ರಾಜ್ಯ

ಮಧ್ಯರಾತ್ರಿ ಕಾಂಗ್ರೆಸ್'ಗೆ ಐಟಿ ಶಾಕ್: ಬಾದಾಮಿ ರೆಸಾರ್ಟ್ ಮೇಲೆ ದಾಳಿ

ವಿಧಾನಸಬಾ ಚುನಾವಣೆಗೂ ಮುನ್ನವೇ ಬಾದಾಮಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ದೊಡ್ಡ ಶಾಕ್ ನೀಡಿದೆ...

ಮಧ್ಯರಾತ್ರಿ ಕಾಂಗ್ರೆಸ್'ಗೆ ಐಟಿ ಶಾಕ್: ಬಾದಾಮಿ ರೆಸಾರ್ಟ್ ಮೇಲೆ ದಾಳಿ
ಸಾಂದರ್ಭಿಕ ಚಿತ್ರ
Published On :
ಬಾಗಲಕೋಟೆ: ವಿಧಾನಸಬಾ ಚುನಾವಣೆಗೂ ಮುನ್ನವೇ ಬಾದಾಮಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸೋಮವಾರ ತಡರಾತ್ರಿ ದೊಡ್ಡ ಶಾಕ್ ನೀಡಿದೆ. 
ಕಾಂಗ್ರೆಸ್ ನಾಯಕರೊಬ್ಬರ ರೆಸಾರ್ಟ್ ಮತ್ತು ಹೋಟೆಲ್ ಮೇಲೆ ಐಟಿ ಅಧಿಕಾರಿಗಳು ಮಧ್ಯರಾತ್ರಿ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. 
ಕೃಷ್ಣ ಹೆರಿಟೇಜ್ ರೆಸಾರ್ಟ್ ಮೇಲೆ ಅಧಇಕಾರಿಗಳು ದಾಳಿ ನಡೆಸಿದ್ದು, ದಾಳಿ ನಡೆಸಿದ್ದ ಸಂದರ್ಭದಲ್ಲಿ ರೆಸಾರ್ಟ್ ನಲ್ಲಿ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಎಸ್.ಆರ್.ಪಾಟೀಲ್, ಎಂಎಲ್'ಸಿ ಸಿಎಂ ಇಬ್ರಾಹಿ ಸೇರಿದಂತೆ ಹಲವು ನಾಯಕರಿದ್ದರೆಂದು ತಿಳಿದುಬಂದಿದೆ. 
ಇದಲ್ಲದೆ, ಚುನಾವಣಾ ಪ್ರಚಾರಕ್ಕಾಗಿ ಬಾದಾಮಿಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ ಅವರೂ ಕೂಡ ಇದೇ ಸಂದರ್ಭದಲ್ಲಿ ರೆಸಾರ್ಟ್ ನಲ್ಲಿದ್ದರು ಎಂದು ವರದಿಗಳು ತಿಳಿಸಿವೆ. 
ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ. 
ಊಟಕ್ಕೆಂದು ಕಾಂಗ್ರೆಸ್ ನಾಯಕರು ರೆಸಾರ್ಟ್ ಗೆ ಬಂದ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿಯಾಗುತ್ತಿದ್ದಂತೆಯೇ ಸಿಎಂ ಇಬ್ರಾಹಿಂ ಅವರು ತಡರಾತ್ರಿ 2 ಗಂಟೆ ಸುಮಾರಿಗೆ ರೆಸಾರ್ಟ್ ಆವರಣವನ್ನು ಬಿಟ್ಟು ಹೊರ ಹೋಗಿದ್ದರು ಎಂದು ಖಾಸಗಿ ಟಿವಿ ಮಾಧ್ಯಮಗಳು ವರದಿಗಳಲ್ಲಿ ತಿಳಿಸಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.