ಮೈಸೂರು: 1950 ಕಿಮೀ ನಿಂತು ಪ್ರಯಾಣಿಸಿದ ಕುಟುಂಬ, ರೈಲ್ವೆಗೆ 37 ಸಾವಿರ ರೂ. ದಂಡ!
ರೈಲು ಪ್ರಯಾಣಕ್ಕಾಗಿ ಮುಂಗಡ ಟಿಕೆಟ್ ಕಾದಿರಿಸಿದ್ದರೂ ಕುಳಿತುಕೊಳ್ಳಲು ಆಸನ ಸಿಕ್ಕದೆ 1950 ಕಿಮೀ ದೂರವನ್ನು ನಿಂತೇ ಪ್ರಯಾಣ ಮಾಡಿದ್ದ ಮೈಸೂರು ಮೂಲದ ಕುಟುಂಬವೊಂದು ಗ್ರಾಹಕ....

Published On :
ಮೈಸೂರು: ರೈಲು ಪ್ರಯಾಣಕ್ಕಾಗಿ ಮುಂಗಡ ಟಿಕೆಟ್ ಕಾದಿರಿಸಿದ್ದರೂ ಕುಳಿತುಕೊಳ್ಳಲು ಆಸನ ಸಿಕ್ಕದೆ 1950 ಕಿಮೀ ದೂರವನ್ನು ನಿಂತೇ ಪ್ರಯಾಣ ಮಾಡಿದ್ದ ಮೈಸೂರು ಮೂಲದ ಕುಟುಂಬವೊಂದು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿತ್ತು. ಈ ಸಂಬಂಧ ವಾದ ಆಲಿಸಿದ ನ್ಯಾಯಾಲಯ ರೈಲ್ವೆ ಇಲಾಖೆಗೆ 37 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡೀದೆ.
ಮೈಸೂರು ಮೂಲದ ವಿಜೇಶ್ ಎನ್ನುವವರ ಕುಟುಂಬ ಮಧ್ಯಪ್ರದೇಶ ಉಜ್ಜಯಿನಿಯಿಂದ ಮೈಸೂರಿಗೆ ಹೊರಟಿದ್ದು ಇದಕ್ಕಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿತ್ತು. ಆದರೆ ರೈಲಿನಲ್ಲಿ ಅವರಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಿಕೊಡುವಲ್ಲಿ ರೈಲ್ವೆ ಇಲಾಖೆ ನಿರ್ಲಕ್ಷ ತಾಳಿತ್ತು. ಇದರಿಂದ ಕೋಪಗೊಂಡ ಕುಟುಂಬಸ್ಥರು ಈ ಬಗ್ಗೆ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿತ್ತು..
ಇದೀಗ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ರೈಲ್ವೆ ಇಲಾಖೆಗೆ 37 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ. ಈ ದಂಡದ ಮೊತ್ತವನ್ನು ವಿಜೇಶ್ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ಪಾವತಿಸುವಂತೆ ನ್ಯಾಯಾಲಯ ಸೂಚಿಸಿದೆ.
ವಿಜೇಶ್ ತಮ್ಮ ಕುಟುಂಬದೊಡನೆ ಜೈಪುರ್- ಮೈಸೂರು ಎಕ್ಸ್ ಪ್ರೆಸ್ ನಲ್ಲಿ ಮೇ 25, 2017ರಂದು ಉಜ್ಜಯಿನಿಯಿಂದ ಮೈಸೂರಿಗೆ ಪಯಣಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
mysoreಮೈಸೂರುರೈಲ್ವೆ ಇಲಾಖೆconsumer courtRailway Departmentಗ್ರಾಹಕ ನ್ಯಾಯಾಲಯVijeshJaipur-Mysore Expressವಿಜೇಶ್ಜೈಪುರ-ಮೈಸೂರು ಎಕ್ಸ್ ಪ್ರೆಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


