ವೃತ್ತಿಪರ ಕಾಲೇಜುಗಳಲ್ಲಿ 20 ಸಾವಿರಕ್ಕಿಂತ ಅಧಿಕ ಶುಲ್ಕ ಚೆಕ್ ಮೂಲಕ ಸಂಗ್ರಹ: ನಿಯಮ ಜಾರಿ ಸಾಧ್ಯತೆ
ವೃತ್ತಿಪರ ಕೋರ್ಸ್ ಗಳ ಕಾಲೇಜುಗಳಲ್ಲಿ 20,000ಕ್ಕಿಂತ ಅಧಿಕ ಶುಲ್ಕವನ್ನು ಚೆಕ್ ರೂಪದಲ್ಲಿ ....

ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಕಾಲೇಜುಗಳಲ್ಲಿ 20 ಸಾವಿರಕ್ಕಿಂತ ಅಧಿಕ ಶುಲ್ಕವನ್ನು ಚೆಕ್ ರೂಪದಲ್ಲಿ ಸ್ವೀಕರಿಸುವಂತೆ ರಾಜ್ಯ ಸರ್ಕಾರ ನಿಯಮ ಜಾರಿಗೆ ತರುವ ಸಾಧ್ಯತೆಯಿದೆ.
ಬಹುತೇಕ ಕಾಲೇಜುಗಳಲ್ಲಿ ಶುಲ್ಕವನ್ನು ನಗದು ರೂಪದಲ್ಲಿ ಸ್ವೀಕರಿಸಲಾಗುತ್ತಿದೆ ಎಂದು ಬಂದಿರುವ ದೂರಿನ ಹಿನ್ನಲೆಯಲ್ಲಿ ಪ್ರವೇಶ ಮೇಲುಸ್ತುವಾರಿ ಸಮಿತಿ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆ ಕಾಯ್ದೆ 2006ಕ್ಕೆ ತಿದ್ದುಪಡಿ ತರುವಂತೆ ಶಿಫಾರಸು ಮಾಡಲಿದ್ದು ಕಾಲೇಜುಗಳಿಗೆ ಶುಲ್ಕವನ್ನು ಚೆಕ್ ರೂಪದಲ್ಲಿ ಸ್ವೀಕರಿಸುವಂತೆ ಒತ್ತಾಯಿಸಲಿದೆ.
ಇತ್ತೀಚೆಗೆ ಪ್ರಧಾನಮಂತ್ರಿ ಕಚೇರಿಗೆ ದೂರೊಂದು ಬಂದಿತ್ತು. ಅದರಲ್ಲಿ ಅನಾಮಧೇಯ ವ್ಯಕ್ತಿ, ರಾಜ್ಯದಲ್ಲಿನ ಕಾಲೊಜೊಂದು ಶೇಕಡಾ 50ರಷ್ಟು ಶುಲ್ಕವನ್ನು ನಗದು ಮೂಲಕ ಕೇಳಿದೆ ಎಂದು ಆರೋಪಿಸಿದ್ದರು. ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಗದು ಮೂಲಕ ಶುಲ್ಕದ ಹೆಚ್ಚಿನ ಭಾಗವನ್ನು ನೀಡುವಂತೆ ಪೋಷಕರಿಗೆ ಒತ್ತಾಯಿಸಲಾಗುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿಗೆ ದೂರು ಸಲ್ಲಿಸಿದ್ದರು. ಆ ದೂರನ್ನು ಪ್ರಧಾನಿ ಕಚೇರಿ ಸಿಬ್ಬಂದಿ ಪ್ರವೇಶ ಮೇಲುಸ್ತುವಾರಿ ಸಮಿತಿಗೆ ವರ್ಗಾಯಿಸಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪ್ರವೇಶ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ ಮನೋಹರ್, ಆದಾಯ ತೆರಿಗೆ ಕಾಯ್ದೆ(ಐ-ಟಿ)ಕಾಯ್ದೆ ಇಂತಹ ಕಡ್ಡಾಯವನ್ನು ಹೇರುತ್ತದೆ. ಆದಾಯ ತೆರಿಗೆ ಕಾಯ್ದೆಯ 20ಬಿ ಅಧ್ಯಯನದ ಸಾಧ್ಯತೆ ಪ್ರಕಾರ 20,000 ಕ್ಕಿಂತ ಅಧಿಕ ಶುಲ್ಕವನ್ನು ಚೆಕ್ ಮೂಲಕ ಪಾವತಿಸಬಹುದೆಂದು ಹೇಳುತ್ತದೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


