ಬೆಳಗಾವಿ: ರಸ್ತೆ ಅಪಘಾತ, ಹಿರಿಯ ಪತ್ರಕರ್ತ ವೀರೇಶ ಹಿರೇಮಠ ಸಾವು
ಬೆಳಗಾವಿ ಬಳಿ ನಂದಗಡ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಹಿರಿಯ ಪತ್ರಕರ್ತ ಡಾ. ವೀರೇಶ ಹಿರೇಮಠ ಮೃತಪಟ್ಟಿದ್ದಾರೆ.

Published On :
ಬೆಳಗಾವಿ: ಬೆಳಗಾವಿ ಬಳಿ ನಂದಗಡ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಹಿರಿಯ ಪತ್ರಕರ್ತ ಡಾ. ವೀರೇಶ ಹಿರೇಮಠ ಮೃತಪಟ್ಟಿದ್ದಾರೆ.
ಕುಟುಂಬದೊಡನೆ ಗೋವಾ ಪ್ರವಾಸ ಮುಗಿಸಿ ಬಾಗಲಕೋಟೆಗೆ ಹಿಂತಿರುಗುತ್ತಿದ್ದ ವೇಳೆ ಈ ಅಪಘಾತ ಸಂಬವಿಸಿದೆ. ಹಿರೇಮಠ ಅವರಿದ್ದ ಕಾರು ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಅಪಘಾತವಾಗಿದ್ದು ಘಟನೆ ವೇಳೆ ಕಾರಿನಲ್ಲಿದ್ದ ಕಾರಿನಲ್ಲಿದ್ದ ಪತ್ನಿ ಗೌರಿ ಮತ್ತು ಕಾರು ಚಾಲಕ ಸುನೀಲ್ ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಧಾರವಾಡದ ಸಿವಿಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಾಗಲಕೋಟೆಯ ಬಿವಿವಿ ಕಾಲೇಜಿನಲ್ಲಿ ಪತ್ರಿಕೋದ್ಯಮ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ವೀರೇಶ ಹಿರೇಮಠ ಎಂ.ಎ(ಎಂಸಿ ಜೆ), ಪಿಜಿ ಡಿಪ್ಲೋಮಾ, ಪಿಎಚ್ ಡಿ ಪದವಿ ಪಡೆದಿದ್ದರು.
ಮೃತದ ಪಾರ್ಥಿವ ಶರೀರವನ್ನು ಧಾರವಾಡ ಸಿವಿಲ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
road accidentರಸ್ತೆ ಅಪಘಾತJournalistಪತ್ರಕರ್ತbagalkotಬಾಗಲಕೋಟೆDr. Veeresh HirematBVV Collegeಡಾ. ವೀರೇಶ್ ಹಿರೇಮಠ್ಬಿವಿವಿ ಕಾಲೇಜ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


