ಮಹಾಮಸ್ತಕಾಭಿಷೇಕ: ಕಾರ್ಯಕ್ರಮ, ಸಾರ್ವಜನಿಕ ದರ್ಶನಕ್ಕೆ ಸಮಯ ಇತ್ಯಾದಿ ವಿವರ
ಪ್ರವಾಸಿಗರ ಕೇಂದ್ರ ಬಿಂದುವಾಗಿರುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಆರಂಭವಾಗಿದ್ದು, ಫೆಬ್ರವರಿ 17ರಿಂದ ಫೆಬ್ರವರಿ 25ರವರೆಗೂ ಮಹಾಮಜ್ಜನ ಕಾರ್ಯಕ್ರಮ ನೆರವೇರಲಿದೆ.

Published On :
ಹಾಸನ: ಪ್ರವಾಸಿಗರ ಕೇಂದ್ರ ಬಿಂದುವಾಗಿರುವ ಶ್ರವಣಬೆಳಗೊಳದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಆರಂಭವಾಗಿದ್ದು, ಫೆಬ್ರವರಿ 17ರಿಂದ ಫೆಬ್ರವರಿ 25ರವರೆಗೂ ಮಹಾಮಜ್ಜನ ಕಾರ್ಯಕ್ರಮ ನೆರವೇರಲಿದೆ.
ಇಂದು ಬೆಳಗ್ಗೆ 5 ಗಂಟೆಯಿಂದಲೇ ಶ್ರವಣ ಬೆಳಗೊಳದ ವಿಂದ್ಯಗಿರಿಯಲ್ಲಿ ಬಾಹುಬಲಿ ಮೂರ್ತಿಗೆ ಮಹಾಮಜ್ಜನ ನಿಮಿತ್ತ ಧಾರ್ಮಿಕ ವಿಧಿವಿಧಾನ ಕಾರ್ಯಕ್ರಮಗಳು, ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಇಂದು 108 ಕಳಾಭಿಷೇಕ ನಡೆಯಲಿದೆ. ಮಧ್ಯಾಹ್ಮ 2 ಗಂಟೆಯಿಂದ 3.30ರವರೆಗೂ ಹಾಲು, ಕೇಸರಿ, ಆರಿಶಿಣ, ಕಬ್ಬಿನರಸ ಮತ್ತು ಅಕ್ಕಿ ಹಿಟ್ಟು ಸೇರಿದಂತೆ ಹಲವು ಸುಂಗಂಧಿತ ಪದಾರ್ಥಗಳಿಂದ ಮಜ್ಜನ ಮಾಡಿಸಲಾಗುತ್ತದೆ. ಬಳಿಕ 3.30ರಿಂದ 5.030ರವರೆಗೂ ಪಂಚಾಮೃತ ಅಭಿಷೇಕ ನಡೆಯಲಿದ್ದು, 5.30 ರಿಂದ ಸಂಜೆ 6.00ಗಂಟೆಯವರೆಗೂ ಅಷ್ಟದ್ರವ್ಯ ಪೂಜೆ ಮತ್ತು ಮಹಾ ಮಂಗಳಾರತಿ ಕಾರ್ಯ ಕ್ರಮ ನಡೆಯುತ್ತದೆ.
ಸಂಜೆ 6.30ರ ಬಳಿಕ ಸಾರ್ವಜನಿಕರಿಗೆ ದರ್ಶನಾವಕಾಶ ಕಲ್ಪಿಸಲಾಗಿದೆ. ಅಂತೆಯೇ ಮಾರ್ಚ್ 5 ರಿಂದ ಪ್ರತೀ ಭಾನುವಾರ 2018ರ ಆಗಸ್ಟ್ ಅಂತ್ಯದವರೆಗೂ ಅದೇ ಪ್ರಮಾಣದಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದೆ.
ಉಳಿದಂತೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮಗಳ ವಿವರ ಇಲ್ಲಿದೆ.
ದಿನಾಂಕ: 17-02-2018 (ಶನಿವಾರ)
ಸಮಯ:
ಬೆಳಗ್ಗೆ 5.00 ರಿಂದ ಮಧ್ಯಾಹ್ನ 02.00: ಧಾರ್ಮಿಕ ವಿಧಿ ವಿಧಾನ, ತ್ಯಾಗಿಗಳು ಕಳಶಧಾರಿಗಳು ಆಸೀನರಾಗುವುದು
ಮಧ್ಯಾಹ್ನ 2.00ರಿಂದ 3.30: 108 ಕಳಶಾಭಿಷೇಕ (ಜಲಾಭಿಷೇಕ)
ಮಧ್ಯಾಹ್ನ 3.30ರಿಂದ ಸಂಜೆ 5.30: ಪಂಚಾಮೃತ ಅಭಿಷೇಕ
ಸಂಜೆ 5.30 ರಿಂದ 6.30: ಅಷ್ಟದ್ರವ್ಯ ಪೂಜೆ ಮತ್ತು ಮಹಾ ಮಂಗಳಾರತಿ
ಸಂಜೆ 6.30 ರಿಂದ ರಾತ್ರಿ 9.30: ಸಾರ್ವಜನಿಕರಿಗೆ ದರ್ಶನಾವಕಾಶ
ದಿನಾಂಕ: 18-02-2018 (ಭಾನುವಾರ)-25-02-2018 (ಭಾನುವಾರ)
ಸಮಯ:
ಬೆಳಗ್ಗೆ 8.00 ರಿಂದ ಬೆಳಗ್ಗೆ 11.00: 1008 ಕಳಶಾಭಿಷೇಕ (ಜಲಾಭಿಷೇಕ)
ಬೆಳಗ್ಗೆ 11.00 ರಿಂದ ಮಧ್ಯಾಹ್ನ 1.00: ಪಂಚಾಮೃತ ಅಭಿಷೇಕ
ಮಧ್ಯಾಹ್ನ 1.00ರಿಂದ 1.30: ಅಷ್ಟದ್ರವ್ಯ ಪೂಜೆ ಮತ್ತು ಮಹಾ ಮಂಗಳಾರತಿ
ಮಧ್ಯಾಹ್ನ 2.00ರಿಂದ ರಾತ್ರಿ 9.30: ಸಾರ್ವಜನಿಕರಿಗೆ ದರ್ಶನಾವಕಾಶ

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
HasanಹಾಸನShravanabelagolaಬಾಹುಬಲಿmahamastakabhishekaBahubaliಮಹಾಮಸ್ತಕಾಭಿಷೇಕJain Muttಶ್ರವಣ ಬೆಳಗೊಳಜೈನ ಮಠ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


