ರಾಜ್ಯ

ಒಬ್ಬನ ಜೊತೆ ನಿಶ್ಚಿತಾರ್ಥ, ಮತ್ತೊಬ್ಬನೊಂದಿಗೆ ಮದುವೆ, ಕೈಕೊಟ್ಟು ಓಡಿಹೋದ ಪ್ರೇಮಿ, ಹುಡುಗಿ ಕಥೆ ಹರೋಹರ?

ಪೋಷಕರು ನೋಡಿದ ವರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ನಂತರ ಯಾರಿಗೂ ತಿಳಿಯದಂತೆ ಪ್ರಿಯಕರ ಜೊತೆ ಮದುವೆಯಾಗಿದ್ದ ನವವಧುವಿಗೆ ತಾಳಿ ಕಟ್ಟಿದ್ದ...

ಒಬ್ಬನ ಜೊತೆ ನಿಶ್ಚಿತಾರ್ಥ, ಮತ್ತೊಬ್ಬನೊಂದಿಗೆ ಮದುವೆ, ಕೈಕೊಟ್ಟು ಓಡಿಹೋದ ಪ್ರೇಮಿ, ಹುಡುಗಿ ಕಥೆ ಹರೋಹರ?
ಸಂಗ್ರಹ ಚಿತ್ರ
Published On :
ಹಾಸನ: ಪೋಷಕರು ನೋಡಿದ ವರನ ಜೊತೆ ನಿಶ್ಚಿತಾರ್ಥ ಮಾಡಿಕೊಂಡು, ನಂತರ ಯಾರಿಗೂ ತಿಳಿಯದಂತೆ ಪ್ರಿಯಕರ ಜೊತೆ ಮದುವೆಯಾಗಿದ್ದ ನವವಧುವಿಗೆ ತಾಳಿ ಕಟ್ಟಿದ್ದ ಪ್ರೇಮಿ ಕೈಕೊಟ್ಟು ದುಬೈಗೆ ಓಡಿ ಹೋಗಿದ್ದು, ಅತ್ತ ನಿಶ್ಚಿತಾರ್ಥವೂ ಮುರಿದುಬಿದ್ದಿದ್ದು, ಹುಡುಗಿಯ ಪರಿಸ್ಥಿತಿ ನರಕ ಮಯವಾಗಿದೆ. 
ಹಾಸನದ ಆಲೂರು ತಾಲೂಕಿನ ಕಾಡ್ಲೂರು ಗ್ರಾಮದ ಹಿತನ್ ಎಂಬಾತ ತನ್ನ ಮನೆಯ ಪಕ್ಕದಲ್ಲಿದ್ದ ಹುಡುಗಿಯನ್ನು ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ. ನಂತರ ಆಕೆಯ ನಿಶ್ಚಿತಾರ್ಥ ನಡೆದ ನಂತರ ಆಕೆಯನ್ನು ನವೆಂಬರ್ 18ರಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಅರಶಿನ ಕೊನೆ ಕಟ್ಟಿ ವಿವಾಹವಾಗಿದ್ದಾನೆ.
ಬಳಿಕ ತನ್ನ ಮದುವೆ ವಿಚಾರ ಮನೆಗೆ ಗೊತ್ತಾದ ನಂತರ ಆತ ಯುವತಿಗೆ ನನಗೆ ದುಬೈನಲ್ಲಿ ಕೆಲಸ ಸಿಕ್ಕಿದೆ ಅಂತ ಹೇಳಿ ಪರಾರಿಯಾಗಿದ್ದಾನೆ. ಇದೀಗ ಯಾರ ಸಂಪರ್ಕಕ್ಕೂ ಸಿಗದೆ ಇರುವುದರಿಂದ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ನಿಶ್ಚಿತಾರ್ಥ ಮಾಡಿಕೊಂಡಿದ್ದವರಿಗೆ ಯುವತಿ ಗುಟ್ಟಾಗಿ ಮದುವೆಯಾಗಿರುವ ವಿಚಾರ ತಿಳಿದು ಮದುವೆಯನ್ನು ನಿಲ್ಲಿಸಿದ್ದಾರೆ. ಇದರಿಂದ ಸಹಜವಾಗಿಯೇ ಕಂಗಾಲಾಗಿರುವ ಲಾವಣ್ಯ ಹಾಗೂ ಪೋಷಕರು, ನಮಗೆ ನ್ಯಾಯಬೇಕು. ಮಗಳಿಗೆ ಮಹಾಮೋಸ ಮಾಡಿರುವ ಹಿತನ್ ಮರಳಿ ಬಂದು ಬಾಳು ಕೊಡಬೇಕು ಎಂದು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.