ಭೀಮಾ ತೀರದ ಹಂತಕ ಗಂಗಾಧರ್ ಕೊಲೆ: ಆರೋಪಿ ಪತ್ನಿ ಆತ್ಮಹತ್ಯೆ
ಭೀಮಾ ತೀರದ ಹಂತಕ ಗಂಗಾಧರ ಚಡಚಣ ಕೊಲೆ ಆರೋಪಿ ಸಿದ್ದಗೊಂಡಪ್ಪ ಮುಡವೆ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

Published On :
ವಿಜಯಪುರ: ಭೀಮಾ ತೀರದ ಹಂತಕ ಗಂಗಾಧರ ಚಡಚಣ ಕೊಲೆ ಆರೋಪಿ ಸಿದ್ದಗೊಂಡಪ್ಪ ಮುಡವೆ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಪ್ರಕರಣದಲ್ಲಿ ಬಂಧಿಯಾಗಿರುವ ಸಿದ್ದಗೊಂಡಪ್ಪ ಅವರ ಪತ್ನಿ ಕಾಂಚಾನ ಇಂಡಿ ತಾಲೂಕಿನ ಧೂಳಖೇಡ ಬಳಿ ಭೀಮಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಾಸವಾಗಿದ್ದ ಕಾಂಚಾನ ಕೆಲವು ದಿನಗಳಿಂದ ಅವರ ತವರೂರು ಇಂಡಿಯ ಕೆರೂರು ಗ್ರಾಮದಲ್ಲಿ ವಾಸವಿದ್ದರು. ಪತಿ ಸಿದ್ದಗೊಂಡಪ್ಪ ತಾನು ಎರಡು ದಿನಗಳ ಹಿಂದಷ್ಟೇ ನ್ಯಾಯಾಲಯಕ್ಕೆ ಶರಣಾಗಿದ್ದು ಗಂಗಾಧರ್ ಹತ್ಯೆ ಸಂಬಂಧ ಆತನ ವಿಚಾರಣೆ ನಡೆಯುತ್ತಿದೆ. ಇದರಿಂದ ಮನನೊಂದ ಕಾಂಚಾನ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಹತ್ತು ವರ್ಷಗಳ ಹಿಂದೆ ಸಿದ್ದಗೊಂಡಪ್ಪ ಅವರನ್ನು ವಿವಾಹವಾಗಿದ್ದ ಈಕೆ ಅನಾರೋಗ್ಯಪೀಡಿತರಾಗಿದ್ದರೆಂದು ಹೇಳಲಾಗಿದೆ.
ಜಳಕಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


