ರಾಜ್ಯ

ಹುಬ್ಬಳ್ಳಿ: ಲಾಂಗು ಮಚ್ಚುಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರೌಡಿ ಮನೆ ಮೇಲೆ ಪೊಲೀಸರ ದಾಳಿ

ಹುಬ್ಬಳ್ಳಿ- ದಾರವಾಡ ಪೊಲೀಸರು ಅನಿರೀಕ್ಷಿತ ದಾಳಿ ನಡೆಸಿ ರೌಡಿ ಶೀಟರ್ ಮನೆಯಲ್ಲಿದ್ದ ಲಾಂಗು ಮಚ್ಚುಗಳನ್ನು ವಶ ಪಡಿಸಿಕೊಂಡಿದ್ದಾರೆ....

ಹುಬ್ಬಳ್ಳಿ: ಲಾಂಗು ಮಚ್ಚುಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ರೌಡಿ ಮನೆ ಮೇಲೆ ಪೊಲೀಸರ ದಾಳಿ
ರೌಡಿ ಶೀಟರ್ ಮನೆ ಮೇಲೆ ದಾಳಿ ನಡಿಸಿದ ಪೊಲೀಸರು
Published On :
ಹುಬ್ಬಳ್ಳಿ: ಹುಬ್ಬಳ್ಳಿ- ದಾರವಾಡ ಪೊಲೀಸರು ಅನಿರೀಕ್ಷಿತ ದಾಳಿ ನಡೆಸಿ ರೌಡಿ ಶೀಟರ್ ಮನೆಯಲ್ಲಿದ್ದ ಲಾಂಗು ಮಚ್ಚುಗಳನ್ನು ವಶ ಪಡಿಸಿಕೊಂಡಿದ್ದಾರೆ.
42 ಸ್ಥಳಗಳಲ್ಲಿ ದಾಳಿ ನಡೆಸಿದ ಪೊಲೀಸರು ಬೆಳಗ್ಗೆ 5 ಗಂಟೆಯಿಂದ ಸಂಜೆ ವರೆಗೂ ದಾಳಿ ನಡೆಸಿದ್ದಾರೆ, ಅವಳಿ ನಗರದಲ್ಲಿ ರೌಡಿ ಚಟುವಟಿಕೆ ಗರಿ ಗೆದರಿದ್ದು ಮಟ್ಟ ಹಾಕಲು ಪೊಲೀಸರು ನಿರ್ಧರಿಸಿದ್ದಾರೆ.ಹುಬ್ಬಳ್ಳಿಯಲ್ಲಿ ರೌಡಿ ಶೀಟರ್ ಒಬ್ಬ ತನ್ನ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ, ಈ ವೇಳೆ  ಕೇಕ್ ಕಟ್ಟಿಂಗ್ ಮಾಡುವಾಗ ಕತ್ತಿಯಿಂದ ಮಾಡಿದ್ದಾನೆ, 
ಕತ್ತಿಯಿಂದ ಕೇಕ್ ಕಟ್ ಮಾಡುವ ವಿಡಿಯೋ ವೈರಲ್ ಆಗಿದ್ದು, ಕೂಡಲೇ ಪೊಲೀಸರು ರೌಡಿ ಚಟುವಟಿಕೆಗಳ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ,  ದಾಳಿ ನಡೆಸಿದ ಪೊಲೀಸರು 2ಕೆಜಿ ಗಾಂಜಾ, ಚಾಕು,  ಏರ್ ಗನ್ ಸೇರಿದಂತೆ ಮಾರಕಾಸ್ತ್ರಗಳನ್ನು ವಶ ಪಡಿಸಿಕೊಂಡಿದ್ದಾರೆ,.
ರೌಡಿ ಶೀಟರ್ ಅಲ್ಲಾ ಉದ್ದೀನ್ ನಡಾಫ್ ಗೆ ಸೇರಿದ ದಾರವಾಡದ ಮನೆ ಹಾಗೂ ಅಮಿತ್ ಕೊರಾವರ್ ಮನತ್ತು ಪರಶುರಾಮ್ ಕೊರೊವರ್ ಅವರ ಮನೆಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.
ಒಬ್ಬನ ಮನೆಯಲ್ಲಿ ಪೊಲೀಸ್ ಸಮವಸ್ತ್ರಗಳು ದೊರೆತಿವೆ, ಅಲ್ಲಾ ಉದ್ದೀನ್  ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾನೆ, ಮತ್ತೊಬ್ಬ ಸಲೀಂ ಎಂಬಾತನ ವಿರುದ್ಧ 12 ಕಳ್ಳತನ ಪ್ರಕರಣಗಳು ದಾಖಲಾಗಿವೆ,
ದಾಳಿ ನಡೆಸಿದ ಪೊಲೀಸರು ಶೈಲೇಶ್ ಹರಿವನ್, ಅಭಿಷೇಕ್ , ಕಿರಣ್ ಶಿಂಧೆ ಮರರೇಶ್  ಶಿಂಧೆ ಎಂಬುವವರನ್ನು  ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.