ರಾಜ್ಯ

ಚೆನ್ನೈ ಆಸ್ಪತ್ರೆಯಿಂದ ಮಠಕ್ಕೆ ಮರಳಿದ ಸಿದ್ದಗಂಗಾ ಶ್ರೀಗಳು

ಅನಾರೋಗ್ಯದ ಕಾರಣ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗೆಯ ಶತಾಯುಷಿ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿ ಇಂದು ಪೂರ್ಣ ಚೇತರಿಸಿಕೊಂಡು ಮಠಕ್ಕೆ ಮರಳಿದ್ದಾರೆ.

ಚೆನ್ನೈ ಆಸ್ಪತ್ರೆಯಿಂದ ಮಠಕ್ಕೆ ಮರಳಿದ ಸಿದ್ದಗಂಗಾ ಶ್ರೀಗಳು
ಡಾ. ಶಿವಕುಮಾರ ಸ್ವಾಮೀಜಿ
Published On :
ಬೆಂಗಳೂರು: ಅನಾರೋಗ್ಯದ ಕಾರಣ ಚೆನ್ನೈನ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗೆಯ ಶತಾಯುಷಿ ಶ್ರೀಗಳಾದ ಡಾ. ಶಿವಕುಮಾರ ಸ್ವಾಮೀಜಿ ಇಂದು ಪೂರ್ಣ ಚೇತರಿಸಿಕೊಂಡು ಮಠಕ್ಕೆ ಮರಳಿದ್ದಾರೆ.
ಬುಧವಾರ ಬೆಳಿಗ್ಗೆ ಆಸ್ಪತ್ರೆಯಿಂದ ಶಿಸ್ಚಾರ್ಜ್ ಆಗಿದ್ದ ಶ್ರೀಗಳನ್ನು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲಾಗಿತ್ತು ಅಲ್ಲಿಂದ ಆಂಬುಲೆನ್ಸ್ ಮೂಲಕ ತುಮಕೂರಿನ ಸಿದ್ದಗಂಗಾ ಮಠಕ್ಕೆ ತೆರಳಿದರು.
ಪಿತ್ತಕೋಶದ ಸೋಂಕಿನಿಂದ ಬಳಲುತ್ತಿದ್ದ ಸಿದ್ದಗಂಗಾ  ಶ್ರೀಗಳನ್ನು ಚೆನ್ನೈನ ರೇಲಾ ಆಸ್ಪತ್ರೆಗೆ ದಾಕಲಿಸಲಾಗಿತ್ತು. ಕಳೆದ 12 ದಿನಗಳಿಂಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಶ್ರೀಗಳು ಸಂಪೂರ್ಣ ಚೇತರಿಸಿಕೊಂಡಿದ್ದು ಇದೀಗ ಮಠಕ್ಕೆ ಹಿಂತಿರುಗಿದ್ದಾರೆ.
ಈ ಸಮಯ ಮಾದ್ಯಮದವರೊಡನೆ ಮಾತನಾಡಿದ ರೇಲಾ ಆಸ್ಪತ್ರೆ ಮುಖ್ಯಸ್ಥ ಡಾ. ಮಹಮದ್ ರೇಲಾ "ಇದು ಖುಷಿಯ ವಿಚಾರ, ಇದೊಂದು ಪವಾಡವೂ ಹೌದು" ಎಂದಿದ್ದಾರೆ.
ದರ್ಶನ ಇಲ್ಲ
ಮಠಕ್ಕೆ ಶ್ರೀಗಳು ಆಗಮಿಸಿದ್ದರೂ ಸಹ ಭಕ್ತರಿಗೆ ದರ್ಶನದ ಅವಕಾಶ ಇಲ್ಲ ಎಂದು ಕಿರಿಯ ಶ್ರೀಗಳು ಹೇಳಿದ್ದಾರೆ.ಶ್ರೀಗಳಿಗೆ ಇನ್ನೂ ಹತ್ತರಿಂದ ಇಪ್ಪತ್ತು ದಿನ ವಿಶ್ರಾಂತಿಯ ಅಗತ್ಯವಿದೆ.ಈ ಕಾರಣ ದರ್ಶನ ನೀಡುವುದು ಕಠಿಣವಾಗಲಿದೆ ಎಂದು ಅವರು ಹೇಳಿದರು.\

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.