ಕಲಬುರ್ಗಿ: ತಡರಾತ್ರಿ ಪೋಲೀಸ್ ಕಾರ್ಯಾಚರಣೆ, ಫೈರಿಂಗ್ ನಡೆಸಿ ಕುಖ್ಯಾತ ರೌಡಿಯ ಬಂಧನ
ಕುಖ್ಯಾತ ರೌಡಿ ಶೀಟರ್ ಮೇಲೆ ಬುಧವಾರ ತಡರಾತ್ರಿ ಕಲಬುರ್ಗಿ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ನಡೆದಿದೆ.

Published On :
ಕಲಬುರ್ಗಿ: ಕುಖ್ಯಾತ ರೌಡಿ ಶೀಟರ್ ಮೇಲೆ ಬುಧವಾರ ತಡರಾತ್ರಿ ಕಲಬುರ್ಗಿ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ನಡೆದಿದೆ.
ರೌಡಿ ಶೀಟರ್ ಇದ್ದಿಲು ಮಲ್ಲು ಮೇಲೆ ಪೋಲೀಸರು ಗುಂಡು ಹಾರಿಸಿದ್ದು ಕಲಬುರ್ಗಿ ನಗರದ ಹೊರವಲಯದಲ್ಲಿರುವ ಕೆಸರಟಗಿ ಗಾರ್ಡನ್ ಸಮೀಪ ಈ ಘಟನೆ ಸಂಭವಿಸಿಸಿದೆ.
ಒಂಭತ್ತಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೋಲೀಸ್ರೈಗೆ ಬೇಕಾಗಿದ್ದ ಈತನನ್ನು ಬಂಧಿಸಲು ಪೋಲೀಸರು ಭಾರೀ ಸಾಹಸ ನಡೆಸಿದ್ದಾರೆ. ನಿನ್ನೆ ಆತ ಕಲಬುರ್ಗಿಯ ಹೊರವಲಯದಲ್ಲಿದ್ದ ನಿಖರ ಮಾಹಿತಿ ಪಡೆದ ಪೋಲೀಸರು ಆತನನ್ನು ಬಂಧಿಸಲು ತೆರಳಿದ್ದಾರೆ. ಆಗ ಆತ ಪೋಲೀಸರ ಮೇಲೆ ಹಲ್ಲೆ ನಡೆಸಿದ್ದು ಪರಾರಿಯಾಗಲು ಪ್ರಯತ್ನಿಸಿದ್ದಾನೆ. ಆಗ ಆತ್ಮರಕ್ಷಣೆಗಾಗಿ ಪೋಲೀಸರು ಫೈರಿಂಗ್ ನಡೆಸಿದರೆಂದು ಹೇಳಲಾಗಿದೆ.
ಗುಂಡೇಟು ತಿಂದ ರೌಡಿಯನ್ನು ಪೋಲೀಸರು ಬಂಧಿಸಿದ್ದು ಪ್ರಕರಣದಲ್ಲಿ ಮೂವರು ಪೋಲೀಸರು ಸಹ ಗಾಯಗೊಂಡಿದ್ದಾರೆ. ಬಂಧಿತ ರೌಡಿ ಇದ್ದಿಲು ಮಲ್ಲು ಇತ್ತೀಚೆಗೆ ಎನ್ ಕಂಟರ್ ಗೆ ಬಲಿಯಾಗಿದ್ದ ಕರಿ ಚಿರತೆ ಅಲಿಯಾಸ್ ಮಲ್ಲಿಕಾರ್ಜುನನ ಸಹಚರನಾಗಿದ್ದ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


