ರಾಜ್ಯ

ಅನಿಲ ಭಾಗ್ಯ ಯೋಜನೆಯಿಂದ ಕೇಂದ್ರಸರ್ಕಾರದ ತಾರತಮ್ಯ ನೀತಿ ನಿವಾರಣೆ -ಯು. ಟಿ. ಖಾದರ್

ರಾಜ್ಯಸರ್ಕಾರದ ಅನಿಲ ಭಾಗ್ಯ ಯೋಜನೆಯಿಂದ ಕೇಂದ್ರಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯ ತಾರತಮ್ಯ ನೀತಿಯನ್ನು ನಿವಾರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.

ಅನಿಲ ಭಾಗ್ಯ ಯೋಜನೆಯಿಂದ ಕೇಂದ್ರಸರ್ಕಾರದ ತಾರತಮ್ಯ ನೀತಿ ನಿವಾರಣೆ -ಯು. ಟಿ. ಖಾದರ್
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅವರ (ಸಾಂದರ್ಭಿಕ ಚಿತ್ರ)
Published On :

ಮೈಸೂರು:  ರಾಜ್ಯಸರ್ಕಾರದ  ಅನಿಲ ಭಾಗ್ಯ ಯೋಜನೆಯಿಂದ ಕೇಂದ್ರಸರ್ಕಾರದ ಪ್ರಧಾನಮಂತ್ರಿ  ಉಜ್ವಲ ಯೋಜನೆಯ ತಾರತಮ್ಯ ನೀತಿಯನ್ನು ನಿವಾರಿಸಲಾಗುವುದು ಎಂದು ಆಹಾರ  ಮತ್ತು ನಾಗರಿಕ ಸರಬರಾಜು ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಒಂದು ಹಳ್ಳಿಯಲ್ಲಿನ ಅರ್ಹ 100 ಫಲಾನುಭವಿಗಳಿಗೆ ಮಾತ್ರ ಅನಿಲ ಸಿಲಿಂಡರ್ ನೀಡಲಾಗುತ್ತಿದ್ದು,  ಸಾಕಷ್ಟು ಗೊಂದಲ ಹಾಗೂ ಗ್ರಾಮಸ್ಥರಲ್ಲೇ ಒಡಕಿಗೆ ಕಾರಣವಾಗಿದೆ ಎಂದು ಆರೋಪಿಸಿದರು.

ಈ ತಾರತಮ್ಯ ನೀತಿಯನ್ನು ನಿವಾರಿಸಲು ರಾಜ್ಯಸರ್ಕಾರದಿಂದ   ಅರ್ಹ 1 ಲಕ್ಷ ಕುಟುಂಬಗಳಿಗೆ ಉಚಿತ ಸ್ಟೌವ್. ಲೈಟರ್ , ಸಿಲಿಂಡರ್ ಮತ್ತು ಎರಡು ಉಚಿತ ಪುನರ್ಭತಿ ಸಿಲಿಂಡರ್ ಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

 ಕೇಂದ್ರಸರ್ಕಾರ ಕೂಡಾ ಇದನ್ನು  ಅಳವಡಿಸಿಕೊಳ್ಳುವಂತೆ ಕೇಂದ್ರ ಪೆಟ್ರೋಲಿಯಂ ಸಚಿವರಿಗೆ ಹೇಳಲಾಗಿದ್ದು, ಅವರು ಸಮ್ಮತಿ ನೀಡಿದ್ದಾರೆ, ಆದಾಗ್ಯೂ, ಕರ್ನಾಟಕ ಸರ್ಕಾರ ಯಾವುದೇ ಪೆಟ್ರೋಲಿಯಂ ಕಂಪನಿಗಳ ಪರವಾಗಿ ಹಣ ಪಾವತಿಸಿಲ್ಲ ಎಂದು ಸ್ಪಷ್ಪಪಡಿಸಿದರು.

ಅಂಗಡಿಗಳು ತಮಗಿಷ್ಟಬಂದ ದರದಲ್ಲಿ ಸಿಲಿಂಡರ್ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಲಾಗಿದೆ, ಗ್ರಾಮ ಪಂಚಾಯಿತಿ ಸದಸ್ಯರನ್ನೊಳಗೊಂಡ ಜಾಗೃತಿ ಸಮಿತಿ ರಚಿಸಲಾಗುತ್ತಿದೆ. ಸಿಲಿಂಡರ್ ಬಂದಾಗ ಇವರು ಸಹಿ ಹಾಕಲಿದ್ದಾರೆ ಎಂದು ಯು. ಟಿ. ಖಾದರ್ ಹೇಳಿದ್ದಾರೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.