ರಾಜ್ಯ

ಮಾನ ಮುಚ್ಚಿಕೊಳ್ಳೋಕೆ ಪುಟಗೋಸಿ ಬೇಕು: ಅನಂತ್ ಕುಮಾರ್ ಹೆಗಡೆಗೆ ಎಚ್ ಡಿಕೆ ಟಾಂಗ್

"ಮನುಷ್ಯನ ಮಾನ ಮುಚ್ಚಿಕೊಳ್ಳಲು ಪುಟಗೋಸಿ ಬೇಕು. ಅವನೆಷ್ಟೇ ಶ್ರೀಮಂತನಾದರೂ ಪುಟಗೋಸಿ ಇಲ್ಲದೆ ಹೊದರೆ ಮಾನ ಕಳೆದುಕೊಳ್ಳಬೇಕಾಗುವುದು."

ಮಾನ ಮುಚ್ಚಿಕೊಳ್ಳೋಕೆ ಪುಟಗೋಸಿ ಬೇಕು: ಅನಂತ್ ಕುಮಾರ್ ಹೆಗಡೆಗೆ ಎಚ್ ಡಿಕೆ ಟಾಂಗ್
ಮಾನ ಮುಚ್ಚಿಕೊಳ್ಳೋಕೆ ಪುಟಗೋಸಿ ಬೇಕು: ಅನಂತ್ ಕುಮಾರ್ ಹೆಗಡೆಗೆ ಎಚ್ ಡಿಕೆ ಟಾಂಗ್
Published On :
ಬೆಂಗಳೂರು: "ಮನುಷ್ಯನ ಮಾನ ಮುಚ್ಚಿಕೊಳ್ಳಲು ಪುಟಗೋಸಿ ಬೇಕು. ಅವನೆಷ್ಟೇ ಶ್ರೀಮಂತನಾದರೂ ಪುಟಗೋಸಿ ಇಲ್ಲದೆ ಹೊದರೆ ಮಾನ ಕಳೆದುಕೊಳ್ಳಬೇಕಾಗುವುದು." ಎನ್ನುವ ಮೂಲಕ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.
"ಕೇಂದ್ರ ಸಚಿವರ ಹೇಳಿಕೆ ಅವರ ಅನಾಗರಿಕತನವನ್ನು ತೋರುತ್ತಿದೆ.ಎಂದ ಕುಮಾರಸ್ವಾಮಿ ಹಿಂದೂ ಸಂಸ್ಕೃತಿ ರಕ್ಷಿಸುವವರಾದ ನಿಮ್ಮಿಂದ ಇಂತಹಾ ಹೇಳಿಕೆ ಸಲ್ಲದು. ಇದು ಅವರ ಅಭಿರುಚಿ ಎಂತಹುದೆನ್ನುವುದನ್ನು ಸಾರಿ ಹೇಳುತ್ತಿದೆ  ಎಂದರು.
ಜೆಡಿಎಸ್ ಪುಟಗೋಸಿ ಪಕ್ಷ!
ಶನಿವಾರ ಕುಮಟಾದಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಶತಮಾನಗಳಷ್ಟು ಹಳೆಯ ಪಕ್ಷವಾದ ಕಾಂಗ್ರೆಸ್ ಗೆ ಇಂದು ಸಲಾಂ ಹೊಡೆಯುವ ಸ್ಥಿತಿ ಬಂದಿದೆ, ಪುಟಗೋಸಿ ಪಕ್ಷಕ್ಕೆ ಸಹ ಸಲಾಂ ಹೊಡೆಯುವ ಸ್ಥಿತಿ ಆಗಿರುವುದು ಶೋಚನೀಯ ಎಂದಿದ್ದಾರೆ.
ಆರ್​.ವಿ.ದೇಶಪಾಂಡೆ ಬಿಜೆಪಿಗೆ ಬರುವುದಾದಲ್ಲಿ ಸ್ವಾಗತವಿದೆ ಎಂದ ಸಚಿವರು ಹಳಿಯಾಳ, ಯಲ್ಲಾಪುರದಲ್ಲಿ ಬಿಜೆಪಿ ಬಾವುಟ ಹಾರಿಸಿಯೇ ಸಿದ್ದ, ಇದಾಗಲೇ ಜಿಲ್ಲೆಯ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ, ಇನ್ನುಳಿದ ಎರಡರಲ್ಲಿಯೂ ಬಿಜೆಪಿಯನ್ನು ಗೆಲ್ಲಿಸುವವರೆಗೆ ರಾಜಕೀಯ ಬಿಡುವುದಿಲ್ಲ ಎಂದು ಹೇಳಿದರು.
"ರಾಜಕೀಯವೆಂದರೆ ಏನೆಂದು ತಿಳಿದವರು ಬಿಜೆಪಿಯವರು ಮಾತ್ರ, ನಾವು  ರಾಜಕೀಯ ಪುಟಗೋಸಿಗಳಲ್ಲ" ಹೆಗಡೆ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.