ಶಿವಮೊಗ್ಗ: ದರೋಡೆಕೋರರಿಂದ ಉದ್ಯಮಿ ಅಳಿಯನ ಅಪಹರಣ ನಾಟಕ, 2 ಲಕ್ಷ ದೋಚಿ ಪರಾರಿ
ಜೆಡಿ (ಎಸ್) ನಾಯಕ ಮತ್ತು ಉದ್ಯಮಿಯೊಬ್ಬರ ಅಳಿಯ ಸೇರಿ ನಾಲ್ವರನ್ನು ಅಪರಿಚಿತರ ಗ್ಯಾಂಗ್ ಒಂದು ಕಾರಿನಲ್ಲಿ ಅಪಹರಿಸಿ2 ಲಕ್ಷ ರೂ. ಪಡೆದು ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

Published On :
ಶಿವಮೊಗ್ಗ: ಜೆಡಿ (ಎಸ್) ನಾಯಕ ಮತ್ತು ಉದ್ಯಮಿಯೊಬ್ಬರ ಅಳಿಯ ಸೇರಿ ನಾಲ್ವರನ್ನು ಅಪರಿಚಿತರ ಗ್ಯಾಂಗ್ ಒಂದು ಕಾರಿನಲ್ಲಿ ಅಪಹರಿಸಿ2 ಲಕ್ಷ ರೂ. ಪಡೆದು ಪರಾರಿಯಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಜೆಡಿಎಸ್ ನಾಯಕ ಉದ್ಯಮಿ ಹೆವನ್ ಹಬೀಬ್ ಅವರ ಅಪಹರಣಕ್ಕೆ ಸಂಚು ಹುಡಿದ್ದ ಗ್ಯಾಂಗ್ ಹಬೀಬ್ರ ಟೈಲ್ಸ್ ಅಂಗಡಿಗೆ ಗುರುವಾರ ಆಗಮಿಸಿದ್ದಾರೆ. ಆವೇಳೆಗೆ ಹೆವನ್ ಅಂಗಡಿಯಲ್ಲಿರದ ಕಾರಣ ಅವರ ಅಳಿಯ ಸಮೀವುಲ್ಲಾ ಹಾಗೂ ಅಂಗಡಿಯಲ್ಲಿದ್ದ ಗ್ರಾಹಕರು ಸೇರಿದಂತೆ ನಾಲ್ಕು ಜನರನ್ನು ಚಾಕು, ಗನ್ ಸೇರಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ಸಮೀವುಲ್ಲಾರ ಕಾರಿನಲ್ಲಿಯೇ ಅಪಹರಿಸಿಕೊಂಡು ಹೋಗಿದ್ದಾರೆ.
ಕೆಲ ಸಮಯದ ಬಳಿಕ ಶಿವಮೊಗ್ಗ ಹೊರವಲಯದಲ್ಲಿ ಕಾರು ನಿಲ್ಲಿಸಿದ ದುಷ್ಕರ್ಮಿಗಳೂ ಹಬೀಬ್ ಗೆ ಕರೆ ಮಾಡಿ ತಮ್ಮ ವಶದಲ್ಲಿರುವವರನ್ನು ಬಿಡುಗಡೆಗೊಳಿಸಲು 5 ಕೋಟಿ ರು. ಬೇಡಿಕೆ ಇಟ್ಟಿದ್ದಾರೆ ಇದಾದ ಎರಡು ಗಂಟೆಗಳ ಕಾಲ ತಮ್ಮ ವಶದಲ್ಲಿದ್ದವರನ್ನ ಒಂದೇ ಸ್ಥಳದಲ್ಲಿರಿಸಿಕೊಂಡಿದ್ದ ಗ್ಯಾಂಗ್ ಹಣ ನೀಡುವಂತೆ ಒತ್ತಾಯಿಸಿದೆ.
ಆದರೆ ಇಷ್ಟರಲ್ಲಿ ಕಾರ್ಯಪ್ರವೃತ್ತರಾದ ಪೋಲೀಸರು ಅಪಹರಣಕಾರರ ಬೆನ್ನು ಹತ್ತಿದ್ದಾರೆ. ತಾವಿದ್ದ ಸ್ಥಳದೆಡೆ ಪೋಲೀಸರು ಬರುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತ ದುಷ್ಕರ್ಮಿಗಳ ತಂಡ ಕಾರಿನಲ್ಲೇ ಶಿವಮೊಗ್ಗದ ವಿವಿಧ ರಸ್ತೆ ಹಾಗೂ ಬಡಾವಣೆಗಳನ್ನು ಸುತ್ತಿದ್ದಾರೆ. ಇದರ ನಡುವೆ ತಮ್ಮ ವಾಹನವನ್ನು ಸಹ ಬದಲಿಸಿದ ಇವರು ಪೋಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ.
ಕಡೆಗೊಮ್ಮೆ ಪೋಲೀಸರಿಂದ ತಾವು ಪಾರಾಗಲು ಸಾಧ್ಯವಿಲ್ಲ ಎಂದು ಅರಿತ ಗ್ಯಾಂಗ್ ತಾವು ಅಪಹರಿಸಿದವರನ್ನೆಲ್ಲಾ ನಗರದ ಲಕ್ಷ್ಮೀ ಟಾಕೀಸ್ ಸಮೀಪ ಬಿತ್ಟು ಕಾರಿನಲ್ಲಿದ್ದ 2 ಲಕ್ಷ ರು. ಸಮೇತ ಪರಾರಿಯಾಗಿದೆ.
ಸಧ್ಯ ಪೋಲೀಸರು ಈ ಗ್ಯಾಂಗ್ ನ ಹುಡುಕಾಟದಲ್ಲಿ ತೊಡಗಿದ್ದು ರೌಡಿ ಶೀಟರ್ ಜಮೀರ್ ಅಲಿಯಾಸ್ ಟೈಲ್ಸ್ ಬಚ್ಚ ಮತ್ತು ಆತನ ಗ್ಯಾಂಗ್ ಈ ಕೃತ್ಯ ಎಸಗಿದ್ದಾಗಿ ಪೋಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಘಟನೆ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಹಾಗೂ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


