ಉಡುಪಿ ಮೂಲದ ನರ್ಸ್ ಸೌದಿ ಅರೇಬಿಯಾದಲ್ಲಿ ಅನುಮಾನಾಸ್ಪದ ಸಾವು
ಸೌದಿ ಅರೇಬಿಯಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಉಡುಪಿ ಮೂಲದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

Published On :
ಉಡುಪಿ: ಸೌದಿ ಅರೇಬಿಯಾದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಉಡುಪಿ ಮೂಲದ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಉಡುಪಿ ಜಿಲ್ಲೆ ಕಾಪುವಿನ ಶಿರ್ವ ಗ್ರಾಮ ಕುತ್ಯಾರು ಎಂಬಲ್ಲಿನ ಜೋತ್ಸ್ನಾ ಸೌದಿ ಅರೇಬಿಯಾದಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಆರು ವರ್ಷಗಳಿಂದ ಸೌದಿ ಅರೇಬಿಯಾ ಆರೋಗ್ಯ ಇಲಾಖೆ ಆಸ್ಪತ್ರೆಯಲ್ಲಿ ಅವರು ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದರು.
ಕಡೆಯ ಬಾರಿಗೆ ಜೋತ್ಸ್ನಾ ಜುಲೈ 19 ರಂದು ಪತಿ ಅಶ್ವಿನ್ ಮಥಾಯಾಸ್ ಅವರೊಂದಿಗೆ ದೂರವಾಣಿಯಲ್ಲಿ ಸಂಭಾಷಣೆ ನಡೆಸಿದ್ದಾರೆ. ಇದಾಗಿ ಎರಡು ದಿನಗಳಲ್ಲಿ ಸಹೋದ್ಯೋಗಿಯೊಬ್ಬರಿಂದ ಪತ್ನಿ ಸಾವಿನ ವರ್ತಮಾನವನ್ನು ಪಡೆದ ಪತಿ ಹಾಗೂ ಆಕೆಯ ಕುತುಂಬಕ್ಕೆ ಆಘಾತವಾಗಿದೆ.
ಜೋತ್ಸ್ನಾ ಸಾವಿಗೆ ಏನು ಕಾರಣವೆಂದು ಪತ್ತೆಯಾಗಿಲ್ಲ, ಸೌದಿ ಅರೇಬಿಯಾದಲ್ಲಿ ಏನು ನಡೆಯಿತೆಂದು ಸಹ ಇದುವರೆಗೆ ಯಾವ ಮಾಹಿತಿ ಇಲ್ಲ. ಅಶ್ವಿನ್ ಅವರ ಕುಟುಂಬ ಈ ಸಂಬಂಧ ಭಾರತ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಪರ್ಕಿಸುವ ಯ್ತ್ನ ನಡೆಸಿದೆ. ಆದರೆ ಯಾವ ಪ್ರಗತಿಯೂ ಆಗಿಲ್ಲ.
ಸಧ್ಯ ಶಾಸಕರಾದ ಐವನ್ ಡಿಸೋಜಾ ಮತ್ತು ರಘುಪತಿ ಭಟ್ ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಕಛೇರಿಗೆ ಸಂಪರ್ಕ ಮಾಡಿ ಈ ಕುರಿತಂತೆ ಮಾಹಿತಿ ಪಡೆಯುವ ಪ್ರಯತ್ನದಲ್ಲಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಜೋತ್ಸ್ನಾ ಅವರನ್ನು ವಿವಾಹವಾಗಿದ್ದ ಅಶ್ವಿನ್ ಸಹ ದುಬೈನಲ್ಲಿ ಉದ್ಯೋಗದಲ್ಲಿದ್ದಾರೆ. "ಪತ್ನಿ ಸಾವಿಗೆ ಕಾರಣವಿನ್ನೂ ಪತ್ತೆಯಾಗಿಲ್ಲ, ಆಕೆಯ ಮೃತದೇಹವನ್ನು ಭಾರತಕ್ಕೆ ತರುವುದು ಸಹ ವಿಳಂಬವಾಗುತ್ತಿದೆ, ಈ ಸಂಬಂಧ ಸರ್ಕಾರ ತಕ್ಷಣ ಗಮನಹರಿಸಲಿ" ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


