ಗೌರಿ ಲಂಕೇಶ್ ಹತ್ಯೆ: ಬಂಧಿತ ನವೀನ್ ಕುಮಾರ್ ಮೇಲೆ ಹಲವು ದಿನಗಳಿಂದ ಕಣ್ಣಿಟ್ಟಿದ್ದ ಎಸ್ ಐಟಿ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಕೆ. ಟಿ. ನವೀನ್ ಕುಮಾರ್ ಮೇಲೆ ವಿಶೇಷ ತನಿಖಾ ತಂಡ ಆರಂಭದಿಂದಲೂ ಕಣ್ಣಿಟ್ಟಿತ್ತು.

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಕೆ. ಟಿ. ನವೀನ್ ಕುಮಾರ್ ಮೇಲೆ ವಿಶೇಷ ತನಿಖಾ ತಂಡ ಆರಂಭದಿಂದಲೂ ಕಣ್ಣಿಟ್ಟಿತ್ತು.
ಬಲಪಂಥೀಯ ಧೋರಣೆವುಳ್ಳ ನವೀನ್ ಈ ಪ್ರಕರಣದ ಮಾಸ್ಟರ್ ಮೈಂಡ್ ಎಂಬ ವಿಶ್ವಾಸದಿಂದಲೇ ತನಿಖೆ ನಡೆಸುತ್ತಿದ್ದ ತಂಡಕ್ಕೆ ಪೋನ್ ಕರೆಗಳಿಂದಾಗಿ ಇತರರು ಭಾಗಿಯಾಗಿರುವ ಬಗ್ಗೆ ಮಾಹಿತಿ ದೊರಕಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಗೌರಿ ಲಂಕೇಶ್ ಹತ್ಯೆ ನಂತರ ತನಿಖೆ ಆರಂಭಿಸಿದ ಎಸ್ ಐಟಿ ಬಲಪಂಥೀಯ ಧೋರಣೆವುಳ್ಳ ಅನೇಕ ವ್ಯಕ್ತಿಗಳ ಮೇಲೆ ಕಣ್ಣಿಟ್ಟಿತ್ತು . ನವೀನ್ ಕುಮಾರ್ ಚಟುವಟಿಕೆ ಹಾಗೂ ಆತನ ಪೋನ್ ಕರೆಗಳನ್ನು ತಡೆಯಿಡಿಯಲಾಗಿತ್ತಾದರೂ ಆತನ ಮೇಲೆ ಹೆಚ್ಚಿನ ಶಂಕೆ ಇರಲಿಲ್ಲ.
ಆದರೆ. ಅಕ್ಬೋಬರ್ 14, 2017 ರಂದು ಶಂಕಿತನ ರೇಖಾಚಿತ್ರ ಹಾಗೂ ಸಿಸಿಟಿವಿ ದೃಶ್ಯಾವಳಿ ಬಿಡುಗಡೆ ಮಾಡಿದ್ದಾಗ ಆತ ಎರಡು ತಿಂಗಳ ನಾಪತ್ತೆಯಾಗಿದ್ದ. ಆತನ ಕುಟುಂಬ ಹಾಗೂ ಸ್ನೇಹಿತರೊಂದಿಗೂ ಕೂಡಾ ಮೊಬೈಲ್ ಪೋನ್ ಮೂಲಕ ಮಾತನಾಡುತ್ತಿರಲಿಲ್ಲ.
ಆದರೆ, ಡಿಸೆಂಬರ್ ಅಂತ್ಯದಿಂದ ಮತ್ತೆ ಮಾತನಾಡಲೂ ಆರಂಭಿಸಿದ್ದಾಗ ಶಂಕೆ ಹೆಚ್ಚಾಯಿತು ಎಂಬುದು ತನಿಖಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.
ಹತ್ಯೆಗೆ ಸಂಬಂಧಿಸಿದ ವಿಷಯ ನವೀನ್ ಕುಮಾರ್ ಗೆ ಗೊತ್ತಿತ್ತು . ಆತನ ಮೊಬೈಲ್ ನಲ್ಲಿ ಈ ಸಂಬಂಧ ಮಾಹಿತಿಗಳಿದ್ದವು. ಆದರೆ. ಆತನನ್ನು ಕೂಡಲೇ ಹಿಡಿಯಲು ಸಾಧ್ಯವಾಗಲಿಲ್ಲ . ಜನವರಿ ಅಂತ್ಯದಿಂದ ಆತನ ಚಲನವಲನ ಕುರಿತಂತೆ ಹೆಚ್ಚಿನ ಮಾಹಿತಿ ಕಲೆಹಾಕಲಾಯಿತು. ಇತರ ರಾಷ್ಟ್ರೀಯವಾದಿಗಳೊಂದಿಗೆ ಆತ ಸಂಬಂಧ ಹೊಂದಿರುವುದು ಪೋನ್ ಕರೆಗಳಿಂದ ತಿಳಿದುಬಂದಿತ್ತು ಎಂದು ಅವರು ಹೇಳಿದ್ದಾರೆ.
ಫೆಬ್ರವರಿ ಎರಡನೇ ವಾರದಲ್ಲಿ ಆತನನ್ನು ಹಿಡಿಯಲು ಸಾಧ್ಯವಾಗಿದಿದ್ದರೆ ತಮ್ಮ ಕೆಲಸ ಪೂರ್ಣವಾಗುತ್ತಿರಲಿಲ್ಲ. ಆಗಾಗ್ಗಿ ಬಂಧಿಸದೆ ಬೇರೆ ದಾರಿಯಿರಲಿಲ್ಲ ಹತ್ಯೆ ಸಂಬಂಧ ಆತ ಏನೂ ಹೇಳದಿದ್ದರಿಂದ ಮಾಸ್ಟರ್ ಮೈಂಡ್ ಯಾರು ಎಂಬುದನ್ನು ಕಂಡುಹಿಡಿಯಲು ತಡೆಯಾಗಿತ್ತು ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


