ಕಾವೇರಿ ಕುಡಿಯುವ ನೀರು ಯೋಜನೆಗೆ ಜಪಾನ್ ಸಾಲ: ಜನವರಿ ಅಂತ್ಯದಲ್ಲಿ ಅಂತಿಮ ನಿರ್ಧಾರ
ಕಾವೇರಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಜಪಾನ್ ರಾಷ್ಟ್ರದಿಂದ ರೂ.5,500 ಕೋಟಿ ಸಾಲ ಪಡೆಯುವ ಸಂಬಂಧ ರಾಜ್ಯ ಸರ್ಕಾರ ಜನವರಿ ತಿಂಗಳ ಅಂತ್ಯದಲ್ಲಿ...

Published On :
ಬೆಂಗಳೂರು: ಕಾವೇರಿ ಕುಡಿಯುವ ನೀರು ಪೂರೈಕೆ ಯೋಜನೆಗೆ ಜಪಾನ್ ರಾಷ್ಟ್ರದಿಂದ ರೂ.5,500 ಕೋಟಿ ಸಾಲ ಪಡೆಯುವ ಸಂಬಂಧ ರಾಜ್ಯ ಸರ್ಕಾರ ಜನವರಿ ತಿಂಗಳ ಅಂತ್ಯದಲ್ಲಿ ಅಂತಿಮವಾಗಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಜ.4 ರಂದು ಕೇಂದ್ರ ಹಣಕಾಸು ಸಚಿವಾಲಯ ರಾಜ್ಯ ನಗರಾಭಿವೃದ್ಧಿ ಇಲಾಖೆ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಕುಡಿಯುವ ನೀರು ಯೋಜನೆ ಕುರಿತಂತೆ ಜಪಾನ್ ರಾಷ್ಟ್ರದೊಂದಿಗೆ ಸಾಲ ಪಡೆಯುವ ವಿಚಾರ ಕುರಿತಂತೆ ಜ.24 ರಂದು ಮಾತುಕತೆ ನಡೆಯಲಿದೆ ಎಂದು ತಿಳಿಸಿದೆ. ಈ ಹಿನ್ನಲೆಯಲ್ಲಿ ಸಾಲ ಪಡೆಯುವ ಸಂಬಂಧ ರಾಜ್ಯ ಸರ್ಕಾರ ಪ್ರಸಕ್ತ ತಿಂಗಳ ಅಂತ್ಯದಲ್ಲಿ ಅಂತಿಮ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
2007ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಚನೆಯಾದಾಗ ಅದ ವ್ಯಾಪ್ತಿಗೆ 110 ಗ್ರಾಮಗಳು ಸೇರ್ಪಡೆಗೊಂಡಿದ್ದವು. ಈ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಉದ್ದೇಶಿತ ಯೋಜನೆ ನೆರವಾಗಲಿದೆ ಎಂದು ಸಚಿವ ಸದಾನಂದ ಗೌಡ ಅವರ ನೇತೃತ್ವದ ನಿಯೋಗವು ಯೋಜನೆಯ ತುರ್ತು ಜಾರಿ ಅಗತ್ಯವನ್ನು ವಿವರಿಸಿತ್ತು.
ಬಿಬಿಎಂಪಿ ವ್ಯಾಪ್ತಿಯಲ್ಲಿನ 245 ಚದರ ಕಿಲೋಮೀಟರ್ ನಲ್ಲಿ ಬ್ಯಾಟರಾಯನಪುರ, ಮಹದೇವಪುರ, ರಾಜರಾಜೇಶ್ವರಿ ನಗರ, ಬೊಮ್ಮನಹಳ್ಳಿ ಮತ್ತು ದಾಸರಹಳ್ಳಿಗಳಲ್ಲಿನ 110 ಗ್ರಾಮಗಳಿಗೆ ನೀರು ಪೂರೈಸುವ ಈ ಯೋಜನೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅನುಷ್ಠಾನಗೊಳಿಸಲಿದೆ.
ಯೋಜನೆಗೆ ಜಪಾನ್ ರಾಷ್ಟ್ರದಿಂದ ಸಾಲ ಪಡೆಯುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಉನ್ನತಾಧಿಕಾರಿ, 1.5 ವರ್ಷದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಶ್ರಮ ಇದಾಗಿದೆ. ಸಾಲ ಪಡೆದ ಬಳಿಕ ಯೋಜನೆ ಕುರಿತ ದಾಖಲೆಗಳನ್ನು ವಿವರಣಾತ್ಮಕವಾಗಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜಪಾನ್ ರಾಷ್ಟ್ರದ ಅಧಿಕಾರಿಗಳೊಂದಿಗೆ ಅಂತಿಮವಾಗಿ ಒಪ್ಪಂದವಾಗಲಿದೆ ಎಂದು ಹೇಳಿದ್ದಾರೆ.
ಪ್ರತೀಯೊಂದು ಯೋಜನೆಗೂ ಸಾಲ ಪಡೆಯುವುದಕ್ಕೆ ಕೆಲವೊಂದು ನಿಯಮಗಳಿದ್ದು, ಯೋಜನೆಗೆ ಶೇ.85 ರಷ್ಟು ಸಾಲವನ್ನು ಪಡೆಯಬಹುದಾಗಿದೆ. ಇನ್ನುಳಿದ ಶೇ.15 ರಷ್ಟು ಹಣವನ್ನು ರಾಜ್ಯ ಸರ್ಕಾರ ಹಾಗೂ ಯೋಜನೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಂಚಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.
ಅತ್ಯಂತ ಕಡಿಮೆ ಬಡ್ಡಿಯಲ್ಲಿ ಜಪಾನ್ ರಾಷ್ಟ್ರ ಸಾಲವನ್ನು ನೀಡುತ್ತಿದ್ದು, ಇದು ಯೋಜನೆಯನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಬಹುದೊಡ್ಡ ಆರ್ಥಿಕ ಸಹಾಯವಾಗಿದೆ. ಮೊದಲನೇ ಹಂತದಲ್ಲಿ ಜಪಾನ್ ಈ ಮೊದಲು ರೂ.1,200 ಕೋಟಿ ಸಾಲವನ್ನು (1996-2006) ಯೋಜನೆಯನ್ನು ಬಿಡಬ್ಲ್ಯೂಎಸ್ಎಸ್'ಬಿಗೆ ನೀಡಿತ್ತು. ಎರಡನೇ ಹಂತದಲ್ಲಿ ರೂ.3,3384 ಕೋಟಿ ನೀಡಿತ್ತು ಎಂದಿದ್ದಾರೆ. ಆದರೆ, ಜಪಾನ್ ರಾಷ್ಟ್ರ ಎಷ್ಟು ಬಡ್ಡಿ ಆಧಾರದ ಮೇಲೆ ಸಾಲವನ್ನು ನೀಡುತ್ತಿದೆ ಎಂಬುದರ ಕುರಿತು ಮಾಹಿತಿಯನ್ನು ಬಹಿರಂಗಪಡಿಸಲು ಅಧಿಕಾರಿ ನಿರಾಕರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


