ವಿಷ ಪ್ರಸಾದ ದುರಂತ: 32 ಮಂದಿ ಡಿಸ್ಟಾರ್ಜ್, 17 ಮಂದಿ ಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ
ಸುಳ್ವಾಡಿ ದೇವಾಲಯ ವಿಷಪ್ರಸಾದ ದುರಂತದಲ್ಲಿ ಅಸ್ವಸ್ಥಗೊಂಡಿದ್ದ 32 ಮಂದಿ ಡಿಸ್ಚಾರ್ಜ್ ಆಗಿದ್ದಾರೆ, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 7 ಮಕ್ಕಳು ಸೇರಿದಂತೆ ...

Published On :
ಮೈಸೂರು: ಸುಳ್ವಾಡಿ ದೇವಾಲಯ ವಿಷಪ್ರಸಾದ ದುರಂತದಲ್ಲಿ ಅಸ್ವಸ್ಥಗೊಂಡಿದ್ದ 32 ಮಂದಿ ಡಿಸ್ಚಾರ್ಜ್ ಆಗಿದ್ದಾರೆ, ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ 32 ಮಂದಿಯಲ್ಲಿ 7 ಮಕ್ಕಳು ಡಿಸ್ಚಾರ್ಜ್ ಆಗಿದ್ದಾರೆ,
ನಿನ್ನೆ ಕೂಡ 21 ಮಂದಿ ಡಿಸ್ಚಾರ್ಜ್ ಆಗಿದ್ದು ಅವರನ್ನು ಅವರ ಮನೆಗಳಿಗೆ ಇಲಾಖೆಯ ವಾಹನಗಳಲ್ಲಿ ಕರೆದುಕೊಂಡು ಬಿಡಲಾಗಿದೆ, ಎಂದು ಜಿಲ್ಲಾ ಸರ್ಜನ್ ರಘುರಾಂ ಸರ್ವೇಗರ್ ಹೇಳಿದ್ದಾರೆ.
ಹೀಗಿದ್ದರೂ 17 ಮಂದಿ ಇನ್ನೂ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದುಸ, ವೆಂಟಿಲೇಟರ್ ಮುಖಾಂತರ ಉಸಿರಾಡುತ್ತಿದ್ದಾರೆ ಎಂದು ಕಾವೇರಿ ಆಸ್ಪತ್ರೆ ವೈದ್ಯ ಡಾ, ವೈದ್ಯನಾಥನ್ ಹೇಳಿದ್ದಾರೆ,.
ಕೊಬ್ಬಿನ ಕೋಶಗಳಲ್ಲಿರುವ ವಿಷ ಬಿಡುಗಡೆಯಾಗಿ, ನಿಧಾನವಾಗಿ ರಕ್ತನಾಳಕ್ಕೆ ಬಂದು ಸೇರುತ್ತದೆ.ಹೀಗಾಗಿ ಅವರಿಗೆ ವೆಂಟಿಲೇಟರ್ ಅಳವಡಿಸಬೇಕಾಗುತ್ತದೆ, ಶನಿವಾರ ಒಬ್ಬ ರೋಗಿಯ ವೆಂಟಿಲೇಟರ್ ತೆಗೆಯಲಾಗಿತ್ತು, ಆದರೆ ಕೂಡಲೇ ಆತನ ಪರಿಸ್ಥಿತಿ ಚಿಂತಾಜನಕವಾಯಿತು, ಹೀಗಾಗಿ ಮತ್ತೆ ವೆಂಟಿಲೇಟರ್ ಅಳವಡಿಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Childrenಮಕ್ಕಳುhospitalಆಸ್ಪತ್ರೆdischargedಡಿಸ್ಚಾರ್ಜ್Suluvadi poisoning incidentಸುಳ್ವಾಡಿ ವಿಷ ಪ್ರಸಾದ ದುರಂತ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


