹ ಪಕ್ಷ ನಿಷ್ಠೆ ಪ್ರದರ್ಶಿಸಿದ ಹೆಗ್ಗಳಿಕೆ ಇವರದಾಗಿದೆ.
ಮಧುಗಿರಿ ಕ್ಷೇತ್ರದ  ವಿಧಾನಸಭೆ ಚುನಾವಣೆಗಾಗಿ ಸ್ಪರ್ಧಿಸಿದ ಪರಮೇಶ್ವರ್ 1989ರಲ್ಲಿ ಜನತಾ ದಳದ ತಮ್ಮ ನಿಕಟ ಪ್ರತಿಸ್ಪರ್ಧಿ ವಿರುದ್ಧ ಸೋಲು ಕಂಡಿದ್ದರು. ಇದು ಅವರ ಚುನಾವಣಾ ರಾಜಕೀಯದ ನಾಂದಿಯಾಗಿತ್ತು.
ಇದೇ ರೀತಿ 1999 ರ ವಿಧಾನಸಭೆ ಚುನಾವಣೆಯಲ್ಲಿ ಮಧುಗಿರಿಯಿಂದ ಸ್ಪರ್ಧಿಸಿದ್ದ ಪರಮೇಶ್ವರ್ ತಮ್ಮ ಎದುರಾಳಿಯನ್ನು  55,802 ಮತಗಳ ಅಂತರದಿಂದ ಸೋಲಿಸಿದ್ದರು.
ಎಸ್ ಎಂ ಕೃಷ್ಣ ಕ್ಯಾಬಿನೆಟ್ನಲ್ಲಿ ಉನ್ನತ ಶಿಕ್ಷಣ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿ ಕಾರ್ಯ ನಿರ್ವಹಿಸಿದ ಇವರು ಮೂರು ವರ್ಷಗಳ ಬಳಿಕ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಭಡ್ತಿ ಹೊಂದಿದರು. 003 ರಲ್ಲಿ, ಅವರು ಮಾಹಿತಿ ಮತ್ತು ಪ್ರಚಾರದ ಮಂತ್ರಿಯಾಗಿ ನೇಮಕಗೊಂಡರು.
2008ರಲ್ಲಿ ತಮ್ಮ ಕ್ಷೇತ್ರವನ್ನು ಬದಲಿಸಿದ ಪರಮೇಶ್ವರ ತುಮಕುರು ಜಿಲ್ಲೆ ಕೊರಟಗೆರೆಯಿಂದ ಚುನಾವಣೆಗೆ ನಿಂತರು. ಐದು ಬಾರಿ ಶಾಸಕರಾದ ಪರಮೇಶ್ವರಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಸಹ 2013ರ ಚುನಾವಣೆಯಲ್ಲಿ ಸೋಲು ಕಂಡರು.
ಹೀಗಾಗಿಯೂ ಸಹ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿ ಸ್ಥಾನ ಅಲಂಕರಿಸಿದ್ದು ಎಂಎಲ್ಸಿ ಆಗುವ ಮೂಲಕ ಅಧಿಕಾರ ಪದ ಏರಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲಿ ಕೊರಟಗೆರೆ ಕ್ಷೇತ್ರದಲ್ಲಿ ಸ್ಪರ್ಧಿಸಿದ ಪರಮೇಶ್ವರ ಜಯ ಗಳಿಸುವುದರೊಡನೆ ಇದೀಗ ರಾಜ್ಯದ ಉಪ ಮುಖ್ಯಮಂತ್ರಿಗಳಾಗಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಪಕ್ಷದ ಸಿದ್ದಾಂತದ ನಡುವೆ ಭಿನ್ನಾಭಿಪ್ರಾಯವಿದ್ದರೂ ಕೋಮು ಶಕ್ತಿಗಳನ್ನು ಅಧಿಕಾರದಿಂದ ದೂರವಿಡಲು ನಾವು ಒತ್ಟಾಗಿದ್ದೇವೆ ಎನ್ನುವುದಾಗಿ ಅವರು ಇತ್ತೀಚೆಗೆ ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.