ರಾಜ್ಯ

ಸಕ್ಕರೆ ಕಾರ್ಖಾನೆಗಳಲ್ಲಿ ಇಂತಹಾ ದುರಂತ ಇದೇ ಮೊದಲು, ಇದೊಂದು ಆಕಸ್ಮಿಕ: ಸತೀಶ್ ಶುಗರ್ಸ್ ಎಂಡಿ

ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿ ಹಿಂದೆಂದೂ ಇಂತಹಾ ಸ್ಪೋಟ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಅನಾಹುತ ಸಂಭವಿಸಿದೆ.

ಸಕ್ಕರೆ ಕಾರ್ಖಾನೆಗಳಲ್ಲಿ ಇಂತಹಾ ದುರಂತ ಇದೇ ಮೊದಲು, ಇದೊಂದು ಆಕಸ್ಮಿಕ: ಸತೀಶ್ ಶುಗರ್ಸ್ ಎಂಡಿ
ಬಾಗಲಕೋಟೆಯ ಡಿಸ್ಟಿಲರಿ ಘಟಕದಲ್ಲಿ ಸ್ಪೋಟ ಸಂಭವಿಸಿ 6 ಜನ ಸಾವು
Published On :
ಬಾಗಲಕೋಟೆ: ರಾಜ್ಯದಲ್ಲಿನ ಸಕ್ಕರೆ ಕಾರ್ಖಾನೆಗಳಲ್ಲಿ ಹಿಂದೆಂದೂ ಇಂತಹಾ ಸ್ಪೋಟ ನಡೆದಿರಲಿಲ್ಲ. ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಅನಾಹುತ ಸಂಭವಿಸಿದೆ. ಹಲವು ಕಾರ್ಖಾನೆಯ ಮಾಲೀಕರು ಇದರಿಂಡ ಆಘಾತಗೊಂಡಿದ್ದಾರೆ ಎಂದು ಗೋಕಾಕದ ಸತೀಶ್ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ್ವಾಡೆನ್ನವರ್ ಹೇಳಿದ್ದಾರೆ.
ಪತ್ರಿಕೆಯೊಡನೆ ಮಾತನಾಡಿದ ಸಿದ್ದಾರ್ಥ್ "ಇಂತಹಸ್ಪೋಟ ಬಹಳವೇ ವಿರಳ. ಈ ಸೂಕ್ಷ್ಮ ಘಟಕವನ್ನು ಪ್ರತಿದಿನವೂ ಮುಖ್ಯ ಇಂಜಿನಿಯರ್ ಗಳು ಪರಿಶೀಲನೆ ನಡೆಸುತ್ತಾರೆ.ಹಾಗಾಗಿ ನಾನು ಹೇಳುವುದೆಂದರೆ ಈ ಅನಾಹುತಕ್ಕೆ ಕಾರ್ಖಾನೆ ಉದ್ಯೋಗಿಗಳ ಅಥವಾ ಮಾಲೀಕರ ನಿರ್ಲಕ್ಷವು ಕಾರಣವಲ್ಲ." ಎಂದರು.
"ವರ್ಷದಲ್ಲಿ ಆರು ತಿಂಗಳುಗಳ ಕಾಲ ಮಾತ್ರವೇ ಸಕ್ಕರೆ ಕಾರ್ಖಾನೆಗಳು ಸಕ್ರಿಯವಾಗಿರುತ್ತವೆ. ಉಳಿದ ಆರು ತಿಂಗಳು ಕಾರ್ಯನಿರ್ವಹಿಸುವುದಿಲ್ಲ. ಆ ವೇಳೆ ಉದ್ಯೋಗಿಗಳು ಪ್ರತಿ ಯಂತ್ರವನ್ನು ನಿಯಮಿತವಾಗಿ ಪರಿಶೀಲಿಸುತ್ತಾರೆ. ಯಾವುದೇ ಸಮಸ್ಯೆ ಕಂಡುಬಂದರೆ ಅದನ್ನು ತಕ್ಷಣವೇ ನಿವಾರಿಸಲಾಗುತ್ತದೆ"
ಡಿಸ್ಟಿಲರಿ ಸಂಸ್ಕರಣಾ ಘಟಕ ನಡೆಅಲು ಎಲ್ಲಾ ಸಕ್ಕರೆ ಕಾರ್ಖಾನೆಗಳಿಗೆ ಸರ್ಕಾರದ ಅನುಮತಿ ಇರುತ್ತದೆ. ಹಾಗೆಯೇ  ಸಕ್ಕರೆ ಕಾರ್ಖಾನೆಗಳು ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳುತ್ತವೆ ಎಂದು ಖಾತ್ರಿಯಾದ ಬಳಿಕವೇ ಸರ್ಕಾರ ಅನುಮತಿ ನೀಡುತ್ತದೆ.ಹೀಗಾಗಿ ಕಾರ್ಖಾನೆಯ ಸ್ಪೋಟ ಆಕಸ್ಮಿಕ ಘಟನೆಯಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.