ಸೂಲಗಿತ್ತಿ ನರಸಮ್ಮ ಪಂಚಭೂತಗಳಲ್ಲಿ ಲೀನ
ಪದ್ರಶ್ರೀ ಪರಶಸ್ತಿ ಪುರಸ್ಕೃತೆ, ಸಹಜ ಹ್ಹೆರಿಗೆ ಮೂಲಕ ಸಾವಿರಾರು ಮಕ್ಕಳಿಗೆ ತಾಯಿಯಾದ ಸೂಲಗಿತ್ತಿ ನರಸಮ್ಮ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.

Published On :
ತುಮಕೂರು: ಪದ್ರಶ್ರೀ ಪರಶಸ್ತಿ ಪುರಸ್ಕೃತೆ, ಸಹಜ ಹೆರಿಗೆ ಮೂಲಕ ಸಾವಿರಾರು ಮಕ್ಕಳಿಗೆ ತಾಯಿಯಾದ ಸೂಲಗಿತ್ತಿ ನರಸಮ್ಮ ಪಂಚಭೂತಗಳಲ್ಲಿ ಲೀನವಾಗಿದ್ದಾರೆ.
ತುಮಕೂರಿನ ಗಂಗಸಂದ್ರದಲ್ಲಿರುವ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಡನೆ ನರಸಮ್ಮನವರ ಅಂತ್ಯ ಸಂಸ್ಕಾರ ನೆರವೇರಿದೆ.
ವಯೋಸಹಜ ಅನಾರೋಗ್ಯದ ಕಾರಣ ನರಸಮ್ಮ (98) ಮಂಗಳವಾರ ವಿಧಿವಶರಾಗಿದ್ದರು.
ವೈದ್ಯಕೀಯ ನೆರವಿನ ಅಗತ್ಯವಿಲ್ಲದೆ ಸಾವಿರಾರು ಜನರಿಗೆ ಸಹಜ ಹೆರಿಗೆಯನ್ನು ಮಾಡಿಸುವ ಮೂಲಕ ಹಲವು ಮಹಿಳೆಯರ, ಮಕ್ಕಳ ಪಾಲಿಗೆ ತಾಯಿಯಂತಿದ್ದ ನರಸಮ್ಮನವರಿಗೆ 2018ನೇ ಸಾಲಿನಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಸಂದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Tumkurತುಮಕೂರುಸೂಲಗಿತ್ತಿ ನರಸಮ್ಮSulagitti NarasammaPadma sri awardee Narasammaಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನರಸಮ್ಮ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


