ಭೀಮಾತೀರ ಹತ್ಯೆ ಪ್ರಕರಣ: ಪಿಎಸ್‌ಐ ಗೋಪಾಲ ಹಳ್ಳೂರಗೆ ನ್ಯಾಯಾಂಗ ಬಂಧನ
ಭೀಮಾತೀರದ ಗಂಗಾಧರ್ ಹತ್ಯೆ ಪ್ರಕರಣದ ಸಂಬಂಧ ಆರೋಪಿಯಾಗಿದ್ದ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಅವರ ಬಂಧನವಾಗಿದೆ.

Published On :
ವಿಜಯಪುರ: ಭೀಮಾತೀರದ ಗಂಗಾಧರ್ ಹತ್ಯೆ ಪ್ರಕರಣದ ಸಂಬಂಧ ಆರೋಪಿಯಾಗಿದ್ದ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಅವರ ಬಂಧನವಾಗಿದೆ.
ಸಿಐಡಿ ಮತ್ತು ಸ್ಥಳೀಯ ಪೋಲೀಸ್ ಅಧಿಕಾರಿಗಳು ಗೋಪಾಲ ಹಳ್ಳೂರ ಅವರನ್ನು ಬಂಧಿಸಿ ವಿಜಯಪುರ ಜಿಲ್ಲೆ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ವಾದ ಪ್ರತಿವಾದಗಳನ್ನು ಆಲಿಸಿ ಜೂನ್ 28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.
ನ್ಯಾಯಾಲಯದ ಸೂಚನೆ ಮೇರೆಗೆ ಪಿಎಸ್‌ಐ ಗೋಪಾಲ ಹಳ್ಳೂರ ಅವರನ್ನು ವಿಜಯಪುರ ಕೇಂದ್ರ ಕಾರಾಗೃಹದಲ್ಲಿಡಲಾಗಿದೆ. ಇದೇ ವೇಳೆ ಪೇದೆಗಳಾದ ಜಾದವ್, ನಾಯಕ್ವಾಡಿ ಮತ್ತು ರೂಗಿ ಸಹ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ.
ಡಿವೈಎಸ್ಪಿ ಅಶೋಕ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ನ್ಯಾಯಾಲಕ್ಕೆ ಹಾಜರು ಮಾಡಿತ್ತು.
2017 ಆಕ್ಟೋಬರ್ 31 ರಂದು ಪಿಎಸ್‌ಐ ಗೋಪಾಲ ಹಳ್ಳೂರ ನೇತೃದಲ್ಲಿ ಪೊಲೀಸರು- ರೌಡಿಗಳ ಮಧ್ಯ ನಡೆದ ಗುಂಡಿನ ಚಕಮಕಿಯಲ್ಲಿ ಭೀಮಾ ತೀರದ ರೌಡಿ ಧರ್ಮರಾಜ ಚಡಚಣ ಸಾವನ್ನಪ್ಪಿದ್ದಾರೆ. ಇದೇ ಕೆಲ ದಿನಗಳ ಅಂತರದಲ್ಲಿ ಆತನ ಸಹೋದರ ಗಂಗಾಧರ ಚಡಚಣ ನಿಗೂಢ ರೀತಿಯಲ್ಲಿ ಕೊಲೆಯಾಗಿದ್ದು ಈ ಆರೋಪದ ಮೇಲೆ ಚಡಚಣದ ಹಿಂದಿನ ಪಿ.ಎಸ್.ಐ. ಗೋಪಾಲ ಹಳ್ಳೂರ ಸೇರಿದಂತೆ ಮೂವರು ಪೇದೆಗಳ ವಿರುದ್ಧ ಸಾಕ್ಷಿಗಳು ಸಿಕ್ಕಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


