’ಮತದಾನ’ ಪದ ನಿಷೇಧಕ್ಕೆ ಒತ್ತಾಯ: ಪಕ್ಷೇತರ ಅಭ್ಯರ್ಥಿಯ ಮೌನ ಪ್ರತಿಭಟನೆ
ಮತ ಹಾಕುವುದು ನಮ್ಮ ಹಕ್ಕು, ಅದು ದಾನವಲ್ಲ. ’ಮತದಾನ’ ಪದವನ್ನು ನಿಷೇಧಿಸಿ!" ಬೆಂಗಳೂರು ಶಿವಾಜಿನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಒತ್ತಾಯಿಸಿದ್ದಾರೆ.

Published On :
ಬೆಂಗಳೂರು: "ಮತ ಹಾಕುವುದು ನಮ್ಮ ಹಕ್ಕು, ಅದು ದಾನವಲ್ಲ. ’ಮತದಾನ’ ಪದವನ್ನು ನಿಷೇಧಿಸಿ!" ಬೆಂಗಳೂರು ಶಿವಾಜಿನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಒತ್ತಾಯಿಸಿದ್ದಾರೆ.
ಮತದಾನ ಎನ್ನುವ ಪರ ಬಳಕೆ ನಿಲ್ಲಿಸಬೇಕೆಂದು ಒತ್ತಾಯಿಸಿ ಶಿವಾಜಿನಗರ ಪಕ್ಷೇತರ ಅಭ್ಯರ್ಥಿ ಅಂಬ್ರೋಸ್ ಡಿ.ಮೆಲ್ಲೋ ಮೌನ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು ಶೇಷಾದ್ರಿ ರಸ್ತೆಯಲ್ಲಿರುವ ಮುಖ್ಯ ಚುನಾವಣಾಧಿಕಾರಿ ಕಛೇರಿಯ ಮುಂದೆ ಪ್ರತಿಭಟನೆಯಲ್ಲಿ ತೊಡಗಿದ್ದ ಅವರು ಚುನಾವಣೆ ವೇಳೆ ಮತದಾನ ಎನ್ನುವ ಪದ ಬಳಕೆಯಾಗಬಾರದು, ಮತ ಚಲಾಯಿಸುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಹೀಗಾಗಿ ಮತದಾನ ಪದಕ್ಕೆ ಬದಲು ಮತ ಹಾಕಿ ಎಂದು ಬಳಸಿ ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮತದಾನIndependent candidateKarnataka electionಕರ್ನಾಟಕ ಚುನಾವಣೆMathadaanaword banಸ್ವತಂತ್ರ ಅಭ್ಯರ್ಥಿಪದ ನಿಷೇಧ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


