ಪುಂಡ ಯುವಕರಿಂದ ಫೇಸ್‌ಬುಕ್‌ಗೆ ಯುವತಿ ಫೋಟೋ ಅಪ್ಲೋಡ್; ನೊಂದು ಯುವತಿ, ತಂದೆ ಆತ್ಮಹತ್ಯೆ
ಪುಂಡ ಯುವಕರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವತಿಯ ಫೋಟೋ ಹಾಕಿದ್ದರಿಂದ ಮನನೊಂದು ಯುವತಿ ಮತ್ತು ಆಕೆಯ ತಂದೆ ಆತ್ಮಹತ್ಯೆ...

Published On :
ರಾಯಚೂರು: ಪುಂಡ ಯುವಕರು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವತಿಯ ಫೋಟೋ ಹಾಕಿದ್ದರಿಂದ ಮನನೊಂದು ಯುವತಿ ಮತ್ತು ಆಕೆಯ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಸ್ಕಿ ತಾಲೂಕಿನ ಗೌಡನಬಾವಿ ಗ್ರಾಮದಲ್ಲಿ ನಡೆದಿದೆ.
ಗೌಡನ ಗ್ರಾಮದ 20 ವರ್ಷದ ಬಸಲಿಂಗಮ್ಮ ಹಾಗೂ ಆಕೆಯ ತಂದೆ 55 ವರ್ಷದ ರಾಮನಗೌಡ ಆತ್ಮಹತ್ಯೆ ಶರಣಾದ ದುರ್ದೈವಿಗಳು. ಗ್ರಾಮದ ಕೆಲ ಪುಂಡ ಯುವಕರು ಬಸಲಿಂಗಮ್ಮಳ ಫೋಟೋವನ್ನು ಫೇಸ್ ಬುಕ್ ಗೆ ಅಪ್ ಲೋಡ್ ಮಾಡಿದ್ದರು.
ಇದನ್ನು ಕಂಡ ಬಸಲಿಂಗಮ್ಮ ಕಡೆಯವರು ಪುಂಡ ಹುಡುಗರನ್ನು ಪ್ರಶ್ನಿಸಿದಾಗ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಮನನೊಂದು ತಂದೆ ನೇಣು ಹಾಕಿಕೊಂಡರೇ, ಬಸಲಿಂಗಮ್ಮ ವಿಷ ಸೇವಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಪುಂಡ ಹುಡುಗರ ಬಂಧನ ಜಾಲ ಬೀಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


