ಎಸ್ಸಿ / ಎಸ್ಟಿ ಉಪ-ಯೋಜನೆ ಅನುಷ್ಠಾನ ನಿರ್ಲಕ್ಷಿಸಿದರೆ ಅಧಿಕಾರಿಗಳಿಗೆ ಜೈಲು ವಾಸ!
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಸರ್ಕಾರ ರೂಪಿಸಿದ್ದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳು ಉಪ ಯೋಜನೆ ಕಾಯ್ದೆಯಡಿಯಲ್ಲಿ ಬರುವ ಯೋಜನೆಗಳ ಅನುಷ್ಠಾನ ನಿರ್ಲಕ್ಷಿಸಿದ ಪಕ್ಷದಲ್ಲಿ ಅಧಿಕಾರಿಗಳು ಜೈಲು...

Published On :
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ರೂಪಿಸಿದ್ದ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳು ಉಪ ಯೋಜನೆ ಕಾಯ್ದೆಯಡಿಯಲ್ಲಿ ಬರುವ ಯೋಜನೆಗಳ ಅನುಷ್ಠಾನ ನಿರ್ಲಕ್ಷಿಸಿದ ಪಕ್ಷದಲ್ಲಿ ಅಧಿಕಾರಿಗಳು ಜೈಲು ಶಿಕ್ಷೆಗೆ ಗುರಿಯಾಗಬೇಕಾಗಬಹುದು. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಎಸ್ಸಿ / ಎಸ್ಟಿ ಸಬ್-ಪ್ಲ್ಯಾನ್ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಅಂತಿಮಗೊಳಿಸಿದೆ.ಇದರಂತೆ ಉಪ ಯೋಜನೆಗಳ ಅಡಿಯಲ್ಲಿ ಯೋಜನೆಗಳ ಸಮರ್ಪಕ ಅನುಷ್ಠಾನವಾಗದೆ ಹೋದಲ್ಲಿ ಅಧಿಕಾರಿಗಳಿಗೆ ದಂಡ ಮತ್ತು ಶಿಕ್ಷೆಯನ್ನು ವಿಧಿಸಲಾಗುವುದು. ಹಾಗೆಯೇ ಅಧಿಕಾರಿಗಳು ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡಿದರೆ ಅವರು ಪ್ರಶಂಸೆಗೆ ಪಾತ್ರರಾಗಲಿದ್ದಾರೆ.
ಯಾವುದೇ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಕರ್ತವ್ಯವನ್ನು ನಿರ್ಲಕ್ಷಿಸುವುದನ್ನು ಶಿಸ್ತು ಕ್ರಮಕ್ಕೆ ಹೊಣೆಗಾರರಾಗಿರುತ್ತಾರೆ, ಅವರು ಆರು ತಿಂಗಳ ಕಾಲ ಜೈಲು ಶಿಕ್ಷೆಗೆ ಸಹ ಗುರಿಯಾಗುವ ಸಂಭವವಿದೆ.
2018-19 ರ ಬಜೆಟ್ ಬಳಿಕ ರಾಜ್ಯ ಶಾಸಕಾಂಗದ ಎರಡೂ ಮನೆಗಳು ಸಮಾಜ ಕಲ್ಯಾಣ ಇಲಾಖೆ ಉಪ ಯೋಜನೆಗಳ ಅನುಷ್ಠಾನ ಕುರಿತಂತೆ ಚಿಂತನೆ ನಡೆಇಸಿದೆ."ಯೋಜನೆಗಳು ಇದಾಗಲೇ ಚಾಲ್ತಿಯಲ್ಲಿದೆ. ಆದರೆ ಅನುಷ್ಠಾನಕ್ಕೆ ಇಚ್ಚಾಶಕ್ತಿಯ ಕೊರತೆ ಇದೆ.