ನೈರುತ್ಯ ವಲಯ ರೈಲ್ವೆಯಲ್ಲಿ ಕಾಯ್ದಿರಿಸದ ಟಿಕೆಟ್ ಬುಕ್ ಮಾಡಲು ಆಪ್ ಬಿಡುಗಡೆ
ಕಾಯ್ದಿರಿಸದ ಟಿಕೆಟ್, ಋತುಮಾನದ ಮತ್ತು ಪ್ಲಾಟ್ ಫಾರಂ ಟಿಕೆಟ್ ಗಳನ್ನು ಬುಕ್ ಮಾಡಲು ...

ಬೆಂಗಳೂರು: ಕಾಯ್ದಿರಿಸದ ಟಿಕೆಟ್, ಋತುಮಾನದ ಮತ್ತು ಪ್ಲಾಟ್ ಫಾರಂ ಟಿಕೆಟ್ ಗಳನ್ನು ಬುಕ್ ಮಾಡಲು ರೈಲ್ವೆ ಇಲಾಖೆ ನೈರುತ್ಯ ರೈಲ್ವೆ ವಲಯದಲ್ಲಿ ಮೊಬೈಲ್ ಆಪ್ ಸೇವೆಯನ್ನು ಆರಂಭಿಸಿದೆ. ಈ ಬಗ್ಗೆ ನಿನ್ನೆ ಸುದ್ದಿಗಾರರಿಗೆ ವಿಷಯ ತಿಳಿಸಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ಎಸ್.ಸಕ್ಸೇನಾ, ಫೆಬ್ರವರಿ 8ರಿಂದ ಆಪ್ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ರೈಲ್ವೆ ವಿಭಾಗ ವಲಯಗಳಲ್ಲಿ ಕಾರ್ಯಾರಂಭ ಆರಂಭಿಸಿದೆ ಎಂದು ಹೇಳಿದರು.
ಆಂಡ್ರಾಯ್ಡ್ ಮತ್ತು ವಿಂಡೊ ಫೋನ್ ಗಳಲ್ಲಿ ಆಪ್ ನ್ನು ಡೌನ್ ಲೋಡ್ ಮಾಡಿಕೊಂಡರೆ ಕಾಯ್ದಿರಿಸದ ಟಿಕೆಟ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು. ನೈರುತ್ಯ ರೈಲ್ವೆ ವಲಯದ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಟಿಕೆಟ್ ತೆಗೆದುಕೊಳ್ಳಲು ಸಾಲಿನಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳಬೇಕಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಸಕ್ಸೇನಾ ಹೇಳಿದರು. ಟಿಕೆಟ್ ದರವನ್ನು ಪಾವತಿ ಮಾಡಲು ಪ್ರಯಾಣಿಕರು ರೈಲ್ವೆ ವಾಲೆಟ್ ನ್ನು ರಿಚಾರ್ಜ್ ಮಾಡಿಕೊಳ್ಳಬೇಕು.
ಟಿಕೆಟ್ ಬುಕ್ ಮಾಡಲು ಆಪ್ ನ್ನು ಬಳಸಿಕೊಳ್ಳಬಹುದು. ಆಪ್ ನಲ್ಲಿ ಶೋ ಟಿಕೆಟ್ ಆಯ್ಕೆ ಮೂಲಕ ಪ್ರಯಾಣಿಕರು ಈ ಟಿಕೆಟ್ ತೋರಿಸಬಹುದು ಎಂದು ಸಕ್ಸೇನಾ ತಿಳಿಸಿದರು.
ಮೊಬೈಲ್ ವಾಲೆಟ್ ಗಳ ಮಾದರಿಯಲ್ಲಿ ಆರ್ ವಾಲೆಟ್ ಗಳಿದ್ದು ಕನಿಷ್ಟ 100 ರೂಪಾಯಿ ಹಾಗೂ ಗರಿಷ್ಟ 5,000 ರೂಪಾಯಿಗಳವರೆಗೆ ರಿಚಾರ್ಜ್ ಮಾಡಿಕೊಳ್ಳಬಹುದು. ಕಾಗದ ಟಿಕೆಟ್ ಬೇಕೆಂದು ಬಯಸುವವರು ರೈಲ್ವೆ ನಿಲ್ದಾಣಗಳಲ್ಲಿರುವ ವೆಂಡಿಂಗ್ ಮೆಶಿನ್ ಗಳಿಂದ ಪಡೆಯಬಹುದು.
ಪ್ಲಾಟ್ ಫಾರಂ ಟಿಕೆಟ್ ಗಳು ಕೇವಲ 2 ಗಂಟೆಯವರೆಗೆ ಅದರ ಬಳಕೆ ಕಾಲಾವಧಿಯನ್ನು ಹೊಂದಿರುತ್ತದೆ. ಕಾಯ್ದಿರಿಸದ ಟಿಕೆಟ್ ಆಪ್ ನಲ್ಲಿ ಮಾಡಿಕೊಳ್ಳುವವರು ಆಪ್ ಅಥವಾ ವೆಬ್ ಸೈಟ್ ವಿಳಾಸ www.utsonmobile.indianrail.gov.in ನಲ್ಲಿ ದಾಖಲು ಮಾಡಿಕೊಳ್ಳಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


