ರಾಜೀವ್ ಗಾಂಧಿ ಆರೋಗ್ಯ ವಿವಿ ಹೊಸ ಇತಿಹಾಸ: ಪರೀಕ್ಷೆ ಬರೆದ 15ನಿಮಿಷದಲ್ಲೇ ಫಲಿತಾಂಶ
ರಾಜೀವ್ ಗಾಂಧಿ ಆರೋಗ್ಯ. ವಿಶ್ವ ವಿದ್ಯಾನಿಲಯ ಎಂಡಿಎಸ್ ಮತ್ತು ದಂತ ವೈದ್ಯಕೀಯ ಡಿಪ್ಲೊಮಾ ಪರೀಕ್ಷೆ ನಡೆಸಿದ್ದು, ಪರಿಕ್ಷೆ ಮುಗಿದ 15 ನಿಮಿಷಗಳಲ್ಲೆ ಫಲಿತಾಂಶ ...

Published On :
ಬೆಂಗಳೂರು: ರಾಜೀವ್ ಗಾಂಧಿ ಆರೋಗ್ಯ. ವಿಶ್ವ ವಿದ್ಯಾನಿಲಯ ಎಂಡಿಎಸ್ ಮತ್ತು ದಂತ ವೈದ್ಯಕೀಯ ಡಿಪ್ಲೊಮಾ ಪರೀಕ್ಷೆ ನಡೆಸಿದ್ದು, ಪರಿಕ್ಷೆ ಮುಗಿದ 15 ನಿಮಿಷಗಳಲ್ಲೆ ಫಲಿತಾಂಶ ಪ್ರಕಟಿಸಿದೆ.
ಎಂಡಿಎಸ್ ಮತ್ತು ದಂತವೈದ್ಯಕೀಯ ಡಿಪ್ಲೊಮಾ ಕೋರ್ಸ್‌ಗಳ ಥಿಯರಿ ಪರೀಕ್ಷೆ ಜೂನ್‌ನಲ್ಲಿ ಏರ್ಪಡಿಸಲಾಗಿತ್ತು. ಎಂಡಿಎಸ್‌ನಲ್ಲಿ 9 ವಿಭಾಗ ಹಾಗೂ ದಂತವೈದ್ಯಕೀಯ ಡಿಪ್ಲೊಮಾದ 5 ವಿಭಾಗ ಸೇರಿ ಒಟ್ಟು 850 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಥಿಯರಿ ಪರೀಕ್ಷೆಗಳ ಮೌಲ್ಯಮಾಪನ ವನ್ನು ಪರೀಕ್ಷೆ ನಡೆದ ಕೆಲವೇ ದಿನದಲ್ಲಿ ಪೂರೈಸಿದ್ದರು.
ಪರೀಕ್ಷೆ ಮುಗಿದ ಕೆಲವೇ ನಿಮಿಷದಲ್ಲಿ ಫಲಿತಾಂಶ ನೀಡಲು ಸಾಧ್ಯವಾಗಿದೆ. ಡಿಜಿಟಲ್ ಮೌಲ್ಯಮಾಪನವೂ ಹೆಚ್ಚಿನ ಸಹಕಾರಿಯಾಗಿದೆ ಎಂದು ವಿವಿ ಉಪ ಕುಲಪತಿ ಡಾ. ಸಚ್ಚಿದಾನಂದ ಹೇಳಿದ್ದಾರೆ.ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಳ್ಳುತ್ತಿದ್ದಂತೆ ಎಲ್ಲ ಕಾಲೇಜಿನಿಂದ ವೆಬ್‌ಸೈಟ್‌ನಲ್ಲಿ ಅದನ್ನು ಅಪ್‌ಲೋಡ್ ಮಾಡಿದ್ದಾರೆ.
ರಾಜೀವ್ ಗಾಂಧಿ ವಿವಿ ಕೇಂದ್ರ ಕಚೇರಿಯಲ್ಲಿ ಥಿಯರಿ ಮತ್ತು ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ಕ್ರೋಢೀಕರಿಸಿ 15 ನಿಮಿಷದಲ್ಲಿ ಫಲಿತಾಂಶ ನೀಡಿದ್ದಾರೆ. ಇದು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ತಜ್ಞರ ಮೆಚ್ಚುಗೆಗೆ ಪಾತ್ರವಾಗಿದೆ.
ಜುಲೈ 12ರ ಸಂಜೆ 5 ಗಂಟೆಗೆ ಕಾಲೇಜುಗಳಿಂದ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲಾಗಿತ್ತು. ಅದಕ್ಕೆ ಥಿಯರಿ ಪರೀಕ್ಷೆಯ ಅಂಕಗಳನ್ನು ಸೇರಿಸಿ 5.15ಕ್ಕೆ ವಿದ್ಯಾರ್ಥಿಗಳಿಗೆ ಫಲಿತಾಂಶ ನೀಡಲಾಗಿದೆ ಎಂದು ವಿವಿಯ ಪರೀಕ್ಷಾಂಗ ವಿಭಾಗ ತಿಳಿಸಿದೆ. ಮೌಲ್ಯಮಾಪಕರು ಮತ್ತು ಕಾಲೇಜುಗಳೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರೆಂದು ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ.ಎಂ.ರಮೇಶ್ ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಪರೀಕ್ಷೆexamresultRajiv Gandhi University of Health Sciences15 minutesರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಫಲಿತಾಂಶ 15 ನಿಮಿಷ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


