ರಾಜ್ಯ

ಹಾವೇರಿ: ಮನೆಯಲ್ಲಿಯೇ 200 ಜಾತಿಯ ಗಿಡ ಬೆಳೆಸಿರುವ ಹಸಿರು ಪ್ರಿಯೆ!

ಜಿಲ್ಲೆಯ ಹಲವು ಭಾಗಗಳಲ್ಲಿ ಪರಿಸರ ಅಭಿವೃದ್ಧಿ ಹೊಂದಲು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತೆ ಮಾಧುರಿ ಜಾನ್ ದೇಧೋರ್ ಪ್ರಮುಖ ಕೊಡುಗೆ ...

ಹಾವೇರಿ: ಮನೆಯಲ್ಲಿಯೇ 200 ಜಾತಿಯ ಗಿಡ ಬೆಳೆಸಿರುವ ಹಸಿರು ಪ್ರಿಯೆ!
ಸಾಂದರ್ಭಿಕ ಚಿತ್ರ
Published On :
ಹಾವೇರಿ: ಜಿಲ್ಲೆಯ ಹಲವು ಭಾಗಗಳಲ್ಲಿ  ಪರಿಸರ ಅಭಿವೃದ್ಧಿ ಹೊಂದಲು ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತೆ ಮಾಧುರಿ ಜಾನ್ ದೇಧೋರ್ ಪ್ರಮುಖ ಕೊಡುಗೆ ನೀಡಿದ್ದಾರೆ, ಪರಿಸರ ಸಂರಕ್ಷಣೆ ಮಾಡುವುದನ್ನು ಪ್ರೋತ್ರಾಹಿಸಲು ತಳ ಮಟ್ಟದಿಂದ ಜನರಲ್ಲಿ ಅರಿವು ಮೂಡಿಸುವ ಕೆಲಸವನ್ನು ಹಲವು ವರ್ಷಗಳ ಕಾಲ ಮಾಡಿದ್ದಾರೆ.
ಅಕ್ಕಾಮಹಾದೇವಿ ವಿವಿಯಿಂದ ಡಾಕ್ಟರೇಟ್ ಪಡೆದಿರುವ ಮಾಧುರಿ ಜನರಲ್ಲಿ ಪರಸರ ಸಂರಕ್ಷಣೆ ಕಾಳಜಿ ಮೂಡಿಸಲು ಬದ್ಧರಾಗಿದ್ದಾರೆ,. ವಿದ್ಯಾರ್ಥಿಗಳು ಹಾಗೂ ಯುವಕರು ಪರಸರ ಸಂರಕ್ಷಣೆ ಕಾಳಜಿಯಲ್ಲಿ ಹೆಚ್ಚು ಹೆಚ್ಚು ಪಾಲ್ಗೋಳ್ಳುವಂತೆ ಶ್ಲಾಘನೀಯ ಕಾರ್ಯ ಮಾಡಿದ್ದಾರೆ.
ಜಿಲ್ಲೆಯಲ್ಲಿರುವ ನದಿ ಕೆರೆ ಹಾಗೂ ಕಟ್ಟೆಗಳ ನೀರನ್ನು ರಕ್ಷಿಸುವಂತೆ ಜನರಿಗೆ ತಿಳಿಸಿದ್ದಾರೆ, ಇವರ ಮನೆಯ ಅಂಗಳದಲ್ಲಿ ಸುಮಾರು 200 ಜಾತಿಯ ಮರಗಳು ಬೆಳೆದು ನಿಂತಿವೆ,  ಸಾಹಿತಿ ಶಿವರಾಮ ಕಾರಂತರ ಸಹೋದರ ಪರಿಸರ ವಾದಿ ಕೆ.ಎಲ್ ಕಾರಂತ್ ಅವರಿಂದ ಸ್ಪೂರ್ತಿಗೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.