ತುಮಕೂರು: ಮನೆಗೆ ನುಗ್ಗಿದ ಚಿರತೆ, ನಗರದಲ್ಲಿ ಆತಂಕದ ವಾತಾವರಣ
ಚಿರತೆಯೊಂದು ಆಕಸ್ಮಿಕವಾಗಿ ಮನೆಯೊಳಗೆ ನುಗ್ಗಿದ ಪರಿಣಾಮ ಮನೆಯವರು ಆತಂಕಕ್ಕೊಳಲಾದ ಘಟನೆ ತುಮಕೂರಿನ ಜಯನಗರದಲ್ಲಿ ನಡೆದಿದೆ.

Published On :
ತುಮಕೂರು: ಚಿರತೆಯೊಂದು ಆಕಸ್ಮಿಕವಾಗಿ ಮನೆಯೊಳಗೆ ನುಗ್ಗಿದ ಪರಿಣಾಮ ಮನೆಯವರು ಆತಂಕಕ್ಕೊಳಗಾಗಿರುವ ಘಟನೆ ತುಮಕೂರಿನ ಜಯನಗರದಲ್ಲಿ ನಡೆದಿದೆ.
ಜಯನಗರ ಪೂರ್ವ 1ನೇ ಕ್ರಾಸ್‌ನಲ್ಲಿರುವ ರಂಗನಾಥ್ ಎನ್ನುವವರ ಮನೆಗೆ ಚಿರತೆ ನುಗ್ಗಿದ್ದು ಮನೆಯವರನ್ನು ಆತಂಕೆಕ್ಕೆ ತಳ್ಳಿತ್ತು. ಚಿರತೆ ನುಗ್ಗಿದ್ದ ಕಾರಣ ರಂಗನಾಥ್ ಪತ್ನಿ ವನಜಾಕ್ಷಿ ಹಾಗೂ ಸೊಸೆ ವಿನುತಾ ಬಾತ್ ರೋಮಿನಲ್ಲಿ ಸೇರಿ ಪ್ರಾಣ ಉಳಿಸಿಕೊಂಡರು. ಇದಕ್ಕೂಮುನ್ನ ಚಿರತೆ ಬನಶಂಕರಿ ವಾಚರ್ ಮಾಲೀಕರಾದ ಗೋವಿಂದ್ ರಾಜು ಎನ್ನುವವರ ಮೇಲೆ೪ಯೂ ಚಿರತೆ ದಾಳಿ ನಡೆಸಿತ್ತು. ಅದೃಷ್ಟವಶಾತ್ ಗೋವಿಂದ್ ರಾಜು ಸಣ್ಣ ಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದರು.
ತುಮಕೂರು ನಗರಕ್ಕೆ ಚಿರತೆ ಬಂದಿದ್ದನ್ನು ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಧಾವಿಸಿ ಬಂದಿದ್ದು ಇದೀಗ ಹಾಸನದಿಂಡ ಅರಿವಳಿಕೆ ತಜ್ಞ ಡಾ.ಮುರಳೀಧರ್ ಮತ್ತು ತಂಡ ಆಗಮಿಸುವ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


