ರಾಜ್ಯ

ಮೈಸೂರು: ನಾಯಿಗೆ ಕಲ್ಲು ಬೀರಿದ್ದಕ್ಕಾಗಿ ವೃದ್ದೆಯ ಮೇಲೆ ಮಹಿಳೆಯಿಂದ ಹಲ್ಲೆ

ಬೀದಿ ನಾಯಿಗಳಿಗೆ ಹೆದರಿಸಲಿಕ್ಕಾಗಿ ಮಹಿಳೆಯೊಬ್ಬರು ಕಲ್ಲು ಹೊಡೆದಾಗ ಇದನ್ನು ಕಂಡ ಇನ್ನೊಬ್ಬ ಮಹಿಳೆ ಸಿಟ್ಟಾಗಿದ್ದಲ್ಲದೆ ಕಲ್ಲು ಬೀರಿದ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ .........

ಮೈಸೂರು: ನಾಯಿಗೆ ಕಲ್ಲು ಬೀರಿದ್ದಕ್ಕಾಗಿ ವೃದ್ದೆಯ ಮೇಲೆ ಮಹಿಳೆಯಿಂದ ಹಲ್ಲೆ
ಮೈಸೂರು: ನಾಯಿಗೆ ಕಲ್ಲು ಬೀರಿದ್ದಕ್ಕಾಗಿ ವೃದ್ದೆಯ ಮೇಲೆ ಮಹಿಳೆಯಿಂದ ಹಲ್ಲೆ
Published On :
ಮೈಸೂರು: ಬೀದಿ ನಾಯಿಗಳಿಗೆ ಹೆದರಿಸಲಿಕ್ಕಾಗಿ ಮಹಿಳೆಯೊಬ್ಬರು  ಕಲ್ಲು ಹೊಡೆದಾಗ ಇದನ್ನು ಕಂಡ ಇನ್ನೊಬ್ಬ ಮಹಿಳೆ ಸಿಟ್ಟಾಗಿದ್ದಲ್ಲದೆ ಕಲ್ಲು ಬೀರಿದ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನಲ್ಲಿ ನಡೆದಿದೆ. ಮಹಿಳೆ ಮೇಲಘಲ್ಲೆ ಮಾಡಿದ್ದ ಆರೋಪಿ ಮಹಿಳೆಯು ಆಕೆಯ ನೆರೆಮನೆಯವಳೆನ್ನುವುದು ಪೋಲೀಸರ ತನಿಖೆ ವೇಳೆ ತಿಳಿದಿದೆ.
ಚಿಕ್ಕತಾಯಮ್ಮ (52) 7 ಗಂಟೆಗೆ ಯೋಗ ತರಗತಿಗಳಿಗೆ ತೆರಳಿದ ತನ್ನ ಮೊಮ್ಮಕ್ಕಳನ್ನು ಕರೆತರುವ ಸಮಯದಲ್ಲಿ  ಬೀದಿ ನಾಯಿಯೊಂದು ಅವರತ್ತ ಬಂದಿತ್ತು. ಅದೆಲ್ಲಿ ತನಗೆ ಕಚ್ಚುವುದೋ ಎಂದು ಹೆದರಿದ ಚಿಕ್ಕತಾಯವ್ವ  ನಾಯಿಯನ್ನು ಹೆದರಿಸಲಿಕ್ಕಾಗಿ ಕಲ್ಲಿನಿಂದ ಹೊಡೆದಿದ್ದರು. ಆಗ ಅವರ ನೆರೆಮನೆಯ ಗಾಯತ್ರಿ ಇದನ್ನು ಕಂಡು ಚಿಕ್ಕತಾಯವ್ವನೊಡನೆ ಜಗಳಕ್ಕೆ ನಿಂತಿದ್ದಾರೆ.
"ನನ ನಾಯಿಗಳಿಗೆ ನಿನು ಕಲ್ಲು ಹೊಡೆದದ್ದೇಕೆ ?" ಎಂದು ಒಮ್ಮೆಗೆ ಸಿತ್ಟಾದ ಗಾಯತ್ರಿ ಚಿಕ್ಕತಾಯವ್ವನಿಗೆ ಹಿಗ್ಗಾ ಮುಗ್ಗಾ ಬೈದಿದ್ದಾರೆ. ಇಬ್ಬರೂ ಪರಸ್ಪರ ಬೈಗುಳ ಸುರಿಮಳೆ ನಡೆಸಿದ್ದಾಗ ಸಿಟ್ಟಾದ ಗಾಯತ್ರಿ ಹಿರಿಯರಾದ ಚಿಕ್ಕತಾಯವ್ವನ ಎಡಗೈಗೆ ಬಲವಾಗಿ ಹೊಡೆದು ರಕ್ತ ಸುರಿಯುವಂತೆ ಹಲ್ಲೆ ನಡೆಸಿದ್ದಾರೆ. ಹೀಗೆ ಗಾಯಗೊಂಡ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರು ಆಕೆಗೆಬ್ ಹೇರ್ ಲೈನ್ ಫ್ರಾಕ್ಚರ್ ಆಗಿರುವುದಾಗಿ ಹೇಳಿದ್ದಾರೆ.
ಗಾಯತ್ರಿ ವರ್ಷಗಳಿಂದ ಅವಳ ಸೋದರನ ಮನೆಯಲ್ಲಿ  ಒಬ್ಬಳೇ ವಾಸವಾಗಿದ್ದಳು.  ಆಕೆ ಬೀದಿ ನಾಯಿಗಳಿಗೆ ನಿತ್ಯವೂ ಆಹಾರವನ್ನು ನೀಡಿ ಅವುಗಳ ಆರೈಕೆ ನೋಡಿಕೊಳ್ಳುತ್ತಿದ್ದಳು ಈ ಹಿಂದೆ ಸಹ ಚಿಕ್ಕ ತಾಯಮ್ಮ ಹಾಗೂ ಗಾಯತ್ರಿ ನಡುವೆ ಏಳೆಂಟು ಬಾರಿ ಜಗಳಗಳಾಗಿದ್ದವು ಎಂದು  ಚಿಕ್ಕತಾಯಮ್ಮನ ಕುಟುಂಬದವರು ಪೋಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ಗಾಯತ್ರಿ ಮತ್ತು ಆಕೆಯ ಸೋದರ ನೆರೆಯವರೈಗೆ ಕಾಟ ಕೊಡುತ್ತಿದ್ದುದಾಗಿ ಪೋಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಮೈಸೂರು ವಿವಿ ಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.