ರಾಜ್ಯ

ನಾನು ತುಮಕೂರಿನವ, ನಾನು ಒಕ್ಕಲಿಗ ಕನ್ನಡ ಮಾತನಾಡುತ್ತೇವೆ: ಜಗ್ಗೇಶ್

ರಾಜ್ಯದ ಮೂರು ಜಿಲ್ಲೆಯವರಷ್ಟೇ ಶುದ್ದ ಕನ್ನಡ ಮಾತನಾಡುತ್ತಾರೆ, ಉಳಿದವರಿಗೆ ಆ ಯೋಗ್ಯತೆ ಇಲ್ಲ ಎಂದಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಗೆ .........

ನಾನು ತುಮಕೂರಿನವ, ನಾನು ಒಕ್ಕಲಿಗ ಕನ್ನಡ ಮಾತನಾಡುತ್ತೇವೆ: ಜಗ್ಗೇಶ್
ಜಗ್ಗೇಶ್
Published On :
ಬೆಂಗಳೂರು: ರಾಜ್ಯದ ಮೂರು ಜಿಲ್ಲೆಯವರಷ್ಟೇ ಶುದ್ದ ಕನ್ನಡ ಮಾತನಾಡುತ್ತಾರೆ, ಉಳಿದವರಿಗೆ ಆ ಯೋಗ್ಯತೆ ಇಲ್ಲ ಎಂದಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಅವರ ಹೇಳಿಕೆಗೆ ನಾಡಿನಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ನಟ, ಬಿಜೆಪಿ ನಾಯಕರೂ ಆಗಿರುವ ನವರಸ ನಾಯಕ ಜಗ್ಗೇಶ್ ಸಹ ಖಾರವಾಗಿ ಪ್ರತಿಕ್ರಯಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅನಂತ್ ಕುಮಾರ್ ಹೆಗಡೆಯವರ ಹೇಳಿಕೆಯ ಬಗ್ಗೆ ಟೀಕಿಸಿರುವ ಜಗ್ಗೇಶ್ 'ನೀವು ವ್ಯಾಕರಣ ಶುದ್ದವಾಗಿ ಕನ್ನಡ ಮಾತನಾಡುತ್ತೀರಿ. ಅದು ನನಗೆ ಇಷ್ಟವಾಗಿದೆ.ಹಾಗೆಂದು ಉಳಿದ ಭಾಗದ ಕನ್ನಡಿಗರು ಕನ್ನಡ ಮಾತನಾಡಲು ಬಾರದವರು ಎನ್ನುವುದು ಸರಿಯಲ್ಲ. ನಾಡಿನ ಪ್ರತಿಯೊಂದು ಭಾಗಕ್ಕೆ ಅದರದೇ ಆದ ಭಾಷಾ ಸೊಗಡಿದೆ' ಎಂದಿದ್ದಾರೆ.
ಅಷ್ಟೇ ಅಲ್ಲದೆ 'ನಾನು ತುಮಕೂರು ಗ್ರಾಮೀಣ ಭಾಗದವನು. ನನ್ನ ಭಾಗದಲ್ಲಿ ಗ್ರಾಮೀಣ ಒಕ್ಕಲಿಗ ಮನೆತನದ ಭಾಷೆ ಮಾತನಾಡುತ್ತೇವೆ. ಕಲಾವಿದನಾಗಿ ನಾನು ಎಲ್ಲಾ ವರ್ಗದ ಭಾಷೆ ತಪ್ಪಿಲ್ಲದೆ ಬಳಸುತ್ತೇನೆ. ನನಗೆ ಇಷ್ಟರ ಮಟ್ಟಿಗೆ ವ್ಯಾಕರಣದ ತಾಲೀಮು ಇದೆ. ಮಕ್ಕಳಿಗೆ ವ್ಯಾಕರಣ ಶುದ್ದ ಕನ್ನಡ ಕಲಿಯುವದಕ್ಕೆ ಪ್ರೇರೇಪಿಸಿರಿ' ಎಂದಿದ್ದಾರೆ.
ಸಚಿವ ಅನಂತ್ ಕುಮಾರ್ ಹೆಗಡೆ ರಾಜ್ಯದ ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜನರು ಮಾತ್ರವೇ ಶುದ್ದ ಕನ್ನಡ ಮಾತನಾಡಬಲ್ಲರು ಎಂದು ನಿನ್ನೆ ಪುತ್ತೂರಿನ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.