ಪಾಕ್ ಧ್ವಜ ಪ್ರಕರಣ: ಗೌರಿ ಲಂಕೇಶ್ ಹತ್ಯೆ ಆರೋಪಿ ವಾಗ್ಮೋರೆ ಖುಲಾಸೆ
2012ರಲ್ಲಿ ಸಿಂದಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ ವಾಗ್ಮೋರೆ ಸೇರಿ 7 ಆರೋಪಿಗಳು ನಿರ್ದೋಷಿ ಎಂದು ಜಿಲ್ಲಾ ನ್ಯಾಯಾಲಯ...

Published On :
ವಿಜಯಪುರ: 2012ರಲ್ಲಿ ಸಿಂದಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಆರೋಪಿ ಪರಶುರಾಮ ವಾಗ್ಮೋರೆ ಸೇರಿ 7 ಆರೋಪಿಗಳು ನಿರ್ದೋಷಿ ಎಂದು ಜಿಲ್ಲಾ ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ.
2012ರ ಜ.1 ರಂದು ಸಿಂಗಗಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಪಾಕಿಸ್ತಾನ ರಾಷ್ಟ್ರದ ಧ್ವಜ ಹಾರಾಟ ಪ್ರಕರಣದಲ್ಲಿ ಗ1ರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ ವಾಗ್ಮೋರೆ ಹಾಗೂ ಅನಿಲ ಸೋಲನಕರ್, ರಾಕೇಶ್ ಮಠ, ಮಲ್ಲನಗೌಡ ಪಾಟೀಲ, ರೋಹಿತ್ ನಾವಿ, ಸುನೀಲ್ ಅಗಸರ ಹಾಗೂ ಓರ್ವ ಬಾಲಕ ಆರೋಪಿಗಳಾಗಿದ್ದರು.
ಪ್ರಕರಣ ಸಂಬಂಧ ನಿನ್ನೆ ಅಂತಿಮ ತೀರ್ಪು ಪ್ರಕಟಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ.ಕೆ.ಬಿ.ಗೀತಾ ಅವರು, ವಾದ ಹಾಗೂ ಪ್ರತಿವಾದ ಆಲಿಸಿದರು. ಆಧರೆ, ಆರೋಪಿಗಳ ಪರವಾಗಿ ಯಾವುದೇ ರೀತಿಯ ಬಲವಾದ ಸಾಕ್ಷ್ಯಾಧಾರಗಳು ಲಭ್ಯವಾಗದ ಕಾರಣ ಆರೋಪಿಗಳನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದರು.
ಪರಶುರಾಮ ವಾಗ್ಮೋರೆ ಪರ ವಕೀಲ. ಎಸ್.ಹೆಚ್.ಲಗಳಿ ವಾದ ಮಂಡಿಸಿದ್ದರು. ಆದರೆ, ವಾಗ್ಮೋರೆ ವಿರುದ್ಧ ಗೌರಿ ಲಂಕೇಶ್ ಹತ್ಯೆ ಪ್ರಕರಣ ಇರುವ ಕಾರಣ ಸದ್ಯಕ್ಕೆ ಬಿಡುಗಡೆ ಭಾಗ್ಯ ಇಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Courtನ್ಯಾಯಾಲಯಗೌರಿ ಲಂಕೇಶ್ಖುಲಾಸೆacquitsಪಾಕಿಸ್ತಾನ ಧ್ವಜPakistan flagಪರಶುರಾಮ್ ವಾಗ್ಮೋರೆGauri murderParashuram Waghmore
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


