ರಾಜ್ಯ

ಬೆಂಗಳೂರು ಪೋಲೀಸ್ ಕಾರ್ಯಾಚರಣೆ: 6 ಅಕ್ರಮ ಗಾಂಜಾ ಮಾರಾಟಗಾರರ ಬಂಧನ, 130 ಕೆಜಿ ಗಾಂಜಾ ವಶ

ವಿದ್ಯಾರ್ಥಿಗಳು ಹಾಗೂೈಟಿ ಉದ್ಯೋಗಿಗಳಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಬೆಂಗಳುರು ಪೋಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 130 ಕೆಜಿ.....

ಬೆಂಗಳೂರು ಪೋಲೀಸ್ ಕಾರ್ಯಾಚರಣೆ: 6 ಅಕ್ರಮ ಗಾಂಜಾ ಮಾರಾಟಗಾರರ ಬಂಧನ, 130 ಕೆಜಿ ಗಾಂಜಾ ವಶ
ಬೆಂಗಳೂರು ಪೋಲೀಸ್ ಕಾರ್ಯಾಚರಣೆ: 6 ಅಕ್ರಮ ಗಾಂಜಾ ಮಾರಾಟಗಾರರ ಬಂಧನ, 130 ಕೆಜಿ ಗಾಂಜಾ ವಶ
Published On :
ಬೆಂಗಳೂರು: ವಿದ್ಯಾರ್ಥಿಗಳು ಹಾಗೂೈಟಿ ಉದ್ಯೋಗಿಗಳಿಗೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರು ಮಂದಿಯನ್ನು ಬೆಂಗಳೂರು ಪೋಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 130 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದ ಗೋವಿಂದರಾಜು (29), ರಾಮನಗರ ಜಿಲ್ಲೆ ಕೋಡಿಹಳ್ಳಿ ಹೋಬಳಿಯ ಬಸವರಾಜ್ (28), ಕೊಳ್ಳೆಗಾಲ ತಾಲೂಕಿನ ಮಗೇಂದ್ರ (22},  ಚಾಮರಾಜನಗರದ ನವೀನ್‍ಕುಮಾರ್ (29, ಒರಿಸ್ಸಾ ಮೂಲದ ಜಗರ್‍ಸಮಲ್ (30) ಮತ್ತು ಲೋಕನಾಥ್ ಸಹನಿ (32) ಬಂಧಿತರಾಗಿದ್ದು ಬೆಂಗಳೂರಿನ ವಿವಿಧೆಡೆ ಕಾರ್ಯಾಚರಣೆ ನಡೆಸಿದ್ದ ಪೋಲೀಸರು ಈ ಮಾರಾಟಗಾರರ ಜಾಲವನ್ನು ಬೇಧಿಸಲು ಸಫಲರಾಗಿದ್ದಾರೆ.
ತಮಿಳುನಾಡಿನವನಾದ ಗೋವಿಂದರಾಜು ಕೆಲಸ ಹುಡುಕಿ ಬೆಂಗಳೂರಿಗೆ ಬಂದಿದ್ದನು. ಕೊತ್ತನೂರಿನಲ್ಲಿ ವಾಸವಾಗಿದ್ದ ಈತ ಹೊಟೇಲ್‍ಗಳಲ್ಲಿ ದೋಸೆ ಅಥವಾ ಚಪಾತಿ ಪ್ಯಾಕ್ ಮಾಡುವ ರೀತಿಯಲ್ಲಿ ಗಾಂಜಾವನ್ನು ಪ್ಯಾಕ್ ಮಾಡಿ 1 ಪ್ಯಾಕೆಟ್ ಗೆ 200 ರಿಂದ 500 ರೂ.ಗಳಿಗೆ ಮಾರುತ್ತಿದ್ದ. ಬಂಧನದ ವೇಳೆ ಈತನಿಂದ ಈತನಿಂದ 70 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು ಈತನ ಹೇಳಿಕೆ ಅನುಸಾರ ಇನ್ನಿಬ್ಬರು ಆರೋಪಿಗಳಾದ ಬಸವರಾಜ್ ಮತ್ತು ಮಗೇಂದ್ರನನ್ನು ಬಂಧಿಸಲಾಗಿದೆ. ಅವರಿಂದ ಲೆಕ್ಟ್ರಾನಿಕ್ ತೂಕದ ಯಂತ್ರ, 3 ಮೊಬೈಲ್, 1 ಕಾರು, ಆಟೋರಿಕ್ಷಾ, 2 ಬೈಕ್‍ಗಳನ್ನು ಪಡೆಯಲಾಗಿದೆ. ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಮಾರ್ಗದರ್ಶನದಲ್ಲಿ ಎಸಿಪಿ ರಮೇಶ್ ನೇತೃತ್ವದ ತಂಡ ಇವರನ್ನು ಬಂಧಿಸಿದೆ.
ಇನ್ನೊಂದೆಡೆ ಐಟಿ ಉದ್ಯೋಗಿಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಚಾಮರಾಜನಗರದ ನವೀನ್‍ಕುಮಾರ್ ನನ್ನು ಕೋರಮಂಗಲ ಪೋಲೀಸರು ಬಂಧಿಸಿ 40 ಕೆಜಿ ಗಾಂಜಾ, 2 ಮೊಬೈಲ್ ಹಾಗೂ ಇಂಡಿಕಾ ಕಾರನ್ನು ವಶಪಡಿಸಿಕೊಂಡಿದ್ದಾರೆ. ಮೈಕೋ ಲೇಔಟ್ ಪೋಲೀಸರು ಕಾರ್ಯಾಚರ್ಣೆ ನಡೆಸಿದ್ದ ವೇಳೆ ಒರಿಸ್ಸಾ ಮೂಲದ ಜಗರ್‍ಸಮಲ್ ಮತ್ತು ಲೋಕನಾಥ್ ಸಹನಿ ಎನ್ನುವ ಗಾಂಜಾ ಮಾರಾಟಗಾರರು ಸಿಕ್ಕಿ ಬಿದ್ದಿದ್ದು ಅವರುಗಳಿಂದ 15 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮೈಕೊ ಲೇಔಟ್ ಉಪವಿಭಾಗದ ಎಸಿಪಿ ಕರಿಬಸವನಗೌಡ ಅವರ ತಂಡವು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.