ಫೇಸ್ ಬುಕ್ ನಲ್ಲಿ ಬ್ರಿಟನ್ ಮಹಿಳೆಯ ಆಫರ್ ನಂಬಿ 81.44 ಲಕ್ಷ ಕಳೆದುಕೊಂಡ ಉಡುಪಿ ಮೂಲದ ಉದ್ಯಮಿ!
ಫೇಸ್ ಬುಕ್ ನಲ್ಲಿ ಬ್ರಿಟನ್ ಮಹಿಳೆಯ ಉದ್ಯಮದ ಆಫರ್ ನ್ನು ನಂಬಿ ಉಡುಪಿ ಮೂಲದ ಉದ್ಯಮಿಯೊಬ್ಬರು 81.44 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.

Published On :
ಬೆಂಗಳೂರು: ಫೇಸ್ ಬುಕ್ ನಲ್ಲಿ ಬ್ರಿಟನ್ ಮಹಿಳೆಯ ಉದ್ಯಮದ ಆಫರ್ ನ್ನು ನಂಬಿ ಉಡುಪಿ ಮೂಲದ ಉದ್ಯಮಿಯೊಬ್ಬರು 81.44 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಮಹಿಳೆ ಭಾರತದಲ್ಲಿ ತನ್ನ ಉದ್ಯಮವನ್ನು ನೋಡಿಕೊಳ್ಳುವಂತೆ ಉಡುಪಿ ಮೂಲದ ಉದ್ಯಮಿಗೆ ಆಹ್ವಾನ ನೀಡಿದ್ದಾರೆ, ಆದರೆ ಇದಕ್ಕೂ ಮುನ್ನ ಕಸ್ಟಮ್ಸ್ ಅಧಿಕಾರಿಗಳಿಂದ ತನ್ನ ಉದ್ಯಮದ ಪ್ರತಿನಿಧಿಗಳನ್ನು ಬಿಡುಗಡೆ ಮಾಡಿಸಲು ಹಣ ಪಾವತಿ ಮಾಡಲು ಸಹಾಯ ಮಾಡುವಂತೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ 11 ಕಂತುಗಳಲ್ಲಿ ಉಡುಪಿ ಮೂಲದ ಉದ್ಯಮಿ ಒಟ್ಟು 81.44 ಲಕ್ಷ ಕಳೆದುಕೊಂಡಿದ್ದಾರೆ.
ಹಣ ಕಳೆದುಕೊಂಡಿರುವ ಬಗ್ಗೆ ಈಗ ಸಿಐಡಿಗೆ ದೂರು ನೀಡಿದ್ದು, ಸಿಐಡಿ ಅಧಿಕಾರಿಗಳು ಇನ್ನಷ್ಟೇ ತನಿಖೆ ನಡೆಸಬೇಕಿದೆ. ತನ್ನದೇ ಸ್ವಂತ ಉದ್ಯಮ ನಡೆಸುತ್ತಿರುವ ಉಡುಪಿ ಮೂಲದ ಉದ್ಯಮಿಗೆ 2017 ರ ಆಗಸ್ಟ್ ನಲ್ಲಿ ಫೇಸ್ ಬುಕ್ ಮೂಲಕ ಸೋಫಿಯಾ ಎಂಬ ಮಹಿಳೆ ಪರಿಚಯವಾಗಿ ತನ್ನನ್ನು ಬ್ರಿಟನ್ ನ ಉದ್ಯಮಿ ಎಂದು ಪರಿಚಯಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಇಬ್ಬರೂ ಸಹ ಉದ್ಯಮದ ವಿಷಯವಾಗಿ ಚರ್ಚಿಸುತ್ತಿದ್ದರು, ಕೆಲ ದಿನಗಳ ನಂತರ ತನ್ನ ಉದ್ಯಮದಿಂದ ಬಂದ ಲಾಭವನ್ನು ಭಾರತದ ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡಬೇಕೆಂದು ಸೋಫಿಯಾ ಉಡುಪಿ ಉದ್ಯಮಿಗೆ ಹೇಳಿದ್ದರು. ಅಷ್ಟೇ ಅಲ್ಲದೇ ಆ ಉದ್ಯಮವನ್ನು ನೋಡಿಕೊಳ್ಳುವಂತೆ ಆಹ್ವಾನ ನೀಡಿ, ಹೂಡಿಕೆ ಮಾಡಲು ತನ್ನ ಪ್ರತಿನಿಧಿಯನ್ನು 100 ಮಿಲಿಯನ್ ಪೌಂಡ್ ಗಳೊಂದಿಗೆ ಭಾರತಕ್ಕೆ ಕಳಿಸಿದ್ದಾಗಿ ತಿಳಿಸಿದ್ದಾರೆ. ಮೂಲತಃ ಸಿವಿಲ್ ಇಂಜಿನಿಯರ್ ಆಗಿದ್ದ ಉದ್ಯಮಿ ಬ್ರಿಟನ್ ಮಹಿಳೆಯ ಆಫರ್ ಬಲೆಗೆ ಬಿದ್ದಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಬ್ರಿಟನ್ ಮಹಿಳೆಯ ಪ್ರತಿನಿಧಿ ಎಂದು ಪರಿಚಯಿಸಿಕೊಂಡ ವ್ಯಕ್ತಿ ಉಡುಪಿ ಉದ್ಯಮಿಗೆ ಕರೆ ಮಾಡಿ ತನ್ನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದು, ಅವರಿಗೆ ವಿವಿಧ ಕಾರಣಗಳಿಂದಾಗಿ ಹಣಾ ಪಾವತಿ ಮಾಡಬೇಕು ಎಂದು ಉದ್ಯಮಿಯಿಂದ 11 ಕಂತುಗಳಲ್ಲಿ ಒಟ್ಟು 81.44 ಲಕ್ಷ ರೂಪಾಯಿ ಪಡೆದಿದ್ದಾರೆ. ನಂತರ ಉಡುಪಿ ಉದ್ಯಮಿಗೆ ಇದು ವಂಚನೆ ಎಂದು ತಿಳಿದಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


