ಬೆಂಗಳೂರು: ಇಂದಿರಾನಗರ ಪಬ್ ಪುನಾರಂಭಕ್ಕೆ ಹೈ ಕೋರ್ಟ್ ಆದೇಶ
ಬೆಂಗಳೂರಿನ ಇಂದಿರಾನಗರಲ್ಲಿರುವ ‘ಟಿಪ್ಲರ್ ಆನ್ ದಿ ರೂಫ್’ ಬಾರ್ ಅಂಡ್ ರೆಸ್ಟೋರಂಟ್‌ನಲ್ಲಿ ರಾತ್ರಿ ವೇಳೆ ನಡೆಯುವ ಪಾರ್ಟಿಗಳಿಂದ ಶಬ್ದಮಾಲಿನ್ಯವಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

Published On :
ಬೆಂಗಳೂರು: ಬೆಂಗಳೂರಿನ ಇಂದಿರಾನಗರಲ್ಲಿರುವ ‘ಟಿಪ್ಲರ್ ಆನ್ ದಿ ರೂಫ್’ ಬಾರ್ ಅಂಡ್ ರೆಸ್ಟೋರಂಟ್‌ನಲ್ಲಿ ರಾತ್ರಿ ವೇಳೆ ನಡೆಯುವ ಪಾರ್ಟಿಗಳಿಂದ ಶಬ್ದಮಾಲಿನ್ಯವಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ. ಈ ಕುರಿತಂತೆ ತನಿಖೆಗೆ ಆದೇಶಿಸಿರುವ ಕರ್ನಾಟಕ ಹೈಕೋರ್ಟ್ ಬಿಬಿಎಂಪಿ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿಯಾಗಿ ಪರಿಶೀಲಿಸಬೇಕು ಎಂದು ಖೇಳಿದೆ.
ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ಪ್ರಕರಣದ ವಿಚಾರಣೆ ನಡೆಸಿದ್ದು ಶಬ್ದಮಾಲಿನ್ಯ ಆಗುತ್ತಿದೆ ಎಂದು ಆರೋಪಿಸಿ ಬಾರ್ ಆಂಡ್ ರೆಸ್ಟೋರೆಂಟ್ ನ್ನು ಮುಚ್ಚಲಾಗಿದೆ ಎಂದು ‘ಪಿಂಕ್ ಪ್ಯಾಂಥರ್ ಹಾಸ್ಪಿಟಾಲಿಟಿ ಕಂಪನಿ’ಗೆ ಸೇರಿದ ‘ಟಿಪ್ಲರ್ ಆನ್ ದಿ ರೂಫ್’ ಬಾರ್ ಅಂಡ್ ರೆಸ್ಟೋರಂಟ್‌ನ ಅಮಿತ್ ಅಗರವಾಲ್ ರಿಟ್ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರಾ ಪರ ವಕೀಲರು ವಾದಮಂಡನೆ ಮಾಡಿ ರೆಸ್ಟೋರೆಂಟ್ ಮೂರನೆ ಮಹಡಿಯಲ್ಲಿದೆ. ಾದರ ಕಾರ್ಯಚಟುವಟಿಕೆಯಲ್ಲಿ ಯಾವ ನಿಯಮಗಳೂ ಉಲ್ಲಂಘನೆಯಾಗಿಲ್ಲ. ವಿನಾಕಾರಣ ಬಿಬಿಎಂಪಿ ಅದನ್ನು ಮುಚ್ಚಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಯಿಸಿದ ಕೋರ್ಟ್ ಬಾರ್ ಆಂಡ್ ರೆಸ್ಟೋರೆಂಟ್ ವ್ಯಾಪಾರಕ್ಕೆ ಅನುವು ಮಾಡಿಕೊಡಿ ಎಂದು ಬಿಬಿಎಂಪಿ ಗೆ ಆದೇಶ ನೀಡಿದೆ.
ಇನ್ನು ಮೂರು ವಾರಗಳಲ್ಲಿ ಸ್ಥಳ ಪರಿಶೀಲನೆ ವರದಿ ನೀಡುವಂತೆ ಹೇಳಿರುವ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜ. 17ಕ್ಕೆ ಮುಂದೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Karnataka High Courtಕರ್ನಾಟಕ ಹೈಕೋರ್ಟ್Bruhat Bengaluru Mahanagara Palike (BBMP)Tippler on the Roof restaurantKarnataka State Pollution Control Board (KSPCB)ಬ್ರಹತ್ ಬೆಂಗಳೂರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


