ರಾಜ್ಯ

ಮೋದಿ ಸರ್ಕಾರದ ವಿರುದ್ಧ ಹೇಳಿಕೆ; ಯೂ-ಟರ್ನ್ ಹೊಡೆದ ಪೇಜಾವರ ಶ್ರೀ

ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಇದೀಗ ಹೇಳಿಕೆ ಕುರಿತಂತೆ ಯೂ-ಟರ್ನ್ ಹೊಡೆದಿದ್ದು, ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಂಗಳವಾರ ಹೇಳಿದ್ದಾರೆ...

ಮೋದಿ ಸರ್ಕಾರದ ವಿರುದ್ಧ ಹೇಳಿಕೆ; ಯೂ-ಟರ್ನ್ ಹೊಡೆದ ಪೇಜಾವರ ಶ್ರೀ
ಪೇಜಾವರ ಶ್ರೀ
Published On :
ಮೈಸೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಶ್ರೀಗಳು ಇದೀಗ ಹೇಳಿಕೆ ಕುರಿತಂತೆ ಯೂ-ಟರ್ನ್ ಹೊಡೆದಿದ್ದು, ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಂಗಳವಾರ ಹೇಳಿದ್ದಾರೆ. 
ತಮ್ಮ ಹೇಳಿಕೆ ಕುರಿತಂತೆ ಮೈಸೂರಿನ ಮಾಧ್ವ ವಿದ್ಯಾರ್ಥಿ ನಿಲಯದಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃದತ್ವದ ಕೇಂದ್ರದ ಬಿಜೆಪಿ ಸರ್ಕಾರದ ಬಗ್ಗೆ ನಾನು ಅಸಮಾಧಾನ ವ್ಯಕ್ತಪಡಿಸಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. 
ಪ್ರಧಾನಿ ಮೋದಿ ಆಡಳಿತದ ವಿಚಾರವಾಗಿ ನಾನು ಕೆಲ ದಿನಗಳ ಹಿಂದಷ್ಟೇ ಉಡುಪಿಯಲ್ಲಿ ಮಾತನಾಡಿದ್ದೆ. ಅದು ಮಾತನಾಡುವಾಗ ಸರಿಯಾಗಿ ಮೈಕ್ ಇರಲಿಲ್ಲ. ಅದು ಕೆಲವರಿಗೆ ಸರಿಯಾಗಿ ಕೇಳಿಸದೆ ತಪ್ಪಾಗಿ ಅರ್ಥೈಸಲಾಗಿದೆ. 
ನಾನು ಮೋದಿ ಸರ್ಕಾರದ ಬಗ್ಗೆ ಎಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿಲ್ಲ. ಮೋದಿ ಸರ್ಕಾರ ಭ್ರಷ್ಟಾಚಾರ ರಹಿಸ ಸರ್ಕಾರವಾಗಿದ್ದು, ದೇಶದ ಆರ್ಥಿಕ ಪರಿಸ್ಥಿತಿಯು ಸುಸ್ಥಿತಿಯಲ್ಲಿದೆ. ಗಂಗಾ ನದಿ ಶುಚಿತ್ವ ಹಾಗೂ ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರದಿರುವುದರ ಬಗ್ಗೆ ಉತ್ತಮ ಸಾಧನೆಯಾಗಿಲ್ಲ ಎಂದು ಅತೃಪ್ತಿಯನ್ನಷ್ಟೇ ವ್ಯಕ್ತಪಡಿಸಿದ್ದೇನೆ. ಆದರೆ, ಮೋದಿ ಸರ್ಕಾರದ ಎಲ್ಲಾ ಕೆಲಸಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದ್ದಾರೆ. 
ನನ್ನ ಹೇಳಿಕೆಯಿಂದ ಹೊಸ ಚರ್ಚೆ ಆರಂಭಗೊಂಡಿದೆ. ಹೀಗಾಗಿ ತರಾತುರಿಯಲ್ಲಿ ಸ್ಪಷ್ಟೀಕರಣ ನೀಡುತ್ತಿದ್ದೇನೆ. ನಾನು ಒಂದು ಪಕ್ಷ ಅಥವಾ ವ್ಯಕ್ತಿಯ ಪರವಾಗಿಲ್ಲ. ಪಕ್ಷಾತೀತವಾಗಿ ನಾನು ಸಲಹೆ ಹಾಗೂ ಸೂಚನೆಗಳನ್ನು ಕೊಡುತ್ತೇನೆ. ಅದೇ ರೀತಿ ಮೋದಿ ಸರ್ಕಾರಕ್ಕೂ ಸಲಹೆ, ಸೂಚನೆ ನೀಡಿದ್ದೇನೆ. ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆಂದಿದ್ದಾರೆ. 
ನನಗೆ ಮೋದಿಯವರ ಬಗ್ಗೆ ಯಾವುದೇ ರೀತಿಯ ಅಸಮಾಧಾನವಿಲ್ಲ. ಯಾರೂ ಹಾಗೆ ಭಾವಿಸಬೇಕಿಲ್ಲ. ನಾನು ಹೇಳಿಕೆ ನೀಡಿದ ನಂತರ ಯಾವುದೇ ಬಿಜೆಪಿ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಯಾರೂ ಸಹ ಸ್ಪಷ್ಟೀಕರಣ ನೀಡಿ ಎಂದೂ ಕೇಳಿಲ್ಲ. ಸ್ವ ಇಚ್ಛೆಯಿಂದ ನಾನು ಸ್ಪಷ್ಟೀಕರಣ ನೀಡುತ್ತಿದ್ದೇನೆ. ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ ಎಂಬ ಕಾರಣಕ್ಕೆ ನಾನು ಸ್ಪಷ್ಟೀಕರಣ ನೀಡಿದ್ದೇನೆ. ಈ ಚರ್ಚೆಯನ್ನು ಇಲ್ಲಿಗೆ ಬಿಡಬೇಕೆಂದು ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.