ಶ್ರವಣಬೆಳಗೊಳಕ್ಕೆ 8 ವಿಶೇಷ ರೈಲು ಸಂಚಾರ
ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಪ್ರಯುಕ್ತ ಇಂದಿನಿಂದ ....

ಬೆಂಗಳೂರು: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ ಪ್ರಯುಕ್ತ ಇಂದಿನಿಂದ ಹೆಚ್ಚುವರಿ ಎರಡು ರೈಲುಗಳು ಸಂಚರಿಸುವ ಮೂಲಕ 8 ವಿಶೇಷ ರೈಲುಗಳು ಸಂಚಾರವಾಗಲಿದೆ. ಮೀರಜ್ ನಿಂದ ಹಾಸನಕ್ಕೆ ಸಂಪರ್ಕಿಸುವ ವಿಶೇಷ ರೈಲು ಕೂಡ ಸಂಚಾರವಾಗಲಿದೆ.
ಬೆಂಗಳೂರು-ಹಾಸನ-ಶ್ರವಣಬೆಳಗೊಳಕ್ಕೆ ಸಂಪರ್ಕಿಸುವ ಡೀಸೆಲ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್(ಡೆಮು) ಈಗಾಗಲೇ 3 ವಿಶೇಷ ರೈಲುಗಳು ಸಂಚರಿಸುತ್ತಿವೆ.
ಇನ್ನೊಂದೆಡೆ ರಾಜ್ಯ ರಸ್ತೆ ಸಾರಿಗೆ ನಿಗಮ ಕೂಡ ರಾಜ್ಯದ ಪ್ರಮುಖ ಸ್ಥಳಗಳಿಂದ 175 ಹೆಚ್ಚುವರಿ ಬಸ್ ಗಳನ್ನು ಬಿಡುತ್ತಿದೆ. 60 ಮಧ್ಯಮ ಮತ್ತು ಸಣ್ಣ ನಗರ ಸಾರಿಗೆ ಬಸ್ ಗಳು ಶ್ರವಣಬೆಳಗೊಳದ ಉಪ ನಗರಗಳು ಮತ್ತು ರೈಲ್ವೆ ನಿಲ್ದಾಣಗಳಿಂದ ಮಹಾಮಸ್ತಕಾಭಿಷೇಕ ಸ್ಥಳಕ್ಕೆ ಸಂಚರಿಸಲಿದೆ.
ಪ್ರಯಾಣಿಕರು ತಮ್ಮ ಟಿಕೆಟ್ ಗಳನ್ನು www.ksrtc.in ಮೂಲಕ ಕಾಯ್ದಿರಿಸಬಹುದು.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


