ಬಳ್ಳಾರಿ: ಮಹಾನಗರಪಾಲಿಕೆ ಸದಸ್ಯನ ಹತ್ಯೆಗೆ ಯತ್ನ, ಮಾರಕಾಸ್ತ್ರಗಳಿಂದ ಹಲ್ಲೆ
ಬಳ್ಳಾರಿ ನಗರಪಾಲಿಕೆ ಸದಸ್ಯ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹಂದ್ರಾಳ ಸೀತಾರಾಮ ಅವರ ಮೇಲೆ ಖಾರದ ಪುಡಿ ಎರಚಿ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ.

Published On :
ಬಳ್ಲಾರಿ: ಬಳ್ಳಾರಿ ನಗರಪಾಲಿಕೆ ಸದಸ್ಯ, ಬಳ್ಳಾರಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಹಂದ್ರಾಳ ಸೀತಾರಾಮ ಅವರ ಮೇಲೆ ಖಾರದ ಪುಡಿ ಎರಚಿ ಹತ್ಯೆಗೆ ಪ್ರಯತ್ನ ನಡೆಸಲಾಗಿದೆ.
ಸೀತಾರಾಮ ಅವರ ಮನೆ ಮುಂದೆಯೇ ಅವರ ಹತ್ಯಾ ಪ್ರಯತ್ನ ನಡೆದಿದ್ದು ಆಂದ್ರ ಪ್ರದೇಶದ ಅನಂತಪುರ ಹಾಗೂ ತಾಡಪತ್ರಿಯಿಂದ ಬಂದಿದ್ದ ಹನ್ನೊಂದು ಜನರ ಗುಂಪು ಈ ದಾಳಿ ನಡೆಸಿದೆ.
ತಕ್ಷಣ ಜಾಗೃತರಾದ ಸೀತಾರಾಮ್ ಸ್ಥಳೀಯರು ಹಾಗೂ ಬೆಂಬಲಿಗರ ನೆರವಿನಿಂದ ತಪ್ಪಿಸಿಕೊಂಡಿದ್ದಾರೆ. ಹತ್ಯಾ ಪ್ರಯತ್ನದಲ್ಲಿದ್ದ ತಂಡದ ಓರ್ವ ಸದಸ್ಯರನ್ನು ಹಿಡಿದ ಸಾರ್ವಜನಿಕರು ಾವನನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ.ಜತೆಗೆ ಕೃತ್ಯಕ್ಕೆ ಬಳಸಲಾಗಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಸೀತಾರಾಮ್ ಅವರ ಮೇಲೆ ಈ ಹಿಂದೆಯೂ ಸಾಕಷ್ಟು ಬಾರಿ ಹತ್ಯಾ ಪ್ರಯತ್ನಗಳು ನಡೆದಿದ್ದು ಇದು ಹಳೆ ದ್ವೇಷದ ಕಾರಣ ನಡೆದಿರಬಹುದೆಂದು ಶಂಕಿಸಲಾಗಿದೆ. ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Bellaryಬಳ್ಳಾರಿMurder attemptHandrala SitaramBellary corporation memberಹತ್ಯೆ ಪ್ರಯತ್ನಹಂದ್ರಾಳ ಸೀತಾರಾಮ್ಬಳ್ಳಾರಿ ಮಹಾನಗರಪಾಲಿಕೆ ಸದಸ್ಯ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


