ನಿವೃತ್ತ ಐಎಎಸ್ ಅಧಿಕಾರಿ ಪತ್ನಿಗೆ 25 ಸಾವಿರ ರೂ. ದಂಡ ವಿಧಿಸಿದ ಹೈಕೋರ್ಟ್
ಅನಿವಾಸಿ ಭಾರತೀಯ(ಎನ್ ಆರ್ ಐ) ಮಹಿಳೆಯೊಬ್ಬರಿಗೆ ಸೇರಿದ ಆಸ್ತಿಯನ್ನು ಬಲವಂತವಾಗಿ ತಮ್ಮ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ ಆರೋಪದ ಮೇಲೆ, ...

Published On :
ಬೆಂಗಳೂರು: ಅನಿವಾಸಿ ಭಾರತೀಯ(ಎನ್ ಆರ್ ಐ) ಮಹಿಳೆಯೊಬ್ಬರಿಗೆ ಸೇರಿದ ಆಸ್ತಿಯನ್ನು ಬಲವಂತವಾಗಿ ತಮ್ಮ ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದ ಆರೋಪದ ಮೇಲೆ, ನಿವೃತ್ತ ಐಎಎಸ್ ಅಧಿಕಾರಿ ಕೆ.ಎಸ್ ಪ್ರಭಾಕರ್ ಪತ್ನಿ ಶೋಭಾ ಪ್ರಭಾಕರ್ ಅವರಿಗೆ 25 ಸಾವಿರ ರು ದಂಡ ವಿಧಿಸಿದೆ.
ತಾವು ದೇಶದಲ್ಲಿಲ್ಲದ ಸಮಯವನ್ನು ದುರುಪಯೋಗ ಪಡಿಸಿಕೊಂಡು, ದಕ್ಷಿಣ ಬೆಂಗಳೂರಿನಲ್ಲಿರುವ ತಮ್ಮ ಆಸ್ತಿಯನ್ನು ಬಲವಂತವಾಗಿ ಸ್ವಾಧೀನಕ್ಕೆ ಪಡೆಯಲು ಶೋಭಾ ಯತ್ನಿಸಿದ್ದರು, ಮೊಕದ್ದಮೆಗೆ ತ್ವರಿತ ತಡೆಯಾಜ್ಞೆ ನೀಡಬೇಕೆಂದು ವಿಚರಾಣಾಧೀನ ನ್ಯಾಯಾಲಯಕ್ಕೆ ರೇಣುಕಾ ಶೇಷಾದ್ರಿ ಎಂಬುವರು ಮನವಿ ಮಾಡಿದ್ದರು,. ಆದರೆ ಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು ಹೀಗಾಗಿ ರೇಣುಕಾ ಹೈಕೋರ್ಟ್ ಮೆಟ್ಟಿಲೇರಿದ್ದರು.
ರೇಣುಕಾ ಅವರ ತಂದೆ ಶೇಷಾದ್ರಿ ನಾಯ್ಡು ಕೆ,ಎಸ್ ಪ್ರಭಾಕರ್ ವಿರುದ್ಧ ಮಾರ್ಚ್ 8 ರಂದು ದೂರು ಸಲ್ಲಿಸಿದ್ದರು. ಎರಡನೇ ದೂರಿನಲ್ಲಿ ಪ್ರಭಾಕರ್ ಮತ್ತು 8 ಮಂದಿ ತಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ದೂರು ದಾಖಲಿಸಿದ್ದಾರೆ.
ಆದರೆ ಮಾರ್ಚ್ 10 ರಂದು ಶೇಷಾದ್ರಿ ನಾಯ್ಜ ವಿರುದ್ಧ ಪ್ರಭಾಕರ್ ಪ್ರತಿ ದೂರು ದಾಖಲಿಸಿದ್ದರು. ತಮ್ಮ ಮೇಲೆ ಶೇಷಾದ್ರಿ ನಾಯ್ಡು ಹಲ್ಲೆ ನಡೆಸಿದ್ದಾರೆ ಎಂದು ದೂರಿದ್ದಾರೆ.
ರೇಣುಕಾ ಶೋಭಾ ಅವರಿಗೆ ತಮ್ಮ ಆಸ್ತಿಯನ್ನು 1.39 ಕೋಟಿಗೆ ನವೆಂಬರ್ 28, 2016 ರಂದು ಮಾರಾಟ ಮಾಡಿ 10 ಲಕ್ಷ ರು. ಹಣ ಮುಂಗಡವಾಗಿ ಪಡೆದಿದ್ದರು. ನವೆಂಬರ್ 30 ರಂದು ಸೇಲ್ ಡೀಡ್ ಮಾಡಲಾಗಿತ್ತು. ಉಳಿದ 1.27 ಕೋಟಿ ರು ಹಣದ ಚೆಕ್ ನೀಡಲಾಗಿದೆ. ಇದನ್ನು ಪ್ರಭಾಕರ್ ಅವರು ಮೇಲ್ ಮಾಡಿದ್ದಾರೆ, ಆದರೆ ಅವರು ಹಾಕಿದ್ದ ಚೆಕ್ ಬೌನ್ಸ್ ಆಗಿತ್ತು, ಆದರೆ ಶೋಭಾ ಅವರು ಆಸ್ತಿಯನ್ನು ತಮ್ಮ ಸ್ವಾಧೀನಕ್ಕೆ ಪಡೆದುಕೊಳ್ಳಲು ಯತ್ನಿಸಿದ್ದರು ಎಂದು ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
High Court of Karnatakaಕರ್ನಾಟಕ ಹೈಕೋರ್ಟ್ನಿವೃತ್ತ ಐಎಎಸ್ ಅಧಿಕಾರಿFormer IAS officerShobha Prabhakarಶೋಭಾ ಪ್ರಭಾಕರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


