ರಾಜ್ಯ

ಮಲ್ಯ ಯುನೈಟೆಡ್ ಬ್ರೂವರೀಸ್ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್

ಮಲ್ಯ ಒಡೆತನದ ಯುನೈಟೆಡ್ ಬ್ರೂವರೀಸ್ ಗೆ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಮಾಡಿರುವ ಸಾಲಕ್ಕೆ ಸಂಬಂಧ ಕಲ್ಪಿಸಬಾರದೆಂದು ಮಾಡಿದ್ದ ಮನವಿಯ ವಿಚಾರಣೆಯನ್ನು ಕರ್ನಾಟಕ....

ಮಲ್ಯ ಯುನೈಟೆಡ್ ಬ್ರೂವರೀಸ್ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್
ವಿಜಯ್ ಮಲ್ಯ
Published On :
ಬೆಂಗಳೂರು: ಯುನೈಟೆಡ್ ಬ್ರೂವರೀಸ್ ಗೆ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಮಾಡಿರುವ ಸಾಲಕ್ಕೆ ಸಂಬಂಧ ಕಲ್ಪಿಸಬಾರದೆಂದು ಮಾಡಿದ್ದ ಮನವಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ಮುಂದೂಡಿದೆ.ನ್ಯಾಯಾಂಗ ಮೇಲ್ವಿಚಾರಣೆಯಲ್ಲಿ ಸಾಲವನ್ನು ಮರಳಿ ಪಾವತಿ ಸಲುಜಾರಿ ನಿರ್ದೇಶನಾಲಯ ( (ಇಡಿ) ವಶಪಡಿಸಿಕೊಂಡ ರೂ. 13,900 ಕೋಟಿ ಮೌಲ್ಯದ ಸಂಸ್ಥೆಯ ಆಸ್ತಿಗಳನ್ನು ಮಾರುವ ಉದ್ದೇಶದೊಂದಿಗೆ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು.
ವಿಜಯ್ ಮಲ್ಯ ಭಾರತೀಯ ಬ್ಯಾಂಕುಗಳಲ್ಲಿ ಸುಮಾರು ಒಂಬತ್ತು ಸಾವಿರ ಕೋಟಿ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿದ್ದಾರೆ.ಅಲ್ಲದೆ ಯುಕೆ ನ್ಯಾಯಾಲಯದಲ್ಲಿ ದಿವಾಳಿ ಪ್ರಕರಣ ಎದುರಿಸುತ್ತಿರುವ ಮಲ್ಯ ವಿರುದ್ಧ ಭಾರತೀಯ ಬ್ಯಾಂಕ್ ಸಮೂಹ ಸಹ ಪ್ರಕರಣ ದಾಖಲಿಸಿದೆ.
ಇಡಿ ಹಾಗೂ ಸಿಬಿಐ ಒಟ್ಟಾಗಿ ಮಲ್ಯ ವಿರುದ್ಧ ಪ್ರಕರಣದ ವಿಚಾರಣೆ ನಡೆಸುತ್ತಿದ್ದು ಇದಾಗಲೇ ಯುಕೆನಿಂದ ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನವೆಂಬರ್ 22 ರಂದು ಯುಕೆ ಹೈಕೋರ್ಟ್ 88,000ಬ್ರಿಟೀಷ್ ಪೌಂಡ್ ಗಳನ್ನು ಯುಬಿಎಸ್ ಇನ್ವೆಸ್ಟ್ಮೆಂಟ್ ಬ್ಯಾಂಕ್ ಗೆ ಪಾವತಿಸುವಂತೆ ಮಲ್ಯಗೆ ಆದೇಶಿಸಿದೆ. ಮಲ್ಯ ಆ ಬ್ಯಾಂಕ್ ನಿಂದ 20.4 ಬ್ರಿಟೀಷ್ ಪೌಂಡ್ ಸಾಲ ಪಡೆದಿದ್ದು  ಅದಕ್ಕಾಗಿ ಅವರು ತನ್ನ ಲಂಡನ್ ಆಸ್ತಿಯಲ್ಲಿ ಅಡಮಾನ ಇಟ್ಟಿದ್ದರೆನ್ನಲಾಗಿದೆ.
ಕಳೆದ ಎರಡು ವರ್ಷಗಳಿಂದ ಮಲ್ಯ ಇಂಗ್ಲೆಂಡ್ ನಲ್ಲಿ ವಾಸವಿದ್ದಾರೆ.ಲಂಡನ್ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಲ್ಯ ಹಸ್ತಾಂತರ ಕುರಿತ ಪ್ರಕರಣ ಅಂತಿಮ ಹಂತದಲ್ಲಿದೆ. ಅಲ್ಲದೆಈ ವರ್ಷಾಂತದ ಒಳಗೆ ಕೋರ್ಟ್ ತೀರ್ಪು  ಬಿಡುಗಡೆ ಮಾಡುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.