ಪಂಚಾಯತ್ ಮಟ್ಟದಲ್ಲಿ ಯೋಜನೆ ಸಮರ್ಪಕವಾಗಿ ಜಾರಿಯಾಗುತ್ತಿದೆ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ ಅದಕ್ಕಾಗಿ ಈ ನಿಯಮ ಹಾಕಲಾಗಿದೆ"ಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ರಾಜ್ಯ ಕೌನ್ಸಿಲ್ ಹೊರತುಪಡಿ ರಾಜ್ಯದ ಮುಖ್ಯಮಂತ್ರಿಗಳೇ ಸ್ವತಹ ಎಸ್ಸಿ/ಎಸ್ಟಿ ಸಮುದಾಯ ಅಭಿವೃದ್ದಿ ಸಂಬಂಧ ವರ್ಷಕ್ಕೆ ಎರಡು ಬಾರಿ ಸಭೆ ನಡೆಸಲಿದ್ದಾರೆ.ಪ್ರಿಯಾಂಕ್ ನೇತೃತ್ವದ ಏಜೆನ್ಸಿಯನ್ನು ಸ್ಥಾಪಿಸಲಾಗುವುದು. ನೋಡಲ್ ಏಜನ್ಸಿಯು ಪಾರದರ್ಶಕತೆಯನ್ನು ಹೊಂದಿರಲಿದ್ದು ವಿವಿಧ ಇಲಾಖೆಗಳಿಂದ ಎಸ್ಸಿ / ಎಸ್ಟಿ ಉಪ-ಯೋಜನೆಗೆ ಪ್ರಸ್ತಾಪಿಸಲಾದ ಯೋಜನೆಗಳ ಮೌಲ್ಯಮಾಪನ ಯೋಜನೆಗಳನ್ನು ಅನುಷ್ಠಾನಗೊಳಿಸುವದರಲ್ಲಿನ , ಪ್ರತಿಬಂಧಕಗಳನ್ನು ಗುರುತಿಸುವುದು ಸಹ ಇದರಲ್ಲಿ ಸೇರಿದೆ.
"ಅನುಷ್ಠಾನಕ್ಕೆ ಬರಬೇಕಾದ ಅನೇಕ ಯೋಜನೆಗಳನ್ನು ಈಗಾಗಲೇ ಗುರುತಿಸಲಾಗಿದೆ ಮತ್ತು ಉಳಿದ ಯೋಜನೆಗಳ ಗುರುತಿಸುವಿಕೆಯನ್ನು ಇನ್ನೆರಡು ವಾರಗಳಲ್ಲಿ ಮುಗಿಸುವಂತೆ ನಾವು ಇಲಾಖೆಗಳಿಗೆ ಸೂಚಿಸಿದ್ದೇವೆ.ಮುಖ್ಯಮಂತ್ರಿ ಅಡಿಯಲ್ಲಿ ಕೌನ್ಸಿಲ್ ಪುನಃಸ್ಥಾಪನೆಗೊಂಡಾಗ, ಯೋಜನೆಗಳ ಅನುಷ್ಠಾನ ಪ್ರಾರಂಭವಾಗುತ್ತದೆ" ಎಂದು ಪ್ರಿಯಾಂಕ್ ಹೇಳಿದರು.
ಉಪ ಯೋಜನೆಗಾಗಿ ಹಂಚಿಕೆಗೆ ಸಂಬಂಧಿಸಿದ ಕಾರ್ಯಗಳನ್ನು ಕೈಗೊಳ್ಳಲು ಮಾತ್ರ ಹಣಕಾಸು ಇಲಾಖೆಯು ವಿಶೇಷ ಸೆಲ್ ಅನ್ನು ಹೊಂದಿರುತ್ತದೆ. ಎಸ್ಸಿ / ಎಸ್ಟಿ ವ್ಯಕ್ತಿಗಳ ಮನೆ ಹಂಚಿಕೆ ಸೇರಿ ಲಾಭದಾಯಕ ಯೋಜನೆಗಳು ಉಪ ಯೋಜನೆ ಅಡಿಯಲ್ಲಿ 100% ಹಂಚಿಕೆಯಾಗುತ್ತವೆ, ಆದರೆ ಸಾಮಾನ್ಯ ಸಾಮಾಜಿಕ ವಲಯ ಯೋಜನೆಗಳು ಶಿಕ್ಷಣ, ಆರೋಗ್ಯ, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣ ಮತ್ತು ಕಾರ್ಮಿಕರಿಗೆ ಸಂಬಂಧಿಸಿದ ಯೋಜನೆಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಹಣವನ್ನು ನೀಡಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
H D KumaraswamyJailಜೈಲುಪ್ರಿಯಾಂಕ್ ಖರ್ಗೆಹೆಚ್ ಡಿ. ಕುಮಾರಸ್ವಾಮಿPriyank KhargeSC/ST sub-planಎಸ್ಸಿ / ಎಸ್ಟಿ ಉಪ ಯೋಜನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


