ರಾಜ್ಯ

ಮೈಸೂರು: ಮಗಳ ಮರ್ಯಾದಾ ಹತ್ಯೆ ಶಂಕೆ; ತಂದೆ ಬಂಧನ

ಯುವತಿಯೊಬ್ಬಳ ಸಾವಿನ ಬಗ್ಗೆ ಮೈಸೂರು ಎಸ್ ಪಿ ರವಿ ಡಿ ಚನ್ನಣ್ಣನವರ್ ಅವರಿಗೆ ಅನಾಮಧೇಯ ಪತ್ರ ಬಂದಿದ್ದು, ತನಿಖೆ ನಡೆಸಿದಾಗ ಇದೊಂದು ಮರ್ಯಾದಾ ...

ಮೈಸೂರು: ಮಗಳ ಮರ್ಯಾದಾ ಹತ್ಯೆ ಶಂಕೆ; ತಂದೆ ಬಂಧನ
ಮೃತ ಯುವತಿ ಸುಷ್ಮಿತಾ
Published On :
ಮೈಸೂರು:  ಯುವತಿಯೊಬ್ಬಳ ಸಾವಿನ ಬಗ್ಗೆ ಮೈಸೂರು ಎಸ್ ಪಿ ರವಿ ಡಿ ಚನ್ನಣ್ಣನವರ್ ಅವರಿಗೆ ಅನಾಮಧೇಯ ಪತ್ರ ಬಂದಿದ್ದು, ತನಿಖೆ ನಡೆಸಿದಾಗ ಇದೊಂದು ಮರ್ಯಾದಾ ಹತ್ಯೆ ಪ್ರಕರಣವೆಂದು ಶಂಕೆ ವ್ಯಕ್ತಪಡಿಸಲಾಗಿದೆ. 
ಎಚ್‌.ಡಿ.ಕೋಟೆ ತಾಲ್ಲೂಕಿನ ಗೊಲ್ಲನಬೀಡು ಗ್ರಾಮದ ಯುವತಿ ಸುಶ್ಮಿತಾ (22) ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಆಕೆಯ ತಂದೆ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ, ಆಕೆಯ ತಾಯಿ ಜಯಂತಿ ಮತ್ತು ಚಿಕ್ಕಪ್ಪ ಕೆಂಪ ಪರಾರಿಯಾಗಿದ್ದಾರೆ.
ದಲಿತ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳಿಗೆ ವಿಷವುಣಿಸಿ ಕೊಲೆಗೈದು ಶವವನ್ನು ಸುಟ್ಟುಹಾಕಿದ ಆರೋಪ ಕೇಳಿಬಂದಿದೆ. 
ಯುವತಿ ಆಲನಹಳ್ಳಿ ಗ್ರಾಮದ ಉಮೇಶ್‌ ಎಂಬಾತನನ್ನು ಪ್ರೀತಿಸುತ್ತಿದ್ದಳು. ಎರಡು ವರ್ಷಗಳ ಹಿಂದೆ ಮನೆ ತೊರೆದು ಪ್ರಿಯಕರನ ಜತೆ ಅಂತರ್ಜಾತಿ ವಿವಾಹವಾಗಿದ್ದಳು.
ಗ್ರಾಮದ ಕೆಲ ಮುಖಂಡರು ಸೇರಿಕೊಂಡು ನ್ಯಾಯ ಪಂಚಾಯಿತಿ ಮಾಡಿ ಯುವತಿಯನ್ನು ಕರೆತಂದಿದ್ದರು. ಇಬ್ಬರಿಗೂ ಬುದ್ಧಿವಾದ ಹೇಳಿ ಪರಸ್ಪರ ದೂರಮಾಡಿದ್ದರು. ಇತ್ತೀಚೆಗೆ ಸ್ವಜಾತಿಯ ಹುಡುಗನನ್ನು ಮದುವೆಯಾಗುವಂತೆ ಹೆತ್ತವರು ಹೇಳಿದಾಗ ಅದಕ್ಕೆ ವಿರೋಧ  ವ್ಯಕ್ತ ಪಡಿಸಿದ್ಳು, ಆಕೆಯನ್ನು ಹುಲಿಕೆರೆಯಲ್ಲಿರುವ ಆಕೆಯ ಚಿಕ್ಕಮ್ಮನ ಮನೆಯಲ್ಲಿಡಲಾಗಿತ್ತುಷ ಇತ್ತೀಚೆಗೆ ಕುಮಾರಾ ಮಗಳನ್ನು ಮನೆಗೆ ಕರೆದ ತಂದಿದ್ದಾರೆ,. ನಂತರಆಕೆಯನ್ನು ತೋಟದ ಮನೆಗೆ ಕರೆ ತಂದು ಆಕೆಗೆ ಮಾನಸಿಕ ಕಿರುಕುಳ ನೀಡಿದ್ದಾರೆ, ನಂತರ ರಾಸಾಯನಿಕ  ಕುಡಿಸಿ ಕೊಂದಿದ್ದಾರೆ, ನಂತರ ಆಕೆಯನ್ನು ನೇತು ಹಾಕಿ ಆತ್ಮಹತ್ಯೆ ಎಂಬಂತೆ ಬಿಂಬಿಸಿದ್ದಾರೆ.
ಇದರಿಂದ ಕೋಪಗೊಂಡಿದ್ದ ಪೋಷಕರು ತಮ್ಮ ಮರ್ಯಾದೆ ಹಾಳು ಮಾಡಿದ್ದಾಳೆಂದು ಆಕೆಗೆ ವಿಷವುಣಿಸಿ ಕೊಲೆಗೈದು ಶವವನ್ನು ತಮ್ಮದೇ ಜಮೀನಿನಲ್ಲಿ ಸುಟ್ಟುಹಾಕಿದ್ದಾರೆ. ಯಾವುದೇ ಅನುಮಾನ ಬಾರದಿರಲಿ ಎಂದು ಜಮೀನಿನಲ್ಲಿ ಉಳುಮೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸುಶ್ಮಿತಾಗೆ ಇಬ್ಬರು ಕಿರಿಯ ಸಹೋದರಿಯರಿದ್ದಾರೆ, ಇನ್ನೂ ಸುಶ್ಮಿಕಾ ಸಾವಿನ ದಿನದಿಂದ ಇಲ್ಲಿಯವರೆಗೂ ಉಮೇಶ್ ನಾಪತ್ತೆಯಾಗಿದ್ದಾನೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.