ರಾಜ್ಯ

ದಾವಣಗೆರೆ: ಹನಿಟ್ರ್ಯಾಪ್​ ಮಾಡುತ್ತಿದ್ದ ದಂಪತಿಗಳ ಬಂಧನ

ಆಭರಣ ವ್ಯಾಪಾರಿಯನ್ನು ಹನಿಟ್ರ್ಯಾಪ್​ ಮಾಡಿ ಲಕ್ಷಾಂತರ ರೂ. ವಂಚಿಸುತ್ತಿದ್ದ ದಂಪತಿಗಳನ್ನು ದಾವಣಗೆರೆ ಜಿಲ್ಲಾ ಪೋಲೀಸರು ಬಂಧಿಸಿದ್ದಾರೆ.

ದಾವಣಗೆರೆ: ಹನಿಟ್ರ್ಯಾಪ್​ ಮಾಡುತ್ತಿದ್ದ ದಂಪತಿಗಳ ಬಂಧನ
ದಾವಣಗೆರೆ: ಹನಿಟ್ರ್ಯಾಪ್​ ಮಾಡುತ್ತಿದ್ದ ದಂಪತಿಗಳ ಬಂಧನ
Published On :
ದಾವಣಗೆರೆ: ಆಭರಣ ವ್ಯಾಪಾರಿಯನ್ನು ಹನಿಟ್ರ್ಯಾಪ್​ ಮಾಡಿ ಲಕ್ಷಾಂತರ ರೂ. ವಂಚಿಸುತ್ತಿದ್ದ ದಂಪತಿಗಳನ್ನು ದಾವಣಗೆರೆ ಜಿಲ್ಲಾ ಪೋಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವೆಂಕಟೇಶ (32) ರೇಖಾ (26) ಎಂದು ಗುರುತಿಸಲಾಗಿದ್ದು ವೆಂಕಟೇಶ್ ತನ್ನ ಪತ್ನಿ ರೇಖಾಳನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್​ ನಡೆಸುತ್ತಿದ್ದ. 
ಆಭರಣ ವ್ಯಾಪಾರಿ ಸುರೇಶನನ್ನು ಬಲೆಗೆ ಬೀಳಿಸಿಕೊಂಡ ರೇಖಾ ರ ಆತನನ್ನು ತನ್ನ ಮನೆಗೆ ಕರೆಸಕೊಂಡು ಪ್ರೇಮದ ನಾಟಕವಾಡಿ ಮರಳು ಮಾಡಿದ್ದಾಳೆ. ಕೋಣೆಗೆ ಕರೆದೊಯ್ದು ಅವನೊಡನೆ ಚಕ್ಕಂದವಾಡಿದ್ದಾಳೆ. ಇದನ್ನು ಆಕೆಯ ಪತಿ ವೆಂಕಟೇಶ್ ವೀಡಿಯೋ ಚಿತ್ರೀಕರಣ ಮಾಡಿ ಬ್ಲಾಕ್‌ಮೇಲ್ ಮಾಡಿದ್ದಾನೆ. 
ವ್ಯಾಪಾರಿ ಸುರೇಶ್ 15 ಲಕ್ಷ ನೀಡಬೇಕು ಎಂದು ಬ್ಲ್ಯಾಕ್​ ಮೇಲ್​ ಮಾಡಿದ್ದ ವೆಂಕಟೇಶ್ ಗೆ ವ್ಯಾಪಾರಿ ಐದು ಲಕ್ಷ ನೀಡಿದ್ದನೆಂದು ತಿಳಿದುಬಂದಿದೆ. ಮತ್ತೆ  10 ಲಕ್ಷ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ ದಂಪತಿಗಳ ವಿರುದ್ಧ ಆಭರಣ ವ್ಯಾಪಾರಿ ಪೋಲೀಸರಿಗೆ ದೂರಿತ್ತಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸವನಗರ ಪೊಲೀಸ್ ಠಾಣೆ ಪೊಲೀಸರು ಆರೋಪಿ ದಂಪತಿಗಳನ್ನು ಬಂಧಿಸಿ ಕಂಬಿಗಳ ಹಿಂದೆ ಕಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.