ರಾಜ್ಯ

ಜಮಖಂಡಿ:ರಾಹುಲ್ ಜನಾರ್ಶೀವಾದ ಯಾತ್ರೆ :ಪ್ರಧಾನಿ ವಿರುದ್ಧ ಟೀಕೆ

ಪ್ರಧಾನಿ ನರೇಂದ್ರಮೋದಿ ಅವರು ಬಸವಣ್ಣನವರ ಮಾತಿನಂತೆ ನುಡಿದಂತೆ ನಡೆಯುತ್ತಿಲ್ಲಾ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ

ಜಮಖಂಡಿ:ರಾಹುಲ್ ಜನಾರ್ಶೀವಾದ ಯಾತ್ರೆ :ಪ್ರಧಾನಿ ವಿರುದ್ಧ ಟೀಕೆ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಚಿತ್ರ
Published On :

ಜಮಖಂಡಿ :ಪ್ರಧಾನಿ ನರೇಂದ್ರಮೋದಿ ಅವರು ಬಸವಣ್ಣನವರ ಮಾತಿನಂತೆ ನುಡಿದಂತೆ ನಡೆಯುತ್ತಿಲ್ಲಾ ಹೀಗಾಗಿಯೇ ನೀರವ್ ಮೋದಿ ಅಂತಹವರು ದೇಶವನ್ನು ಬಿಟ್ಟು ಓಡಿಹೋಗಲು ಸುಲಭವಾಗಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಬಾಗಲಕೋಟೆ ಜಿಲ್ಲೆ ಜಮಖಂಡಿಯಲ್ಲಿಂದು ನಡೆದ ಜನಾರ್ಶೀವಾದ ಯಾತ್ರೆಯನ್ನುದ್ದೇಶಿಸಿ ಮಾತನಾಡಿದ ಅವರು, ದೇಶವನ್ನು ನಡೆಸುವ ಸಂಸತ್ತು ದೆಹಲಿಯಲ್ಲಿರಬಹುದು. ಆದರೆ ಕರ್ನಾಟಕದಲ್ಲಿ ಶತಮಾನಗಳ ಹಿಂದೆ  ಬಸವಣ್ಣನವರ ಅನುಭವ ಮಂಟಪವೇ ಸಂಸತ್ತು ಆಗಿತ್ತು ಎಂದರು.

ರೈತರ ಸಾಲ ಮನ್ನಾ ಮಾಡುವಂತೆ ಪ್ರಧಾನಿ ನರೇಂದ್ರಮೋದಿ ಬಳಿ ಕೇಳಿಕೊಂಡರೂ ಯಾವುದೇ ಪ್ರಯೋಜನವಾಗಲಿಲ್ಲ.ಆದರೆ, ಸಿದ್ದರಾಮಯ್ಯ ಸುಮಾರು 8000 ಕೋಟಿ  ರೈತರ ಸಾಲದ ಹಣವನ್ನು ಮನ್ನಾ ಮಾಡಿದ್ದಾರೆ.  ಉಚಿತ ಬಡ್ಡಿದರಲ್ಲಿ ರೈತರಿಗೆ 3 ಲಕ್ಷ ರೂವರೆಗೂ ಸಾಲ ನೀಡಲಾಗುತ್ತಿದೆ. ಇದರಿಂದಾಗಿ ಲಕ್ಷಾಂತರ ರೈತರಿಗೆ ಅನುಕೂಲವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ,ಯಡಿಯೂರಪ್ಪ ಜೈಲಿಗೆ ಹೋಗಲಿಲ್ಲವೇ  ಏನು ಬೀಗತನ ಮಾಡಲಿಕ್ಕೆ ಜೈಲಿಗೆ ಹೋಗಿದ್ರಾ? ಚೆಕ್ ನಲ್ಲಿ ಲಂಚ ಪಡೆದು ಜೈಲಿಗೆ ಹೋದವರನ್ನು ಪಕ್ಕದಲ್ಲಿ ಕೂರಿಸಿಕೊಂಡು ನಮ್ಮವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವ ಮೋದಿಯವರಿಗೆ ನಾಚಿಕೆ ಆಗಬೇಕು ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.