ರಾಜ್ಯ

ಬೆಳಗಾವಿಯಲ್ಲಿ ಪ್ರವಾಹ ಭೀತಿ: ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮಕ್ಕೆ ಸಚಿವರ ಸೂಚನೆ

ಮಹಾರಾಷ್ಟ್ರದ ಜಲಾಶಯಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಕಾರಣ ಬೆಳಗಾವಿಯ ಹಲವು ಪ್ರದೇಶಗಳಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ, .

ಬೆಳಗಾವಿಯಲ್ಲಿ ಪ್ರವಾಹ ಭೀತಿ: ಪರಿಸ್ಥಿತಿ ನಿಭಾಯಿಸಲು ಅಗತ್ಯ ಕ್ರಮಕ್ಕೆ ಸಚಿವರ ಸೂಚನೆ
ದೋಣಿಗಳಲ್ಲಿ ಸಂಚತರಿಸುತ್ತಿರುವ ಬಾಗಲಕೋಟೆ ಗ್ರಾಮಸ್ಥರು
Published On :
ಬೆಳಗಾವಿ: ಮಹಾರಾಷ್ಟ್ರದ  ಜಲಾಶಯಗಳಿಂದ ಅಧಿಕ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಕಾರಣ ಬೆಳಗಾವಿಯ ಹಲವು ಪ್ರದೇಶಗಳಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ, 
ಈ ಸಂಬಂಧ ಜಿಲ್ಲೆಯ ಹಿರಿಯ ಅಧಿಕಾರಿಗಳ ಜೊತೆ ಚಿಕ್ಕೋಡಿಯಲ್ಲಿ ಸಭೆ ನಡೆಸಿದ ಸಚಿವ ರಮೇಶ್ ಜಾರಕಿಹೊಳಿ ಪ್ರವಾಹ ಸಂದರ್ಭ ಉಂಟಾದರೆ ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
ಗಡಿ ಭಾಗದಲ್ಲಿರುವ ಜಲಾಶಯಗಳಿಂದ ಮಹಾರಾಷ್ಟ ಹೆಚ್ಚುವರಿ ನೀರು ಹರಿಸಿದ ವೇಳೆ ಈ ಭಾಗದಲ್ಲಿ ಹಲವು ಬಾರಿ ಪ್ರವಾಹ ಉಂಟಾಗಿದೆ.
ಕೋಯ್ನಾ ಸೇರಿದಂತೆ ಮಹಾರಾಷ್ಟ್ರದ ಹಲವು ನದಿಗಳು ತುಂಬಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ ಎಂದು ಜಾರಕಿ ಹೊಳಿ ಹೇಳಿದ್ದಾರೆ, ಆಗಸ್ಟ್ 5ನೇ ವಾರದಲ್ಲಿ ಮಹಾರಾಷ್ಟ್ರ ನೀರು ಬಿಡುಗಡೆ ಮಾಡಿದರೇ ಬೆಳಗಾವಿ ಪರಿಸ್ಥಿತಿ ತೀರಾ ಚಿಂತಜನಕವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಕೃಷ್ಣಾ ನದಿ ಉಕ್ಕಿ ಹರಿಯುತ್ತಿರುವುದರಿಂದ  ಬಾಗಲಕೋಟೆ  ಪ್ರದೇಶದಲ್ಲಿ ಪ್ರವಾಹ ಭೀತಿ ಎದುರಾಗಿದೆ, ನಾವು ಹಲವು ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ,  ಇಲ್ಲಿ ಕೃಷಿ ಮಾಡಿಕೊಂಡು ನಾವು ಅದರಿಂದ ಬಂದ ಹಣದಲ್ಲಿ ಊಟ ಮಾಡುತ್ತಿದ್ದೇವೆ,  ಇಲ್ಲಿಂದ ಹೋಗಿ ಬೇರೆ ಕಡೆ ನೆಲೆಸುವುದು ಕಷ್ಟಸಾಧ್ಯ ಎಂದು ಸಾಲ್ಗುಂದಿ ಗ್ರಾಮದ ರೈತ ರಾಮಪ್ಪ ಗೋನಿ ತಿಳಿಸಿದ್ದಾರೆ, ಬಾಗಲಕೋಟೆಯ ಸುಮಾರು 50 ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.