ಮಂಗಳೂರು: 13 ವರ್ಷಗಳ ನಂತರ ಅತ್ಯಾಚಾರ ಆರೋಪಿ ಬಂಧನ
13 ವರ್ಷಗಳ ಹಿಂದೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಹಿತೇಶ್ ಗೌಡ ಬಂಧಿತ ಆರೋಪಿ...

Published On :
ಮಂಗಳೂರು: 13 ವರ್ಷಗಳ ಹಿಂದೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ. ಹಿತೇಶ್ ಗೌಡ ಬಂಧಿತ ಆರೋಪಿ.
ಹಿತೇಶ್ ಗೌಡ ಮತ್ತು ಗಿರೀಶ್ ಗ್ರಾಮಪಂಚಾಯತ್ ಸದಸ್ಯೆ ಮೇಲೆ ಆಕೆಯ ಪತಿ ಮತ್ತು ಮಕ್ಕಳ ಮುಂದೆ ಅತ್ಯಾಚಾರ ನಡೆಸಿದರು.
2004ರ ರಕ್ಷಾ ಬಂಧನ ದಿನದಂದು ಕರಾಯ ಗ್ರಾಮದಲ್ಲಿ ಅತ್ಯಾಚಾರ ನಡೆದಿತ್ತು, ಘಟನೆ ನಡೆದ ದಿನದಿಂದ ಆರೋಪಿ ಪರಾರಿಯಾಗಿದ್ದ. ಅಂದು ಗ್ರಾಮವನ್ನು ತೊರೆದಿದ್ದ ಹಿತೇಶ್ ಗೌಡ, ತನ್ನ ಕುಟುಂಬಸ್ಥರ ಎಲ್ಲರ ಸಂಪರ್ಕವನ್ನು ತೊರೆದಿದ್ದ, ಆತ ಸಿಗದಿದ್ದ ಹಿನ್ನೆಲೆಯಲ್ಲಿ ಆತನ ಎಲ್ಲ ಸಂಬಂಧಿಕರು ಊರು ತೊರೆದಿದ್ದರು. ತನ್ನ ಮದುವೆಗೊ ಆತ ಯಾರನ್ನೂ ಆಹ್ವಾನಿಸಿರಲಿಲ್ಲ, ಮತ್ತೊಬ್ಬ ಆರೋಪಿ ಗಿರೀಶ್ ಪತ್ತೆಗಾಗಿಯೂ ಕೂಡ ಪೊಲೀಸರು ಬಲೆ ಬೀಸಿದ್ದಾರೆ.
ಇದೊಂದು ಕಷ್ಟಕರವಾದ ಕೇಸ್ ಆಗಿತ್ತು. 13 ವರ್ಷಗಳ ನಂತರ ಆರೋಪಿ ಬಂಧಿತನಾಗಿದ್ದಾನೆ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಂದ ಕುಮಾರ್ ಹೇಳಿದ್ದಾರೆ. ಹಿತೇಶ್ ಗೌಡ ಮತ್ತು ಆತನ ಸ್ನೇಹಿತನಿಗೆ ಜಾಮೀನು ದೊರೆತ ಕೂಡಲೇ ಊರು ಬಿಟ್ಟು ಪರಾರಿಯಾಗಿದ್ದರು.
ಮದುವೆ ನಂತರ ಹಿತೇಶ್ ಗೌಡ ಮುಂಬಯಿನಿಂದ ಬೆಂಗಳೂರಿಗೆ ಬಂದಿದ್ದ, ಒಂದು ಮಗನ ತಂದೆಯಾಗಿರುವ ಹಿತೇಶ್ ಹೆಂಡತಿ ಸಂಪಾದನೆಯಲ್ಲಿ ಜೀವನ ಮಾಡುತ್ತಿದ್ದೆ. ಆತನ ಅಕ್ಕ ಪಕ್ಕದ ಮನೆಯವರಿಗೂ ಆತನ ಬಗ್ಗೆ ತಿಳಿದಿರಲಿಲ್ಲ, ಹಿತೇಶ್ ದು ಒಂದೇ ಒಂದು ಫೋಟೋ ಮಾತ್ರವಿತ್ತು, ಅದನ್ನ ಹಿಡಿದುಕೊಂಡು ಆತನನ್ನು ಹುಡುಕಾಟ ನಡೆಸಿ ಪತ್ತೆ ಹಚ್ಚಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


