ಬೆಳಗಾವಿ: ಸೊಸೈಟಿಯಲ್ಲಿ ಕಳುವಾಗಿದ್ದ 1.1 ಕೋಟಿ ರೂ. ಮೌಲ್ಯದ ಆಭರಣ ವಶ, ಮೂವರ ಬಂಧನ
ಸ್ಥಳೀಯ ಸಹಕಾರ ಸಂಘದ ಖಜಾನೆಯಿಂದ 4 ಕೆಜಿ ಚಿನ್ನದ ಆಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿರುವ ಪೋಲೀಸರು 1.1 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

Published On :
ಬೆಳಗಾವಿ: ಸ್ಥಳೀಯ ಸಹಕಾರ ಸಂಘದ ಖಜಾನೆಯಿಂದ 4 ಕೆಜಿ ಚಿನ್ನದ ಆಭರಣಗಳ ಕಳವು ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಿರುವ ಬೆಳಗಾವಿ ಪೋಲೀಸರು 1.1 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಪೋಲೀಸರು ಕಳ್ಳರು ದೋಚಿದ್ದ ಎಲ್ಲಾ ಆಭರಣಗಳನ್ನು ಮರುವಶಪಡಿಸಿಕೊಂಡಿದ್ದಾರೆ
ಮಂಗೇಶ್ ಶಶಿಕಾಂತ್ ಶಿರೋದ್ಕರ್ (45), ಶ್ರೀ ಶೈಲ್ ಯಮನಪ್ಪ ತರಿಹಾಳ್ ( (35) ಮತ್ತು ಮಾರುತಿ ಮಹಾಬಲೇಶ್ವರ ರಾಯ್ಕರ್ (45) ಬಂಧಿತ ಆರೋಪಿಗಳು.
ಈ ಮೂವರು ಕಲಿಕಾ ದೈವದ್ಯ ಸೌಹಾರ್ದ ಕೋಆಪರೇಟಿವ್ ಸೊಸೈಟಿಯ (ಕೆಡಿಎಸ್ಸಿಎಸ್) ಯಲ್ಲಿ ಕೆಲಸ ಮಾಡುತ್ತಿದ್ದರು.ಹಾಗೆಯೇ ತಾವು ಕೆಲಸ ಮಾಡುತ್ತಿದ್ದ ಸೊಸೈಟಿಯ ಚಿನ್ನಾಭರಣವನ್ನೇ ದೋಚುವ ಕೃತ್ಯ ನಡೆಸಿದ್ದರು.ಸೊಸೈಟಿಯು ಜನರಿಗೆ ಸಾಲವನ್ನು ನೀಡಿದ್ದು ಸಾಲದ ಭದ್ರತೆಗಾಗಿ ಚಿನ್ನವನ್ನು ಇರಿಸಿಕೊಂಡಿತ್ತು ಎನ್ನಲಾಗಿದೆ. ಸೊಸೈಟಿಯ ಮ್ಯಾನೇಜರ್ ಆಗಿದ್ದ ಶಿರೋದ್ಕರ್ ಈ ಕೃತ್ಯದ ಪ್ರಮುಖ ರೂವಾರಿಯಾಗಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
gold ornamentsBelagavi policeKalika Daivadya Souhard Cooperative Societyಚಿನ್ನದ ಆಭರಣಗಳುಬೆಳಗಾವಿ ಪೊಲೀಸ್ಕಲಿಕಾ ದೈವದ್ಯ ಸೌಹಾರ್ದ ಸಹಕಾರ ಸಂಘ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


