2014ರಲ್ಲಿ ಮಾರಾಟವಾದ 'ಪ್ರಾಮಿಸ್ ಟೂತ್ ಪೇಸ್ಟ್' ನಗು ತರುವಲ್ಲಿ ವಿಫಲವಾಗಿದೆ: ಪ್ರಕಾಶ್ ರೈ ವ್ಯಂಗ್ಯ
ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ....

Published On :
ಬೆಂಗಳೂರು: ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ನಟ ಪ್ರಕಾಶ್ ರೈ, ಇಂದು ಮತ್ತೊಮ್ಮೆ ವ್ಯಂಗವಾಗಿ ಟ್ವೀಟ್ ಮಾಡಿದ್ದಾರೆ. 2014ರಲ್ಲಿ ಮಾರಾಟವಾದ ಪ್ರಾಮಿಸ್ ಟೂತ್ ಪೇಸ್ಟ್ ತೊಂದರೆಗೀಡಾದ ರೈತರು ಮತ್ತು ಉದ್ಯೋಗವಿಲ್ಲದ ಯುವಕರ ಮುಖದಲ್ಲಿ ನಗು ಮೂಡಿಸಲು ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
2014ರಲ್ಲಿ ಮಾರಾಟವಾದ ಪ್ರಾಮಿಸ್ ಟೂತ್ ಪೇಸ್ಟ್ ಹಲ್ಲುಜ್ಜಲು ಮರೆತುಬಿಟ್ಟಿದೆ. ನನ್ನ ದೇಶದ ತೊಂದರೆಗೀಡಾದ ರೈತರು ಮತ್ತು ಉದ್ಯೋಗವಿಲ್ಲದ ಯುವಕರ ಮುಖದಲ್ಲಿ ನಗು ಮೂಡಿಸುವಲ್ಲಿ ವಿಫಲವಾಗಿದೆ. ನಿನ್ನೆ ಕರ್ನಾಟಕ ರ್ಯಾಲಿಯಲ್ಲಿ ಮಾರಾಟ ಮಾಡಲಾದ ಪ್ರಾಮಿಸ್ ಟೂತ್ ಪೇಸ್ಟ್ ನಲ್ಲಿ ನಿಮಗೆ ನಂಬಿಕೆಯಿದೆಯೇ? ನೀಡಿದ್ದ ಭರವಸೆಗಳನ್ನು ಅದು ಈಡೇರಿಸುತ್ತದೆಯೇ, ಸುಮ್ಮನೆ ಕೇಳಿದೆ ಅಷ್ಟೆ ಎಂದು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿbjpಬಿಜೆಪಿಪ್ರಕಾಶ್ ರೈprakash RaiKarnataka rallyPromise toothpasteಕರ್ನಾಟಕ ರ್ಯಾಲಿಪ್ರಾಮಿಸ್ ಟೂತ್ ಪೇಸ್ಟ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


