ಕಂಬಳ ಕ್ಷೇತ್ರದ ದಿಗ್ಗಜ ವಿನು ವಿಶ್ವನಾಥ ಶೆಟ್ಟಿ ವಿಧಿವಶ
ಕನ್ನಡ ನಾಡಿನ ಕಂಬಳ ಕ್ಷೇತ್ರದ ದಿಗ್ಗಜ ಮೂಡಬಿದಿರೆ ಕರಿಂಜೆ ವಿನು ವಿಶ್ವನಾವಥ್ ಶೆಟ್ಟಿ ಹೃದಾಯಾಘಾತದಿಂದ ಮೃತಪಟ್ಟಿದ್ದಾರೆ.

Published On :
ಮಂಗಳೂರು: ಕನ್ನಡ ನಾಡಿನ ಕಂಬಳ ಕ್ಷೇತ್ರದ ದಿಗ್ಗಜ ಮೂಡಬಿದಿರೆ ಕರಿಂಜೆ ವಿನು ವಿಶ್ವನಾವಥ್ ಶೆಟ್ಟಿ ಹೃದಾಯಾಘಾತದಿಂದ ಮೃತಪಟ್ಟಿದ್ದಾರೆ.
54 ವರ್ಷದ ಯಶಸ್ವಿ ಉದ್ಯಮಿ ವಿನು ವಿಶ್ವನಾಥ ಶೆಟ್ಟಿ ಅವರು ಹೊಕ್ಕಾಡಿಗೋಳಿ ಕಂಬಳ ಮುಗಿಸಿಕೊಂಡು ಹಿಂತಿರುಗುವ ಸಂದರ್ಭದಲ್ಲಿ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಹೊಕ್ಕಾಡಿಗೋಳಿಯಲ್ಲಿ ನಡೆದ ಕಂಬಳದಲ್ಲಿ ವಿನು ಅವರ ಒಡೆತನದ ಕೋಣಗಳು ಮೊದಲ ಸ್ಥಾನ ಪಡೆದಿದ್ದವು. ದುಬೈನಲ್ಲಿ ಯಶಸ್ವಿ ಉದ್ಯಮ ನಡೆಸುತ್ತಿದ್ದ ಶೆಟ್ಟಿಯವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಲಭಿಸಿತ್ತು.
ಕಂಬಳ ಉಳಿವಿಗಾಗಿ ನಡೆದ ಹೋರಾಟದಲ್ಲಿ ವಿನು ವಿಶ್ವನಾಥ ಶೆಟ್ಟಿ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇನ್ನು ವಿಶೇಷವೆಂದರೆ ಕಂಬಳದ ಕೋಣಗಳಿಗಾಗಿ ತಮ್ಮ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


