ರಾಜ್ಯ

ಹಿರಿಯ ಕಲಾ ವಿಮರ್ಷಕ ಅನಂತಪುರ ಈಶ್ವರಯ್ಯ ವಿಧಿವಶ

ಕಲಾವಿಹಾರಿ, ಕಲಾ ಚಿಂತಕರಾಗಿದ್ದ ವಿಮರ್ಷಕ ಅನಂತಪುರ ಈಶ್ವರಯ್ಯ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.

ಹಿರಿಯ ಕಲಾ ವಿಮರ್ಷಕ ಅನಂತಪುರ ಈಶ್ವರಯ್ಯ ವಿಧಿವಶ
ಅನಂತಪುರ ಈಶ್ವರಯ್ಯ
Published On :
ಉಡುಪಿ: ಕಲಾವಿಹಾರಿ, ಕಲಾ ಚಿಂತಕರಾಗಿದ್ದ ವಿಮರ್ಷಕ ಅನಂತಪುರ ಈಶ್ವರಯ್ಯ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಭಾನುವಾರ ನಿಧನರಾದರು.
ಕುಂಬಳೆ‌ ಅನಂತಪುರದ ಈಶ್ವರಯ್ಯ ಹಲವು ರೀತಿಯ ಲಲಿತ ಕಲೆಯ ಕಲಾವಿದರುಗಳಿಗೆ,ಕಲಾಸ್ವಾದಕರಿಗೆ, ಕಲಾ ಚಿಂತಕರಿಗೆ ಪತ್ರಕರ್ತರಿಗೆ, ಛಾಯಾಗ್ರಾಹಕರಿಗೆ, ಸಾಹಿತ್ಯಾಸಕ್ತರಿಗೆ ಹೀಗೆ ಹಲವು ಕ್ಷೇತ್ರದ ಜನರಿಗೆ ಚಿರಪರಿಚಿತವಾಗಿದ್ದ ಹೆಸರು. ಕನ್ನಡದ ಪ್ರಸಿದ್ದ ಮಾಸ ಪತ್ರಿಕೆ ತುಷಾರ, ಉದಯವಾಣಿ ಸಾಪ್ತಾಹಿಕ ಪುರವಣಿ ಮಾಜಿ ಸಂಪಾದಕರಾಗಿದ್ದ ಇವರು ಉಡುಪಿ ಎಂಜಿಎಂ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪತ್ರಕರ್ತರಾಗಿ ಉದಯವಾಣಿ ಗೆ ಸೇರಿದ್ದರು.
ಕಲೆ, ಸಂಸ್ಕೃತಿಯ ವಿಮರ್ಶೆಗಳಿಗೆ ಹೆಸರಾಗಿದ್ದ ಇವರು ಹಲವು ಕಲಾವಿದರ ಬೆಳವಣಿಗೆಗೆ ಸಹಕಾರ ನೀಡಿದರು.ಫೋಟೋಗ್ರಫಿ ತರಬೇತಿಯನ್ನೂ ನೀಡಿತಿದ್ದ ಇವರು ನಿವೃತ್ತಿ ನಂತರ ಸಹ ಕಲಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.
ಸಂಗೀತದಲ್ಲಿ, ಯಕ್ಷಗಾನದಲ್ಲಿ, ಸಾಹಿತ್ಯದಲ್ಲಿ, ಛಾಯಾಗ್ರಹಣದಲ್ಲಿ ಹೀಗೆ ಹಲವು ಕ್ಷೇತ್ರಗಳಲ್ಲಿ ತನ್ನ ಅಭಿರುಚಿಯನ್ನು ಬೆಳೆಸಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.